Asianet Suvarna News Asianet Suvarna News

ಅಭಿಮಾನಿಗಳನ್ನು ತಳ್ಳಿದ ಸಂಜಯ್​ ದತ್: ನೀನು ರಿಯಲ್ ಖಳ ನಾಯಕ್ ಎಂದ ನೆಟ್ಟಿಗರು

ಬಾಲಿವುಡ್‌ನ ನಾಯಕ ನಟ ಸಂಜಯ್ ದತ್ ಇತ್ತೀಚೆಗೆ ತಮ್ಮ 65ನೇ ಜನ್ಮ ದಿನ ಸೆಲೆಬ್ರೇಟ್ ಮಾಡಿದ್ದಾರೆ. ಎಲ್ಲೆಡೆ ಅಭಿಮಾನಿಗಳು, ಸಿನಿಮಾದ ಸ್ನೇಹಿತರು, ಆಪ್ತರು ಶುಭಾಶಯ ಕೂಡ ತಿಳಿಸಿದ್ದರು. ಆದರೆ ಆ ಒಂದು ಘಟನೆಯಿಂದ ಸಂಜಯ್​ ದತ್​ಗೆ ನೀನು ರಿಯಲ್ ಖಳ ನಾಯಕ್ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

First Published Aug 1, 2024, 5:23 PM IST | Last Updated Aug 1, 2024, 5:40 PM IST

ಬಾಲಿವುಡ್‌ನ ನಾಯಕ ನಟ ಸಂಜಯ್ ದತ್ ಇತ್ತೀಚೆಗೆ ತಮ್ಮ 65ನೇ ಜನ್ಮ ದಿನ ಸೆಲೆಬ್ರೇಟ್ ಮಾಡಿದ್ದಾರೆ. ಎಲ್ಲೆಡೆ ಅಭಿಮಾನಿಗಳು, ಸಿನಿಮಾದ ಸ್ನೇಹಿತರು, ಆಪ್ತರು ಶುಭಾಶಯ ಕೂಡ ತಿಳಿಸಿದ್ದರು. ಆದರೆ ಆ ಒಂದು ಘಟನೆಯಿಂದ ಸಂಜಯ್​ ದತ್​ಗೆ ನೀನು ರಿಯಲ್ ಖಳ ನಾಯಕ್ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಹೌದು! ಮುಂಬೈಯಲ್ಲಿ ಸಂಜಯ್ ದತ್ ಹೋಟೆಲ್‌ನಿಂದ ಹೊರ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಸಂಜಯ್ ದತ್ ಬಳಿ ಬಂದು ಮುತ್ತಿಕೊಂಡಿದ್ದಾರೆ, ಮೊದಲು ಕೆಲವರಿಗೆ ಸೆಲ್ಫಿ ಕೊಟ್ಟಿದ್ದಾರೆ. ಆದರೆ, ಅದು ಜಾಸ್ತಿ ಆದಂತೆ ಮುಂದೆ ಮುಂದೆ ಸಾಗಿ ಬಂದಿದ್ದಾರೆ. ಆಗ ಕೆಲವ್ರು ಅಡ್ಡ ಕೂಡ ಬಂದಿದ್ದಾರೆ. ಆ ನಂತರ ಸಂಜಯ್ ಅಭಿಮಾನಿಗಳನ್ನು ತಳ್ಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.