Asianet Suvarna News Asianet Suvarna News

2 ವರ್ಷಗಳಲ್ಲಿ ತುಂಬಾ ವೇಗವಾಗಿ ಬೆಳೆದ ಅದಾನಿ! ಅದಾನಿ ಸಂಪತ್ತನ್ನು ದುಪ್ಪಟ್ಟಾಗಿಸಿತಾ ಷೇರ್ ಮ್ಯಾಜಿಕ್?

ಅದಾನಿ ತಮ್ಮ ಜಾಣ್ಮೆ ಮತ್ತು ಶ್ರಮದ ಫಲನಾವಿ ಇಂದು ನಂಬರ್ 3 ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಭಾರತ ದಾಖಲೆ ಬರೆಯುವಂತೆನೂ ಮಾಡಿದ್ದಾರೆ.

ಅದಾನಿ ಸಾಮ್ರಾಜ್ಯ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಸಂಪತ್ತು ಗಳಿಕೆಯಲ್ಲಿ ಅದಾನಿ ಊಹಿಸದ ರೀತಿಯಲ್ಲಿ ಏರುತ್ತಿದ್ದಾರೆ. ಮೊನ್ನೆ ಕೆಲ ಗಂಟೆಗಳ ಕಾಲ ಅದಾನಿ ವಿಶ್ವದ 2ನೇ ಶ್ರೀಮಂತ ಕೂಡ ಆಗಿದ್ರು ಅದಾನಿ. ಅದಾನಿ ಸಾಮ್ರಾಜ್ಯ ಈಗ ಎಲ್ಲ ರಂಗವನ್ನೂ ಆವರಿಸಿಕೊಳ್ಳುತ್ತಿದೆ. ಅದಾನಿ ಈಗ ಜಗತ್ತಿನ 3ನೇ ಶ್ರೀಮಂತ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ಭಾರತೀಯರಿಗೆ ತುಂಬಾ ಹೆಮ್ಮೆ ವಿಚಾರ. ಹಾಗಿದ್ರೆ ಅದಾನಿ ಇನ್ನೊಂದಿಷ್ಟು ಸಮಯ ತೆಗೆದುಕೊಂಡು ಜಗತ್ತಿನ ನಂಬರ್ 1 ಶ್ರೀಮಂತರಾಗಬಹುದಾ ಅನ್ನೋ ಅನುಮಾನವೂ ನಿಮ್ಮಲ್ಲಿದ್ಯಾ..? ಕಾಲೇಜು ಡ್ರಾಪ್ಔಟ್ ಆಗಿದ್ದ ಅದಾನಿ ಈಗ ವಿಶ್ವ ಕುಬೇರನಾಗಿದ್ದರ ಹಿಂದೆ ಬಹುರೋಚಕ ಕತೆಯಿದೆ. ಈ ಸಂಬಂಧ ಇಲ್ಲಿದೆ ವಿವರ..