ಜೋಳ ಬಿಡಿಸಲು ರೈತರ ವಿಭಿನ್ನ ಐಡಿಯಾ, ಆನಂದ್ ಮಹೀಂದ್ರಾ ಫಿದಾ!

ಭಾರತದಲ್ಲಿ ಕೆಲಸವನ್ನು ಸುಲಭವಾಗಿ ಮಾಡಲು ಜನರು ಚಿತ್ರ ವಿಚಿತ್ರ ಐಡಿಯಾಗಳನ್ನು ಉಪಯೋಗಿಸುತ್ತಾರೆ. ಇಲ್ಲಿ ಐಡಿಯಾಗಳೆಂದರೆ ಒಂದು ಕಲೆಯಂತೆ. ಭಿನ್ನ-ವಿಭಿನ್ನ, ಅದ್ಭುತ ಐಡಿಯಾಗಳ ಮೂಲಕ ಜನರು ತಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಸದ್ಯ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಸೋಶಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಜೋಳ ಬೇರ್ಪಡಿಸಲು ಇಬ್ಬರು ವ್ಯಕ್ತಿಗಳು ಅನುಸರಿಸಿರುವ ಮಾರ್ಗಕ್ಕೆ ಅವರು ಮನಸೋತಿದ್ದಾರೆ.
 
First Published Sep 1, 2020, 1:27 PM IST | Last Updated Sep 1, 2020, 1:36 PM IST

ಭಾರತದಲ್ಲಿ ಕೆಲಸವನ್ನು ಸುಲಭವಾಗಿ ಮಾಡಲು ಜನರು ಚಿತ್ರ ವಿಚಿತ್ರ ಐಡಿಯಾಗಳನ್ನು ಉಪಯೋಗಿಸುತ್ತಾರೆ. ಇಲ್ಲಿ ಐಡಿಯಾಗಳೆಂದರೆ ಒಂದು ಕಲೆಯಂತೆ. ಭಿನ್ನ-ವಿಭಿನ್ನ, ಅದ್ಭುತ ಐಡಿಯಾಗಳ ಮೂಲಕ ಜನರು ತಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಸದ್ಯ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಸೋಶಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಜೋಳ ಬೇರ್ಪಡಿಸಲು ಇಬ್ಬರು ವ್ಯಕ್ತಿಗಳು ಅನುಸರಿಸಿರುವ ಮಾರ್ಗಕ್ಕೆ ಅವರು ಮನಸೋತಿದ್ದಾರೆ.

ಇಲ್ಲಿ ಬೈಕ್ ಒಂದನ್ನು ನಿಲ್ಲಿಸಲಾಗಿದ್ದು, ಇವುಗಳ ಟಯರ್ ಸಹಾಯದಿಂದ ಜೋಳವನ್ನು ವ್ಯಕ್ತಿಗಳಿಬ್ಬರು ಬೇರ್ಪಡಿಸುತ್ತಿದ್ದಾರೆ. ಈ ವಿಡಿಯೋ ಕುರಿತಾಗಿ ತಮ್ಮ ಅಭಿಪ್ರಾಯ ಶೇರ್ ಮಾಡಿಕೊಂಡಿರುವ ಆನಂದ್ ಮಹೀಂದ್ರಾ, ರೈತರು ಬೈಕ್ ಹಾಗೂ ಟ್ರಾಕ್ಟರ್‌ನ್ನು ವಿವಿಧ ಕೆಲಸಗಳಿಗಾಗಿ ಬಳಸುವ ಇಂತಹ ಕ್ರಿಯೇಟಿವಿಟಿ ಸಾಮಾನ್ಯವಾಗಿ ನೋಡಲು ಸಿಗುತ್ತದೆ. ಆದರೆ ಬೈಕ್‌ನ್ನು ಹೀಗೂ ಬಳಸಬಹುದೆಂದು ನಾನು ಯಾವತ್ತೂ ಯೋಚಿಸಿರಲಿಲ್ಲ ಎಂದಿದ್ದಾರೆ.