Asianet Suvarna News Asianet Suvarna News

Bollywood :ಕೀಟಗಳಿಗೆ ಬಾಲಿವುಡ್ ವಿಲನ್ಸ್ ಹೆಸರು: ಗದಗ ಸಂಶೋಧಕರ ಹೊಸ ಐಡಿಯಾ

ದಶಕಗಳ ಹಿಂದೆ ರಂಜಿಸಿದ್ದ ಬಾಲಿವುಡ್ ವಿಲನ್ ಪಾತ್ರಗಳ ಹೆಸರುಗಳು, ಇದೀಗ ಮತ್ತೆ ಸುದ್ದಿಯಾಗುತ್ತಿವೆ. ಕೆಲ ಕೀಟಗಳಿಗೆ ಬಾಲಿವುಡ್ ವಿಲನ್'ಗಳ ಹೆಸರು ಇಟ್ಟಿದ್ದಾರೆ ಸಂಶೋಧಕರು. 

First Published Feb 10, 2023, 3:02 PM IST | Last Updated Feb 10, 2023, 4:42 PM IST

ಯಾವುದೇ ಹೊಸ ಜೀವಿ ಪತ್ತೆಯಾದಾಗ ಲ್ಯಾಟಿನ್ ಅಥವಾ ಗ್ರೀಕ್ ಪದ ಬಳಸಿ ವೈಜ್ಞಾನಿಕ ನಾಮಕರಣ ಮಾಡ್ತಾರೆ. ಬಹುತೇಕ ಕೀಟಗಳಿಗೆ ಭಾರತದ ಹೆಸರುಗಳೇ ಇಲ್ಲ. ಆದ್ರೆ ಈ ಸಮಸ್ಯೆಗೆ ಮುಕ್ತಿ ಕೊಡೋಕೆ ಗದಗ ಜಿಲ್ಲೆಯ ಸಂಶೋಧಕರು ಹೊಸ ಐಡಿಯಾ ಮಾಡಿದ್ದಾರೆ. ಹೊಸದಾಗಿ ಕಂಡುಹಿಡಿದ ಕೀಟಗಳಿಗೆ ಭಾರತದ ಪ್ರಸಿದ್ಧ ಸಿನಿಮಾಗಳ ಪಾತ್ರಗಳ ಹೆಸರಿಡಲಾಗುತ್ತಿದೆ. ಸ್ಕಿಂಕ್ ಬಗ್ ಎಂಬ ಕೀಟಕದ ಮರಿಗೆ ಬಾಲಿವುಡ್'ನ ಹಲವಾರು ಸಿನಿಮಾಗಳಲ್ಲಿ ಇರೋ ರಾಮು ಕಾಕಾ ಹೆಸರನ್ನು ನಾಮಕರಣ ಮಾಡಿದ್ದಾರೆ. ಅದೇ ರೀತಿ ಎಫ್ ಫ್ಲೈ ಎಂಬ ಕೀಟಕ್ಕೆ ಅಮರೇಶ್ ಪುರಿ ಅವರ ಮೊಗಾಂಬೊ ಪಾತ್ರದ ಹೆಸರನ್ನು ಇಡಲಾಗಿದೆ. ಕೀಟಗಳಿಗೆ ನೆನಪಿನಲ್ಲಿ ಉಳಿಯೋ ಹೆಸರು ಹುಡುಕೋ ಕೆಲಸವನ್ನು ಸಂಶೋಧಕರು ಮಾಡುತ್ತಿದ್ದಾರೆ.