ಆಸ್ಕ್ ಮಿ ಎನಿಥಿಂಗ್ ಎಂದಿದ್ದಕ್ಕೆ ಬ್ರಾ ಸೈಜ್ ಕೇಳಿದ ನೆಟ್ಟಿಗ, ಕ್ಯಾಕರಿಸಿ ಉಗಿದ ಕಿರುತೆರೆ ನಟಿ!

ಸೋಷ್ಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಜೊತೆಗೆ ಮಾತನಾಡುತ್ತಾ, ಆಸ್ಕ್ ಮಿ ಎನಿಥಿಂಗ್ ಎಂದು ಕಿರುತೆರೆ ನಟಿ ಸಯಂತನಿ ಘೋಷ್ ಕೇಳುತ್ತಿದ್ದಂತೆ, ಬ್ರಾ ಕಪ್ ಸೈಜ್ ಕೇಳಿ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಉಗಿಸಿಕೊಂಡಿದ್ದಾನೆ. 

TV actress Sayantani Ghosh gives a befitting reply to a user who asked her bra size skr

ಸಾಮಾಜಿಕ ಮಾಧ್ಯಮದ ಕಾರಣದಿಂದಾಗಿ ಈಗ ನಮ್ಮ ನೆಚ್ಚಿನ ನಟನಟಿಯರ ವೈಯಕ್ತಿಕ ಜೀವನದೊಳಗೆ ಹಣುಕಿ ನೋಡುವ ಅವಕಾಶವಷ್ಟೇ ಅಲ್ಲ, ಅವರೊಂದಿಗೆ ಸಂವಹನ ನಡೆಸುವುದು ಕೂಡಾ ಸುಲಭವಾಗಿದೆ. ಸೆಲೆಬ್ರಿಟಿಗಳು ಕೂಡಾ ತಮ್ಮ ಫಾಲೋವರ್ಸ್‌ಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಅವರು ತಮ್ಮ ಮೇಲಿಟ್ಟ ಅಭಿಮಾನಕ್ಕೆ ಕೃತಜ್ಞತೆ ತೋರುವ ಟ್ರೆಂಡ್ ಹೆಚ್ಚಾಗುತ್ತಿದೆ. ಅಲ್ಲದೆ, ಇದು ಆಯಾ ಸೆಲೆಬ್ರಿಟಿಗಳಿಗೆ ಹೆಚ್ಚಿನ ಮೈಲೇಜ್ ಕೂಡಾ ನೀಡುತ್ತದೆ. ಆದರೆ, ಇದರ ಒಂದು ಡಾರ್ಕ್ ಸೈಡ್ ಎಂದರೆ, ಸೆಲೆಬ್ರಿಟಿಗಳನ್ನು ನಿಂದಿಸಲು ಅಥವಾ ಟ್ರೋಲ್ ಮಾಡಲು ಉದ್ದೇಶಪೂರ್ವಕವಾಗಿ ತಮ್ಮ ಕೆಳಮಟ್ಟಕ್ಕೆ ಇಳಿಯುವ ಕೆಲವು ಜನರಿದ್ದಾರೆ. ಅವರು ಇವರು ಹಾಕುವ ಪೋಸ್ಟ್‌ಗಳಿಗೆ ಕೀಳು ಮಟ್ಟದ ಭಾಷೆಯಲ್ಲಿ ಪ್ರತಿಕ್ರಿಯೆ ಹಾಕುತ್ತಾರೆ. ಆದರೆ, ಇದೀಗ ಸಾಮಾನ್ಯವಾಗಿ ಇಂಥದಕ್ಕೆಲ್ಲ ಸೆಲೆಬ್ರಿಟಿಗಳೂ ಕ್ಯಾರೆ ಎನ್ನದ ಹಂತ ತಲುಪಿದ್ದಾರೆ. 

