Asianet Suvarna News Asianet Suvarna News

Sai Pallavi: ಸಿನಿಮಾರಂಗಕ್ಕೆ ಕಾಲಿಟ್ಟ ನ್ಯಾಚುರಲ್​​ ಸ್ಟಾರ್ ಸಹೋದರಿ ಪೂಜಾ ಕಣ್ಣನ್

ಸಾಯಿ ಪಲ್ಲವಿ ತಂಗಿ ಪೂಜಾ ಕಣ್ಣನ್​ ಅವರು ಚಿತ್ತಿರ ಚೆವ್ವಾನಂ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ ಅವರ ಜೊತೆ ಪೂಜಾ ಕಣ್ಣನ್​ ಅಭಿನಯಿಸಿದ್ದಾರೆ.

ಡ್ಯಾನ್ಸ್​ ರಿಯಾಲಿಟಿ ಶೋ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ನಟಿ ಸಾಯಿ ಪಲ್ಲವಿ (Sai Pallavi) ಇಂದು ಬಹುಬೇಡಿಕೆಯ ನಟಿ. ತನ್ನ ಸಹಜ ಸೌಂದರ್ಯ, ಸಹಜ ನಟನೆಯಿಂದ ನ್ಯಾಚುರಲ್​​ ಸ್ಟಾರ್​ ಎನಿಸಿಕೊಂಡಿದ್ದಾರೆ. ಇದೀಗ ಅವರ ಸಹೋದರಿ ಕೂಡಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು! ಸಾಯಿ ಪಲ್ಲವಿ ತಂಗಿ ಪೂಜಾ ಕಣ್ಣನ್​ (Pooja Kannan) ಅವರು 'ಚಿತ್ತಿರ ಚೆವ್ವಾನಂ' (Chithirai Sevvanam) ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಮೋಷನ್ ಪೋಸ್ಟರ್ (Motion Poster) ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ (Samuthirakani) ಅವರ ಜೊತೆ ಪೂಜಾ ಕಣ್ಣನ್​ ಅಭಿನಯಿಸಿದ್ದಾರೆ. ತಂದೆ-ಮಗಳ ಪಾತ್ರದಲ್ಲಿ ಈ ಜೋಡಿ ಕಾಣಿಸಿಕೊಳ್ಳಲಿದ್ದಾರೆ.

Sai Pallavi Sister: ಅಕ್ಕನಿಗೇ ಕಾಂಪಿಟೀಟರ್‌ ಆಗ್ತಾಳಾ ತಂಗಿ ಪೂಜಾ ಕಣ್ಣನ್!

ಸಾಹಸ ನಿರ್ದೇಶಕ ಸ್ಟಂಟ್​ ಸಿಲ್ವಾ (Stunt Silva) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಾಯಿ ಪಲ್ಲವಿ ಸಹೋದರಿಯ ಈ ಸಿನಿಮಾಗೆ ಎಲ್ಲ ಭಾಷೆಯ ಸ್ಟಾರ್​ ಕಲಾವಿದರಿಂದ ಬೆಂಬಲ ಸಿಗುತ್ತಿದೆ. ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್ (Mohan Lal) ಮತ್ತು ಕಾಲಿವುಡ್​ ನಟ ಧನುಷ್ (Dhanush)​​​​ ಅವರು ಈ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಇನ್ನು ಸಾಯಿ ಪಲ್ಲವಿ ಮತ್ತು ಪೂಜಾ ಕಣ್ಣನ್​ ಅವರು ನೋಡಲು ಒಂದೇ ರೀತಿ ಇದ್ದು, ಅಕ್ಕಪಕ್ಕ ನಿಲ್ಲಿಸಿದರೆ ಅವಳಿ ಜವಳಿ ತರಹ ಕಾಣುತ್ತಾರೆ. ಒಟ್ಟಿನಲ್ಲಿ ಅಕ್ಕ ಸಾಯಿ ಪಲ್ಲವಿ ರೀತಿಯೇ ಪೂಜಾ ಕೂಡ ಚಿತ್ರರಂಗದಲ್ಲಿ ಮಿಂಚುತ್ತಾರಾ ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories