Asianet Suvarna News Asianet Suvarna News

Kichcha Sudeep: ಸಾಹೋ ನಿರ್ದೇಶಕ ಸೂಜಿತ್ ಜೊತೆ ಸಿನಿಮಾ ಮಾಡಲಿದ್ದಾರಾ ಕಿಚ್ಚ!

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಭಾರತೀಯ ಚಿತ್ರರಂಗದ ಟಾಪ್ ಒನ್ ಡೈರೆಕ್ಟರ್ ರಾಜಮೌಳಿ ಕಿಚ್ಚನಿಗೆ ಈಗಾಗಲೇ ಆಕ್ಷನ್ ಕಟ್ ಹೇಳಿದ್ದಾರೆ. ಇದೀಗ ಸುದೀಪ್ ಹಿಂದೆ ಟಾಲಿವುಡ್ ಸ್ಟಾರ್ಸ್ ಡೈರೆಕ್ಟರ್ ಸುತ್ತುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ನ (Sandalwood) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆದವರು. ಭಾರತೀಯ ಚಿತ್ರರಂಗದ ಟಾಪ್ ಒನ್ ಡೈರೆಕ್ಟರ್ ರಾಜಮೌಳಿ (Rajamouli) ಕಿಚ್ಚನಿಗೆ ಈಗಾಗಲೇ ಆಕ್ಷನ್ ಕಟ್ ಹೇಳಿದ್ದಾರೆ. ಇದೀಗ ಸುದೀಪ್ ಹಿಂದೆ ಟಾಲಿವುಡ್ ಸ್ಟಾರ್ಸ್ ಡೈರೆಕ್ಟರ್ ಸುತ್ತುತ್ತಿದ್ದಾರೆ. ಹೌದು! ಬಾಹುಬಲಿ ಪ್ರಭಾಸ್‌ ಅವರ 'ಸಾಹೋ' ಸಿನಿಮಾ ನಿರ್ದೇಶನ ಮಾಡಿದ್ದ ಡೈರೆಕ್ಟರ್ ಸೂಜಿತ್ (Sujeeth) ಸುದೀಪ್‌ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ಕನ್ನಡ ಮಾತ್ರ ಅಲ್ಲ ಪರಭಾಷಾ ಸಿನಿಮಾ ಮೇಕರ್‌ಗಳಿಗೂ ಅಚ್ಚುಮೆಚ್ಚು. 

83 Movie Team In Bengaluru: ಸಿನಿಮಾ ಮೇಕಿಂಗ್‌ ಬಗ್ಗೆ ರಿವೀಲ್ ಮಾಡಿದ ರಣವೀರ್ ಸಿಂಗ್!

ಕನ್ನಡ ಸಿನಿಮಾಗಳ ಜೊತೆ ಹಿಂದಿ, ತೆಲುಗು, ತಮಿಳಿನಲ್ಲಿ ಅಭಿನಯ ಚಕ್ರವರ್ತಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಹೀಗಾಗಿ ಈ ಪ್ಯಾನ್ ಇಂಡಿಯಾ ಆರಡಿ ಕಟೌಟ್‌ಗೆ ಆಕ್ಷನ್ ಕಟ್ ಹೇಳೋಕೆ ಭಾರತೀಯ ಚಿತ್ರರಂಗದ ಟಾಪ್ ಡೈರೆಕ್ಟರ್ಸ್ ಹಿಂದೆ ಬೀಳೋದು ಕಾಮನ್. ಈ ಭಾರಿ ಕಿಚ್ಚನ ಜೊತೆ ಸಿನಿಮಾ ಮಾಡೋದಕ್ಕೆ 'ಸಾ'ಹೋ ಸಿನಿಮಾವನ್ನ ಪ್ರಪಂಚಕ್ಕೆ ತಲುಪಿಸಿದ್ದ ಸೂಜಿತ್ ಸಿದ್ಧರಾಗಿದ್ದಾರೆ ಅಂತ ತೆಲುಗು ಚಿತ್ರರಂಗದಲ್ಲಿ ಸುದ್ದಿ ಹರಿದಾಡ್ತಿದೆ. ಇತ್ತೀಚೆಗಷ್ಟೆ ಸುದೀಪ ಅವರನ್ನು ಭೇಟಿ ಮಾಡಿರುವ ಸೂಜಿತ್ ಸಿನಿಮಾದ ಒನ್ ಲೈನ್ ಸ್ಟೋರಿ ಹೇಳಿದ್ದಾರಂತೆ. ಹೀಗಾಗಿ ಕಿಚ್ಚ ಏನಾದರೂ ಸೂಜಿತ್ ಜೊತೆ ಸಿನಿಮಾ ಒಕೆ ಮಾಡಿದರೆ ಆ ಚಿತ್ರ ಹೇಗಿರುತ್ತೆ ಅನ್ನೋ ದೊಡ್ಡ ಕುತೂಹಲ ಸುದೀಪ್ ಅಭಿಮಾನಿಗಳಲ್ಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories