ಸಲ್ಮಾನ್ ಖಾನ್ ಜೊತೆ ರಶ್ಮಿಕಾಗೂ ಟೈಟ್ ಸೆಕ್ಯೂರಿಟಿ: ಸಿಕಂದರ್ ಸಿನಿಮಾ ಸೆಟ್​​ನಲ್ಲಿ ಏನಾಯ್ತು?

ಬಿಷ್ಣೋಯ್ ಗ್ಯಾಂಗ್​ನಿಂದ ಪ್ರಾಣಭೀತಿ ಎದುರಿಸ್ತಾ ಇರೋ ಬಾಲಿವುಡ್​​ ಟೈಗರ್​ ಸುತ್ತ  ಭದ್ರತೆಯ ಕೋಟೆಯನ್ನೇ ಕಟ್ಟಲಾಗಿದೆ. ಸದ್ಯ ಬಿಗ್ ಬಾಸ್ ಶೂಟಿಂಗ್​ನಲ್ಲರೋ ಸಲ್ಮಾನ್ ಸಿಕಂದರ್ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಬೇಕಿದೆ.

First Published Oct 25, 2024, 4:33 PM IST | Last Updated Oct 25, 2024, 4:33 PM IST

ಬಿಷ್ಣೋಯ್ ಗ್ಯಾಂಗ್​ನಿಂದ ಪ್ರಾಣಭೀತಿ ಎದುರಿಸ್ತಾ ಇರೋ ಬಾಲಿವುಡ್​​ ಟೈಗರ್​ ಸುತ್ತ  ಭದ್ರತೆಯ ಕೋಟೆಯನ್ನೇ ಕಟ್ಟಲಾಗಿದೆ. ಸದ್ಯ ಬಿಗ್ ಬಾಸ್ ಶೂಟಿಂಗ್​ನಲ್ಲರೋ ಸಲ್ಮಾನ್ ಸಿಕಂದರ್ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಬೇಕಿದೆ. ಸಿಕಂದರ್​ನಲ್ಲಿ ಸಲ್ಮಾನ್ ಜೊತೆಯಾಗಿ ನಮ್ಮ ಕಿರಿಕ್ ಕ್ವೀನ್ ರಶ್ಮಿಕಾ ನಟಿಸಬೇಕಿದ್ದು, ರಶ್ಮಿಕಾಗೂ ಈಗ ಟೈಟ್ ಸೆಕ್ಯೂರಿಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಬಾಲಿವುಡ್​ ಟೈಗರ್ ಸಲ್ಮಾನ್​ ಖಾನ್​ಗೆ ಜೀವಬೆದರಿಕೆ ಇರೋದು ನಿಮಗೆ ಗೊತ್ತೇ ಇದೆ. ಇತ್ತೀಚಿಗೆ ಮಹಾರಾಷ್ಟ್ರದ ಮಾಜಿ ಶಾಸಕ ಬಾಬಾ ಸಿದ್ದಿಕಿಯನ್ನ ಬಿಷ್ಣೋಯ್ ಗ್ಯಾಂಗ್ ಹತ್ಯೆ ಮಾಡಿದ ಮೇಲೆ ಸಲ್ಮಾನ್ ಸೆಕ್ಯೂರಿಟಿಯನ್ನ ಸಿಕ್ಕಾಪಟ್ಟೆ ಟೈಟ್ ಮಾಡಲಾಗಿದೆ. ಒಂದು ಕಡೆ ಸರ್ಕಾರ ವೈ ಪ್ಲಸ್ ಭದ್ರತೆ ಕೊಟ್ರೆ, ಸಲ್ಮಾನ್ ಖಾಸಗಿ ಭದ್ರತಾ ಪಡೆಯನ್ನೂ ಜೊತೆಗಿಟ್ಟುಕೊಂಡಿದ್ದಾರೆ. 