ಇತ್ತೀಚೆಗೆ ಟಿವಿ ಧಾರಾವಾಹಿ ನಟಿ ಸಯಂತನಿ ಘೋಷ್ ಇನ್ಸ್‌ಟಾಗ್ರಾಂನಲ್ಲಿ ತನ್ನ ಬೆಂಬಲಿಗರ ಜೊತೆ ಲೈವ್ ಹೋಗಿ ಆಸ್ಕ್ ಮಿ ಎನಿಥಿಂಗ್ ಎಂದಾಗ ಬಳಕೆದಾರನೊಬ್ಬ ಅವರ  ಬ್ರಾ ಕಪ್ ಗಾತ್ರ ಕೇಳಿದ್ದಾನೆ. ಇದಕ್ಕೆ ಆತನಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾಳೆ ನಟಿ. ಅಷ್ಟಕ್ಕೇ ಸಮಾಧಾನ ಹೊಂದದ ಘೋಷ್, ತನ್ನ ಖಾತೆಯಲ್ಲಿ ಇಂಥ ಪ್ರಶ್ನೆ ಕೇಳುವವರಿಗೆ ಉತ್ತರವಾಗಿ ಹಾಗೂ ಬಾಡಿ ಶೇಮಿಂಗ್ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಳ್ಳುವುದಾಗಿ ತಮ್ಮ ಯೋಚನೆಗಳನ್ನು ಬರೆದಿದ್ದಾರೆ. 

ಅಂಬಾನಿ ಕುಟುಂಬದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳೋ ಬ್ಯೂಟಿ ಕ್ವೀನ್ ದಿಯಾ ಮೆಹ್ತಾ, ಯಾರು ಈ ಲೇಡಿ ಓರಿ?

'ನನ್ನ ಸಂವಾದಾತ್ಮಕ ಸೆಷನ್‌ಗಳಲ್ಲಿ ಯಾರೋ ನನ್ನ ಸ್ತನದ ಗಾತ್ರ ಕೇಳಿದರು! ನಾನು ಆ ವ್ಯಕ್ತಿಗೆ ತಕ್ಕ ಉತ್ತರ ನೀಡಿದ್ದೆ. ಆದರೂ, ನಾನು ಇನ್ನೂ ಹೆಚ್ಚು ಮಾತನಾಡಲು ಬಯಸುತ್ತೇನೆ. ಯಾವುದೇ ರೀತಿಯ ಬಾಡಿ ಶೇಮಿಂಗ್ ಕೆಟ್ಟದ್ದಾಗಿದೆ. ಆದರೆ ಹೆಣ್ಣಿನ ಸ್ತನಗಳೆಡೆಗಿನ ಮೋಹ ಏನು ಎಂದು ನನಗೆ ಅರ್ಥವಾಗುವುದಿಲ್ಲ? ಇದು ಯಾವ ಗಾತ್ರದ ಬಗ್ಗೆ? ಒಂದು ಕಪ್ ಬಿ, ಸಿ, ಡಿ ಇತ್ಯಾದಿ? ಹುಡುಗರು ಮಾತ್ರವಲ್ಲ, ನಾವು ಹುಡುಗಿಯರಿಗೂ ಸಹ ಈ ರೀತಿಯ ಕಂಡೀಷನಿಂಗ್ ಇದೆ! ದೇಹದ ಇತರ ಭಾಗಗಳಂತೆ ಇದೂ ಒಂದು ಎಂದು ಒಪ್ಪಿಕೊಳ್ಳುವುದು ಕಷ್ಟವಾಗುವುದೇಕೆ?' ಎಂದವರು ಪ್ರಶ್ನಿದ್ದಾರೆ.

ಮುಂದುವರಿದು, 'ಶುಶ್ರೂಷಾ ತಾಯಿ ಅಥವಾ ಉತ್ಸಾಹದ ಕೆಲವು ಉದ್ದೇಶಗಳಿಗೆ ಬಂದಾಗ ಅದು ಒಂದು ಅರ್ಥವನ್ನು ಹೊಂದಿದೆ ಎಂದು ನನಗೆ ತಿಳಿದಿದೆ. ಆದರೆ ಅದು ದೇಹದ ಮತ್ತೊಂದು ಭಾಗವಲ್ಲವೇ? ಅಂತಹ ದೃಷ್ಟಿಕೋನಗಳು ಅಥವಾ ಹೆಣ್ಣಿನ ಸ್ತನದ ಮೇಲಿನ ಪ್ರಚೋದನೆಗಳು ಹೆಣ್ಣುಮಕ್ಕಳಲ್ಲ ಕೀಳರಿಮೆ ತರುತ್ತದೆ.'

