Asianet Suvarna News Asianet Suvarna News

ನನ್ನ ಬೆತ್ತಲೆ ವಿಡಿಯೋ-ಫೋಟೋ ಮಾರಾಟ ಮಾಡಿದ್ದಾನೆ; ಆದಿಲ್ ವಿರುದ್ಧ ರಾಖಿ ಸ್ಫೋಟಕ ಆರೋಪ

ಪತಿ ಆದಿಲ್ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿರುವ ರಾಖಿ ಸಾವಂತ್ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. 

First Published Feb 12, 2023, 5:00 PM IST | Last Updated Feb 12, 2023, 5:00 PM IST

ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮದುವೆ ಬಳಿಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಆದಿಲ್ ಖಾನ್ ನನ್ನು ಮದುವೆಯಾಗಿರುವ ರಾಖಿ ಇದೀಗ ಆದಿಲ್ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಆದಿಲ್ ಮತ್ತು ರಾಖಿ ಮದುವೆ ರಂಪಾಟ ಸದ್ಯಕ್ಕೆ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಪತಿ ಆದಿಲ್ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿರುವ ರಾಖಿ ಸಾವಂತ್ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಆದಿಲ್ ಖಾನ್‌ಗೆ ಬೇರೆ ಯುವತಿಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆದಿಲ್ ಹಣ ದೋಚಿಕೊಂಡು ಹೋಗಿದ್ದಾನೆ ಎಂದು ದೂರು ನೀಡಿ ಅರೆಸ್ಟ್ ಕೂಡ ಮಾಡಿಸಿದ್ರು. ಇದೀಗ ಮತ್ತೊಂದು ಆರೋಪ ಮಾಡಿರುವ ರಾಖಿ, ತನ್ನ ಬೆತ್ತಲೆ ಫೋಟೋ ಮತ್ತು ವಿಡಿಯೋವನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.