Asianet Suvarna News Asianet Suvarna News

Muslim Youth's Murder: ಗೃಹ ಸಚಿವ ಆರಗ ರಾಜೀನಾಮೆಗೆ SDPI ಆಗ್ರಹ

*  ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಹತ್ಯೆಗೆ ಗೃಹಸಚಿವರೇ ಹೊಣೆ
*  ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರಕ್ಕೆ ಆಗ್ರಹ
*  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಮುಸ್ಲಿಂ, ಕ್ರೈಸ್ತ, ದಲಿತರ ಮೇಲೆ ದಾಳಿ
 

SDPI Demand Home Minister Araga Jnanendra Resignation grg
Author
Bengaluru, First Published Jan 20, 2022, 8:02 AM IST

ಬೆಂಗಳೂರು(ಜ.20): ರಾಜ್ಯದಲ್ಲಿ(Karnataka) ಮುಸ್ಲಿಂ, ಕ್ರೈಸ್ತ ಹಾಗೂ ದಲಿತರ ಮೇಲೆ ನಿರಂತರ ದಾಳಿ(Attack) ನಡೆಯುತ್ತಿವೆ. ಇತ್ತೀಚೆಗೆ ಗದಗ(Gadag) ಜಿಲ್ಲೆಯ ನರಗುಂದದಲ್ಲಿ ಮುಸ್ಲಿಂ ಯುವಕನನ್ನು(Muslim Youngman) ಹತ್ಯೆ ಮಾಡಿದ್ದು, ಗೃಹ ಸಚಿವರೇ ಇದೆಲ್ಲದರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸೋಸಿಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ (SDPI) ಆಗ್ರಹಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಮೈಸೂರು(Abdul Majid Mysuru), ನರಗುಂದದಲ್ಲಿ(Nargund) ಮುಸ್ಲಿಂ ಯುವಕ ಸಮೀರ್‌ನನ್ನು ಸಂಘ ಪರಿವಾರದ ದುಷ್ಕರ್ಮಿಗಳು ಹತ್ಯೆ(Murder) ಮಾಡಿದ್ದಾರೆ. ಕೃತ್ಯಕ್ಕೆ ಕಾರಣರಾದ ಆರೋಪಿಗಳು(Accused) ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದ ನಾಯಕರನ್ನು ಕೂಡಲೇ ಬಂಧಿಸುವಂತೆ ಅವರು ಆಗ್ರಹಿಸಿದ್ದಾರೆ.

Corona Lockdown: ಲಾಕ್‌ಡೌನ್‌ ಪ್ರಸ್ತಾವನೆ ಇಲ್ಲ: ಗೃಹ ಸಚಿವ ಆರಗ ಸ್ಪಷ್ಟನೆ

ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಸಮೀರ್‌ ಮೃತಪಟ್ಟರೆ(Death), ಹಲ್ಲೆಗೊಳಗಾದ ಆತನ ಸ್ನೇಹಿತ ಸಂಶೀರ್‌ಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP Government) ಬಂದ ಮೇಲೆ ಮುಸ್ಲಿಂ, ಕ್ರೈಸ್ತ(Christian), ದಲಿತರ(Dalit) ಮೇಲೆ ದಾಳಿ ನಡೆಯುತ್ತಿವೆ. ಇದಕ್ಕೆ ಬಿಜೆಪಿ ನಾಯಕರ ಪ್ರಚೋದನಾತ್ಮಕ ಹೇಳಿಕೆಗಳು, ತ್ರಿಶೂಲ ಧೀಕ್ಷೆಯಂತಹ ಕಾರ್ಯಕ್ರಮಗಳೆ ಕಾರಣ ಎಂದು ಆರೋಪಿಸಿದರು. ಈ ಎಲ್ಲ ಕಾರಣಗಳಿಂದ ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnanendra) ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಜತೆಗೆ ಸಮೀರ್‌ಮತ್ತು ಸಂಶೀರ್‌ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡುವಂತೆ ಎಸ್‌ಡಿಪಿಐ ಪ್ರಕಟಣೆ ತಿಳಿಸಿದೆ.

