Asianet Suvarna News Asianet Suvarna News

300 ಲವ್ ಪ್ರಪೋಸ್‌ ರಿಜೆಕ್ಟ್ ಮಾಡಿದ ಸೀರಿಯಲ್ ಸುಂದರಿ; ಇವಳದ್ದೆಂಥಾ ಹಾರ್ಟ್ ಗುರೂ ಎಂದ ಫ್ಯಾನ್ಸ್!

ಝೀ ಕನ್ನಡ ವಾಹಿನಿಯ ಸೀತಾರಾಮ ಸೀರಿಯಲ್‌ನ ನಾಯಕಿ ವೈಷ್ಣವಿ ಗೌಡ ಈವರೆಗೆ ಬರೋಬ್ಬರಿ 300ಕ್ಕೂ ಅಧಿಕ ಲವ್ ಪ್ರಪೋಸಲ್ ರಿಜೆಕ್ಟ್ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Serial Actress Vaishnavi Gowda rejected 300 love proposals but fans ask are you having heart sat
Author
First Published Feb 1, 2024, 6:46 PM IST

ಬೆಂಗಳೂರು (ಫೆ.01): ಕನ್ನಡದ ಅಗ್ನಿಸಾಕ್ಷಿ ಹಾಗೂ ಸೀತಾರಾಮ ಸೀರಿಯಲ್‌ನ ನಾಯಕಿ ನಟಿ ವೈಷ್ಣವಿಗೌಡ ಅವರ ನಟನೆಯನ್ನು ನೋಡಿ ಮೆಚ್ಚಿಕೊಳ್ಳದವರೇ ಇಲ್ಲ. ಧಾರಾವಾಹಿಯಲ್ಲಿ ಮೈತುಂಬಾ ಸೇರೆ ಹಾಗೂ ಸಾಮಾನ್ಯ ಡ್ರೆಸ್‌ಗಳನ್ನು ತೊಡುವ ವೈಷ್ಣವಿ ರಿಯಲ್‌ ಲೈಫ್‌ನಲ್ಲಿ ಅತ್ಯಂತ ಸ್ಟೈಲಿಶ್ ಆಗಿದ್ದಾಳೆ. ಇವರಿಗೆ ಸುಮಾರು 300ಕ್ಕೂ ಅಧಿಕ ಲವ್‌ ಪ್ರಪೋಸ್‌ಗಳು ಬಂದಿದ್ದರೂ ಒಪ್ಪಿಕೊಂಡಿಲ್ಲವಂತೆ.

ಕನ್ನಡ ನಾಡಿನ ಜನತೆಗೆ ಅಗ್ನಿಸಾಕ್ಷಿಯ ಸನ್ನಿಧಿಯಾಗಿ ಪರಿಚಿತಗೊಂಡ ವೈಷ್ಣವಿಗೌಡ ಅವರ ಸೌಂದರ್ಯ ಹಾಗೂ ನಟನೆಯನ್ನು ನೋಡಿ ಲಕ್ಷಾಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಬಿಗ್‌ಬಾಸ್‌ ಮನೆಯಲ್ಲೂ ಕಾಣಿಸಿಕೊಂಡ ವೈಷ್ಣವಿ ಇಲ್ಲಿಯೂ ಕೂಡ ಹೆಚ್ಚಿನ ರಗಳೆ ಮಾಡಿಕೊಳಳದೇ ಸೀದಾ-ಸಾದಾ ನಡತೆಯಿಂದ ಜನರ ಮನಸ್ಸನ್ನು ಗೆದ್ದಿದ್ದಳು. ಇದಾದ ನಂತರ ಪುನಃ ಒಂದೆರಡು ಸಿನಿಮಾಗಳಲ್ಲಿಯೂ ನಟಿಸಿದ ವೈಷ್ಣವಿಗೌಡ, ಅಲ್ಲಿ ಹೆಚ್ಚಿನ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಪುನಃ ಕಿರುತೆರೆಗೆ ಆಗಮಿಸಿದ್ದಾರೆ.

ಕಣ್ಣು ಮುಚ್ಚಿಕೊಂಡು ಮೇಕಪ್​ ಮಾಡಿಕೊಂಡ ಸೀತಾರಾಮ ಸೀತಾ: ವೈಷ್ಣವಿ ಗೌಡ ಹೊಸ ಲುಕ್​ ಹೇಗಿದೆ?

ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ಸೀತೆಯಾಗಿ ಕಾಣಿಸಿಕೊಂಡಿರುವ ವೈಷ್ಣವಿಗೌಡ ಅವರಿಗೆ ಅಭಿಮಾನಿಗಳು ಪುನಃ ಹಾರೈಸಿ ಕೈ ಹಿಡಿದಿದ್ದಾರೆ. ಕನ್ನಡ ಬಿಗ್‌ಬಾಸ್ ಸೀಸನ್ 10 ಮುಕ್ತಾಯ ಆಗುತ್ತಿದ್ದಂತೆಯೇ ವೈಷ್ಣವಿಗೌಡ ಅವರು ಬಿಗ್‌ಬಾಸ್‌ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಎಪಿಸೋಡ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ವೈಷ್ಣವಿಗೌಡ ಅವರಿಗೆ ನಿಮ್ಮ ಪ್ರಕಾರ ಅಂದಾಜು ಎಷ್ಟು ಲವ್ ಪ್ರಪೋಸಲ್ ಬಂದಿರಬಹುದು ಎಂದು ಕೇಳಿದ್ದಾರೆ.

ಕಿಚ್ಚ ಸುದೀಪ್ ಪ್ರಶ್ನೆಗೆ ಆಲೋಚನೆ ಮಾಡಿ ಉತ್ತರಿಸಿದ ವೈಷ್ಣವಿ ಅವರು, ಸುಮಾರು 200ರಿಂದ 300 ಪ್ರಪೋಸಲ್‌ಗಳು ಬಂದಿವೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಸುದೀಪ್ ಆಹ್... ಎಂದು ಶಾಕ್ ಆಗಿ ಕೇಳುತ್ತಾ ಈ 200.., 300 ಪ್ರಪೋಸಲ್‌ಗಳಲ್ಲಿ ಯಾವುದೂ ಕರೆಕ್ಟ್ ಆಗಿದೆ ಅಂತ ಅನಿಸಲೇ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.ನನಗೆ ಲವ್ ಪ್ರಪೋಸಲ್‌ಗಳನ್ನು ನೋಡಬೇಕು ಅಂತಾನೇ ಅನಿಸಲಿಲ್ಲ ಸರ್. ನಾನು ಯಾವಾಗಲೂ ಮನಸ್ಸಿನ ಮಾತುಗಳನ್ನು ಕೇಳುವಂತಹ ಹುಡುಗಿ. ಆದ್ದರಿಂದ ನನ್ನ ಮನಸ್ಸು ಕೂಡ ಯಾವುದೇ ಪ್ರಪೋಸಲ್‌ಗಳನ್ನು ನೋಡುವುದಕ್ಕೆ ಪ್ರೇರಣೆಯೇ ಆಗಲಿಲ್ಲ ಎಂದಿದ್ದಾರೆ.

ಹಸಿರು ಸೀರೆಯಲ್ಲಿ ವೈಷ್ಣವಿ ಗೌಡ, ಸೀತಮ್ಮ ಸಖತ್ ಮುದ್ದು, ದೃಷ್ಟಿ ತೆಗೆದುಕೊಳ್ಳಿ ಎಂದ ಫ್ಯಾನ್ಸ್‌

ಯಾವುದೇ ಪ್ರಪೋಸಲ್‌ಗಳು ನನಗೆ ಕನೆಕ್ಟ್ ಆಗಲೇ ಇಲ್ಲ. ಯಾವುದೇ ಪ್ರಪೋಸ್‌ಗಳ ವೈಬ್ಸ್ ನನ್ನ ಮನಸ್ಸಿಗೆ ಮುಟ್ಟಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ಅವುಗಳನ್ನು ನೋಡದೇ ಹೇಗೆ ಕನೆಕ್ಟ್ ಆಗುತ್ತದೆ ಎಂದು ಕೆಣಕಿದ್ದಾರೆ. ಆಗ ಅದು ನಮ್ಮ ಮನಸ್ಸಿಗೆ ಅನ್ನಿಸಬೇಕು ಸರ್.. ಒಬ್ಬರನ್ನು ಪ್ರೀತಿ ಮಾಡಬೇಕು ಅಂದರೆ ಅವರ ಮುಖವನ್ನು ನೋಡಬೇಕು ಅಂತೇನಿಲ್ಲ ಎಂದಿದ್ದಾರೆ. ಪುನಃ ಶಾಕ್‌ ಆದ ಸುದೀಪ್‌ ಮತ್ತೆ ಇನ್ನೇನು ನೋಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ವೈಷ್ಣವಿಮ ಸುದೀಪ್ ಸೇರಿದಂತೆ ಇಡೀ ವೇದಿಕೆಯೇ ನಗೆಗಡಲಲ್ಲಿ ತೇಲಿದೆ. ಈ ವೀಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. 

Follow Us:
Download App:
  • android
  • ios