Asianet Suvarna News Asianet Suvarna News

ಚಿಕ್ಕಮಗಳೂರಲ್ಲೊಂದು ಮಾದರಿ ಸ್ಟೋರಿ: ಸುದೀರ್ಘ ಪೊಲೀಸ್ ಸೇವೆಗೆ ಇನ್ಸ್ ಪೆಕ್ಟರ್ ಕೊಟ್ಟ ಗಿಫ್ಟ್

ಚಿಕ್ಕಮಗಳೂರು(ಡಿ. 05)   ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿ ಎಎಸ್ ಐ ಆಗಿ ನಿವೃತ್ತಿ ಹೊಂದಿದ ಮಹೇಂದ್ರಪ್ಪ ಅವರಿಗೆ ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯಿಂದ ಆತ್ಮೀಯವಾಗಿ ಬಿಳ್ಕೊಡುಗೆ ನೀಡಿದರು.

ಚಿಕ್ಕಮಗಳೂರು(ಡಿ. 05)   ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸಿ ಎಎಸ್ ಐ ಆಗಿ ನಗರ ಪೊಲೀಸ್ ಠಾಣೆಯಲ್ಲಿ ನಿವೃತ್ತಿ ಹೊಂದಿದ ಮಹೇಂದ್ರಪ್ಪ ಅವರಿಗೆ ಚಿಕ್ಕಮಗಳೂರಿನ ನಗರ ಪೊಲೀಸ್ ಠಾಣೆಯಿಂದಾ ಆತ್ಮೀಯವಾಗಿ ಬಿಳ್ಕೊಡುಗೆ ನೀಡಿದರು.

ನಗರ ಠಾಣೆಯಲ್ಲಿ ಎಎಸ್ ಐ ಮಹೇಂದ್ರಪ್ಪ ಅವರಿಗೆ ಆತ್ಮೀಯವಾಗಿ ಠಾಣೆಯ ಸಿಬ್ಬಂದಿ ಸನ್ಮಾನ ಮಾಡಿ ಗೌರವ ಸಲ್ಲಿಸಿ ವಿಶೇಷ ಉಡುಗೂರೆಯನ್ನು ನೀಡಿದರು. ವಿಶೇಷವಾಗಿ ನಗರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸಲೀಂ ಅವರು ಖುದ್ದಾಗಿ ಮಹೇಂದ್ರಪ್ಪ ಅವರನ್ನು ಠಾಣೆಯಿಂದ ಹೊರ ಕರೆದುಕೊಂಡು ಬಂದು ಜೀಪಿನಲ್ಲಿ ಅವರು ತಾವು ಕೂರುವ ಜಾಗದಲ್ಲಿ ತಂದು ಕೂರಿಸಿದರು.

ಒಂದು ಕ್ಷಣ ಮಹೇಂದ್ರಪ್ಪಇನ್ಸ್ ಪೆಕ್ಟರ್ ಕೂರುವ ಜಾಗದಲ್ಲಿ ಕೂರಲು ನಿರಾಕರಿಸಿದರೂ ಕೂಡ ನೀವು ಇಲ್ಲೇ ಕೂರಬೇಕು ಎದೂ ಸಲೀಂ ಅವರು ಮಹೇಂದ್ರಪ್ಪನವರ ಕೈ ಹಿಡಿದು ಅವರು ಕೂರುವ ಜಾಗದಲ್ಲಿ ಕೂರಿಸಿದ್ದಾರೆ. ಸರ್ಕಲ್ ಇನ್ಸಪೆಕ್ಟರ್ ಸಲೀಂ ಜೀಪ್ ನ ಚಾಲಕರಾಗಿ ಮಹೇಂದ್ರಪ್ಪ ಅವರನ್ನು ನಗರದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿರುವ ಪೊಲೀಸ್ ಕಾಲೋನಿಗೆ ಹೋಗಿ ಬಿಟ್ಟು ಕಳೆದ 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಗೆ ಸೆಲ್ಯೂಟ್ ನೀಡಿ ಬಂದಿದ್ದಾರೆ

Video Top Stories