Asianet Suvarna News Asianet Suvarna News

ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಫ್ರೀ ಊಟ ಇಲ್ಲ!

  • ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಚಿತ ಊಟ ಒದಗಿಸುತ್ತಿದ್ದ ಇಂದಿರಾ ಕ್ಯಾಂಟೀನ್
  • ಉಚಿತ ಊಟದ ದುರ್ಬಳಕೆ, ಮತ್ತು ಜನಜಂಗುಳಿ ಹಿನ್ನೆಲೆ ಫ್ರೀ ಊಟ ಸ್ಟಾಪ್
  • ಇನ್ಮುಂದೆ ಹಣ ಪಾವತಿಸಿದರೆ ಊಟ ತಿಂಡಿ

ಬೆಂಗಳೂರು (ಏ.03): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಉಚಿತ ಊಟ ಒದಗಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಹಣ ಪಾವತಿಸಿ ಊಟ ಮಾಡಬೇಕು. ಉಚಿತ ಊಟ ದುರ್ಬಳಕೆಯಾಗುತ್ತಿರುವ ಬೆನ್ನಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ಉಚಿತ ಊಟಕ್ಕಾಗಿ ಜನ ಸಾಮಾಜಿಕ ಅಂತರವನ್ನೂ ಕಾಪಾಡದೇ ಮುಗಿ ಬೀಳುತ್ತಿದ್ದರು. ಇನ್ಮುಂದೆ ಹಣ ಪಾವತಿಸಿದರೆ ಮಾತ್ರ ಊಟ-ತಿಂಡಿ ಸಿಗಲಿದೆ.

ಬಡವರ ಅನ್ನಕ್ಕೆ ಕನ್ನ! ಬಿಜೆಪಿ ಕಾರ್ಯಕರ್ತರ ಪಾಲಾಗ್ತಿದೆ ಇಂದಿರಾ ಕ್ಯಾಂಟೀನ್ ಊಟ...