ಇಲ್ಲಿಯವರೆಗೆ ವ್ಯಾಪಾರ ವಹಿವಾಟು ಅಂತಾ ತನ್ನ ಪಾಡಿಗೆ ತಾನೂ ಬ್ಯುಸಿ ಇದ್ದ ಎಸ್‌ಪಿ ರೋಡ್‌ನಲ್ಲೀಗ ಧರ್ಮದಂಗಲ್ ಕಿಡಿ ಹಚ್ಚಲಾಗಿದೆ. ಇಲ್ಲಿನ ಮುಸ್ಲಿಂ ವ್ಯಾಪಾರಿಗಳು ಜಿಹಾದಿಗಳೆಂದು ಅಪಪ್ರಚಾರ ಮಾಡಲು ಕೆಲವರಿಂದ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿರುವ ವರ್ತಕರು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಎಸ್‌ಪಿ ರೋಡ್ ವ್ಯಾಪಾರಿಗಳು ಒಗ್ಗಟ್ಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರು (ಫೆ.23) ಚುನಾವಣೆ ಸಮೀಪಿದ್ದಂತೆ ಹೊಸ ಹೊಸ ವಿವಾದಗಳು ಹುಟ್ಟಿಕೊಳ್ಳಲು ಶುರುವಾಗಿವೆ. ಲಾಡ್ಲೆ ಮಶಾಕ್ ದರ್ಗಾ, ಬಾಬ ಬುಡನ್‌ಗಿರಿ ವಿವಾದಗಳು ಮತ್ತೆ ಮುನ್ನೆಲೆಗೆ ಬಂದಿವೆ. ಇದರ ಜತೆಗೆ ಇದೀಗ ರಾಜ್ಯದ ಎಲೆಕ್ಟ್ರಾನಿಕ್ ವಸ್ಥುಗಳ ಅತಿದೊಡ್ಡ ಮಾರುಕಟ್ಟೆಯಾಗಿರುವ ಎಸ್ ಪಿ ರಸ್ತೆಗೂ ಧರ್ಮ ದಂಗಲ್ ಬಿಸಿ ತಟ್ಟಿದೆ.
ಹೌದು. ಇಲ್ಲಿಯವರೆಗೆ ವ್ಯಾಪಾರ ವಹಿವಾಟು ಅಂತಾ ತನ್ನ ಪಾಡಿಗೆ ತಾನೂ ಬ್ಯುಸಿ ಇದ್ದ ಎಸ್‌ಪಿ ರೋಡ್‌ನಲ್ಲೀಗ ಧರ್ಮದಂಗಲ್ ಕಿಡಿ ಹಚ್ಚಲಾಗಿದೆ. ಇಲ್ಲಿನ ಮುಸ್ಲಿಂ ವ್ಯಾಪಾರಿಗಳು ಜಿಹಾದಿಗಳೆಂದು ಕೆಲವರಿಂದ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿರುವ ವರ್ತಕರು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಎಸ್‌ಪಿ ರೋಡ್ ವ್ಯಾಪಾರಿಗಳು ಒಗ್ಗಟ್ಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿಕ್ಕಮಗಳೂರು: ದತ್ತಪೀಠ ಸಮಿತಿ ರದ್ದತಿಗೆ ಮುಸ್ಲಿಂ ಮುಖಂಡರ ಆಗ್ರಹ
ಏನಿದು ವಿವಾದ?
ಎಸ್‌ಪಿ ರೋಡ್(SP Raod)ನಲ್ಲಿ ಮುಸ್ಲಿಂ(Muslim)ರೇ ಹೆಚ್ಚಾಗಿದ್ದಾರೆ. ಇಲ್ಲಿ ವ್ಯಾಪಾರ ಮಾಡಿ ಬಂದ ಲಾಭದ ದುಡ್ಡಿನಿಂದ ಜಿಹಾದಿಗಳು ಆಗ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.. ಯುಟ್ಯೂಬ್ ಮೂಲಕ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರ ಕುಗ್ಗಿದೆ . ಸಾಮಾಜಿಕ ಜಾಲತಾಣ, ಯುಟ್ಯೂಬ್ ಮೂಲಕ ಮುಸ್ಲಿಂ ವ್ಯಾಪಾರಿಗಳ ಮೇಲೆ ಇಲ್ಲಸಲ್ಲದ ಸುದ್ದಿ ಹರಿಬಿಡುತ್ತಿರುವ ಹಿನ್ನೆಲೆ ವ್ಯಾಪಾರದಲ್ಲಿ ಧಾರ್ಮಿಕತೆ ತಂದ ವಿಚಾರವಾಗಿ ದೂರು ದಾಖಲಿಸಿರುವ ಎಸ್ ಪಿ ರಸ್ತೆ ವರ್ತಕರು. ಕಿಡಿಗೇಡಿಗಳಿಂದ ವ್ಯಾಪಾರದಲ್ಲಿ ಧರ್ಮ ತರಲಾಗ್ತಿದೆ ಯುಟ್ಯೂಬ್ ಮೂಲಕ ದ್ವೇಷ ಬಿತ್ತುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಹೆಂಡತಿಯನ್ನು ಬಾಣಂತನಕ್ಕೆ ಕಳುಹಿಸಿ ಮತ್ತೊಂದು ವಿವಾಹ: ದೂರು ದಾಖಲು
ಎಸ್‌ಪಿ ರೋಡ್ ವಿಚಾರವಾಗಿ ಅನಗತ್ಯವಾಗಿ ವಿವಾದ ಸೃಷ್ಟಿಸಿ ಧರ್ಮ ಹೊಡೆಯುವ ಕೆಲಸ ಆಗ್ತಿದೆ. ನಾವಿಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ವ್ಯಾಪಾರ ಮಾಡಿಕೊಂಡು ಇದ್ದೇವೆ.
ವರ್ತಕ ಶಿವಕುಮಾರ.
ಹಲವಾರು ವರ್ಷಗಳಿಂದ ನಾವಿಲ್ಲಿ ವ್ಯಾಪಾರ ಮಾಡ್ಕೊಂಡು ಬಂದಿದ್ದೇವೆ. ಯಾವುದೇ ರೀತಿಯಲ್ಲಿ ಧರ್ಮಧರ್ಮಗಳ ಮಧ್ಯೆ ಹೊಡೆದಾಟ ನಡೆದಿಲ್ಲ. ಅನಗತ್ಯವಾಗಿ ವಿವಾದ ಸೃಷ್ಟಿಸಿ ನಮ್ಮ ಅನ್ನಕ್ಕೆ ಮಣ್ಣಾಕ ಬೇಡಿ ಎಂದು ಮುಸ್ಲಿಂ ವರ್ತಕರ ಮನವಿ