ಅತ್ಯಾಧುನಿಕ ಬುಲೆಟ್​ ಪ್ರೂಫ್ ಕಾರ್​ನಲ್ಲಿ ಓಡಾಡ್ತಾ ಇದ್ದಾರೆ. ಇನ್ನೂ ಇತ್ತೀಚಿಗೆ ಸಿಂಗಮ್ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಸಲ್ಮಾನ್ ಗೆ, ಸುತ್ತಲೂ ಬರೊಬ್ಬರಿ 120 ಜನ ಭದ್ರತಾ ಪಡೆಯಿಂದ ಸೆಕ್ಯೂರಿಟಿ ನೀಡಲಾಗಿತ್ತು. ಪೊಲೀಸರು, ಖಾಸಗಿ ಭದ್ರತಾ ಪಡೆ ಜೊತೆಗೆ ಸಿನಿಮಾ ತಂಡ ಕೂಡ ಬೌನ್ಸರ್​​ಗಳನ್ನ ಅರೇಂಜ್ ಮಾಡಿತ್ತು. ಈ ಭದ್ರತೆಯ ಕೋಟೆಯ ನಡೆವೆಯೇ ಸಲ್ಮಾನ್ ಚಿತ್ರೀಕರಣ ಮಾಡಿ ಮುಗಿಸಿದ್ರು. ಸದ್ಯ ಬಿಗ್ ಬಾಸ್ ಶೂಟಿಂಗ್ ಸೆಟ್​​ನಲ್ಲೂ ಸಲ್ಮಾನ್​ಗೆ ಟೈಟ್ ಸೆಕ್ಯೂರಿಟಿ ನೀಡಲಾಗ್ತಾ ಇದೆ. ಜೊತೆಗೆ ಸದ್ಯದಲ್ಲೇ ಸಲ್ಮಾನ್ ನಟನೆಯ ಸಿಕಂದರ್ ಸಿನಿಮಾ ಶೂಟಿಂಗ್ ಶುರುವಾಗಲಿದ್ದು , ಸಿಕಂದರ್ ಟೀಮ್​ ಕೂಡ ಭದ್ರತೆಗೆ ಪ್ರತ್ಯೇಕ ವ್ಯವಸ್ಥೆ ಮಾಡ್ತಾ ಇದೆ. ಹೌದು ಸಲ್ಮಾನ್ ಖಾನ್ ಮೇಲೆ ಯಾವಾಗ ಬೇಕಾದ್ರೂ ಅಟ್ಯಾಕ್ ಆಗುವ ಚಾನ್ಸ್ ಇರೋದ್ರಿಂದ , ಇಡೀ ಚಿತ್ರತಂಡ ಭೀತಿಯಲ್ಲಿ ಮುಳುಗಿದೆ. 

ಸೋ ಸಿಕಂದರ್ ಮೇಕರ್ಸ್ ಇಡೀ ಚಿತ್ರತಂಡಕ್ಕೆ ಸೆಕ್ಯೂರಿಟಿ ಅರೇಂಜ್ ಮಾಡಿದ್ದಾರೆ. ಮೂಲಗಳ ಪ್ರಕಾರ ಶೂಟಿಂಗ್ ಮಾಡುವವರಿಗಿಂತ ಗನ್ ಹಿಡಿದು ಸೆಕ್ಯೂರಿಟಿ ಕೊಡುವವರೇ ಸೆಟ್​​ನಲ್ಲಿ ಜಾಸ್ತಿ ಇರಲಿದ್ದಾರೆ. ಈ ಭದ್ರತೆಯ ಕೋಟೆ ನಡುವೆಯೇ ನಿರ್ದೇಶಕ ಎ,ಆರ್ ಮುರುಗದಾಸ್ ಸಿನಿಮಾ ಶೂಟಿಂಗ್ ಮಾಡಬೇಕಿದೆ. ಅಸಲಿಗೆ ಸಿಕಂದರ್ ಸಿನಿಮಾದಲ್ಲಿ ಸಲ್ಲುಮಿಯಾಗೆ ನಾಯಕಿಯಾಗೋ ಚಾನ್ಸ್ ಸಿಕ್ಕಾಗ ರಶ್ಮಿಕಾ ಸಖತ್ ಖುಷ್ ಆಗಿದ್ರು. ಸೂಪರ್ ಸ್ಟಾರ್ ಸಲ್ಮಾನ್ ಜೊತೆ ನಟಿಸಿದ್ರೆ ತಾನು ಇಂಡಿಯನ್ ಸಿನಿಇಂಡಸ್ಟ್ರಿಯಲ್ಲಿ ನಂ.1 ಆದಂತೆ ಅಂತಲೇ ಎಣಿಸಿದ್ರು. ಆದ್ರೀಗ ಸಲ್ಮಾನ್ ಜೊತೆ ನಟಿಸೋಕೆ ಭಯಭೀಳುವ ಪರಿಸ್ಥಿತಿ ಬಂದಿದೆ. ಶೂಟಿಂಗ್ ಮಾಡೋ ಟೈಮ್​ನಲ್ಲಿ ಯಾರಾದ್ರೂ ಮಾಡಿದ್ರೆ ಏನಪ್ಪಾ ಮಾಡೋದು ಅಂತ ರಶ್ಮಿಕಾಗೆ ಟೆನ್ಶನ್ ಶುರುವಾಗಿದೆ.

Read More...