 

ಕೆಲ ಮಹಿಳೆಯರು ಚಿಕ್ಕ ಎದೆ ಹೊಂದಲು ಬಯಸಿದರೆ, ಮತ್ತೆ ಕೆಲವರು ಇಂಪ್ಲ್ಯಾಂಟ್‌ಗಳ ಅಗತ್ಯ ಅನುಭವಿಸುತ್ತಾರೆ. ಆದರೆ, ಹೇಗಿದ್ದೇವೋ ಹಾಗೆ ಸ್ವೀಕಾರ ಮಾಡುವ ಮನಸ್ಥಿತಿ ಬೆಳೆಯಬೇಕು ಎಂಬುದನ್ನು ಸಯಂತನಿ ಘೋಷ್ ಒತ್ತಿ ಹೇಳಿದ್ದಾರೆ. 

ಬಾಡಿ ಶೇಮಿಂಗ್‌ಗೆ ನೋ ಎನ್ನಿ
ಇದಕ್ಕಾಗಿ ಇಂಥ ಯೋಚನೆಗಳು ನಿಲ್ಲಬೇಕು ಎಂದು ಕರೆ ನೀಡಿರುವ ಆಕೆ, 'ಮಹಿಳೆಯನ್ನು ಈ ರೀತಿ ನೋಡಲು ಅಥವಾ ಅವಳೊಂದಿಗೆ ಮಾತನಾಡಲು ತಮಗೆ ಅರ್ಹತೆ ಇದೆ ಎಂದು ಪುರುಷರು ಏಕೆ ಭಾವಿಸುತ್ತಾರೆ? ಇದಕ್ಕೆ ನಾವು ಮಾತನಾಡದಿರುವುದೇ ಕಾರಣ. ಶೇಮ್ ಎಂಬ ಕಾರಣಕ್ಕೋ, ಕೆಸರೆರಚಬಾರದೆಂದೋ ಸುಮ್ಮನಿದ್ದರೆ ಇವರು ಮಾತಾಡುವುದನ್ನು ಮುಂದುವರೆಸುತ್ತಲೇ ಇರುತ್ತಾರೆ' ಎಂದಿದ್ದಾರೆ ಘೋಷ್.  

ಗ್ರೀನ್‌ ಗೌನ್‌ನಲ್ಲಿ ಸ್ಟೈಲಿಶ್​ ಲುಕ್ ಕೊಟ್ಟ ಸಾನ್ಯ ಅಯ್ಯರ್: ಫಿಶ್ ಕಟ್‌ ಡ್ರೆಸ್‌ ಬ್ಯೂಟಿಫುಲ್ ಎಂದ ಫ್ಯಾನ್ಸ್!

ಹೀಗೆ ಬಾಡಿ ಶೇಮಿಂಗ್ ಮಾಡುವವರಿಗೆ ಮುಖಕ್ಕೆ ಹೊಡೆದಂತೆ ಮಾತನಾಡಿ ಎಂದು ಘೋಷ್ ಮಹಿಳೆಯರಿಗೆ ಕರೆ ನೀಡಿದ್ದಾರೆ. ನಮಗಾಗಿ ನಾವೇ ಮಾತನಾಡದಿದ್ದರೆ ಇನ್ಯಾರು ತಾನೇ ಮಾತನಾಡುತ್ತಾರೆ ಎಂದು ಆಕೆ ಪ್ರಶ್ನಿಸಿದ್ದಾರೆ. ಘೋಷ್ ಮಾತುಗಳಲ್ಲಿ ಎಷ್ಟೊಂದು ನಿಜವಿದೆಯಲ್ಲವೇ?

Latest Videos
Follow Us:
Download App:
  • android
  • ios