ಲಾಕ್‌ಡೌನ್‌ ಬಗ್ಗೆ ಹೇಳಿ ಉಲ್ಟಾ ಹೊಡೆದ ಸಚಿವ ಜ್ಞಾನೇಂದ್ರ

ಬೆಂಗಳೂರು: ಕಾಂಗ್ರೆಸ್‌ ಪಾದಯಾತ್ರೆಯಿಂದ(Congress Padayatra)  ಲಾಕ್‌ಡೌನ್‌(Lockdown) ಆಗುವ ಪರಿಸ್ಥಿತಿ ಎದುರಾಗಬಹುದು, ಲಾಕ್‌ಡೌನ್‌ ಜಾರಿಯಾದರೆ ಕಾಂಗ್ರೆಸ್‌(Coongress) ನಾಯಕರೇ ಕಾರಣ ಎಂದು ಹೇಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೆಲ ಸಮಯದ ಬಳಿಕ ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್‌ ಪರಿಹಾರವಲ್ಲ. ಲಾಕ್‌ಡೌನ್‌ ಮಾಡುವುದೂ ಇಲ್ಲ ಎಂದು ಉಲ್ಟಾಹೊಡೆದಿದ್ದರು.

ಜ.11 ರಂದು ಸುದ್ದಿಗಾರರ ಜತೆ ಮಾತನಾಡಿದ್ದ ಅವರು, ಕೋವಿಡ್‌(Covid19) ಸೋಂಕನ್ನು ತಡೆಗಟ್ಟಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಆದರೆ ಕಳೆದ ಹಲವು ದಿನಗಳಿಂದ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಕೈಮೀರಿದರೆ ಲಾಕ್‌ಡೌನ್‌ ಅನಿವಾರ್ಯ. ಪಾದಯಾತ್ರೆಯಿಂದ ಲಾಕ್‌ಡೌನ್‌ ಜಾರಿಯಾದರೆ ಕಾಂಗ್ರೆಸ್‌ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.

Shivamogga Accident: ಗಾಯಗೊಂಡ ಬಾಲಕಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಚಿವ ಜ್ಞಾನೇಂದ್ರ

ಪರಿಸ್ಥಿತಿ ವಿಕೋಪಕ್ಕೆ ಹೋದರೆ ಕೆಲ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಲಾಕ್‌ಡೌನ್‌ ಪರಿಹಾರ ಅಲ್ಲ. ಸೋಂಕು ಉಲ್ಬಣವಾದ ತಕ್ಷಣ ಲಾಕ್‌ಡೌನ್‌ ಮಾಡುವ ಯೋಚನೆ ಇಲ್ಲ. ಮುಖ್ಯಮಂತ್ರಿಗಳು ಸಹ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರದ(Central Government)ಸೂಚನೆಯನ್ನು ಅನುಸರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. 

ವಾರಂತ್ಯದ ಕರ್ಫ್ಯೂನಲ್ಲಿ(Weekend Curfew) ಬೀದಿ ವ್ಯಾಪಾರಿಗಳು, ಹೊಟೇಲ್‌ ಉದ್ಯಮಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಲಾಕ್‌ಡೌನ್‌ನಿಂದ ಬಡವರಿಗೆ, ಬೀದಿ ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸರ್ಕಾರಕ್ಕೆ(Government of Karnataka) ಲಾಕ್‌ಡೌನ್‌ ಮಾಡುವ ಇರಾದೆ ಏನೂ ಇಲ್ಲ. ಪರಿಸ್ಥಿತಿ ಕೈತಪ್ಪುವ ಸ್ಥಿತಿಗೆ ಬಂದಾಗ ಲಾಕ್‌ಡೌನ್‌ ಮಾಡುವುದು ಅದೊಂದು ವಿಧಾನ ಅಷ್ಟೆ. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದ ಅವರು, ಕೋವಿಡ್‌ ಸೋಂಕಿನ ನಡುವೆಯೂ ಪಾದಯಾತ್ರೆ ಕೈಗೊಳ್ಳುವುದರ ಮೂಲಕ ಕಾಂಗ್ರೆಸ್‌ ನಾಯಕರು ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ಉದ್ದೇಶ ನೀರಿನ ಮೇಲೆ ರಾಜಕೀಯ ಮಾಡುವುದು. ಆದರೆ, ನಮ್ಮ ಆತಂಕ ಇರುವುದು ಸಾರ್ವಜನಿಕರ ಆರೋಗ್ಯ ಕಾಪಾಡಿಕೊಳ್ಳುವುದಾಗಿದೆ ಎಂದು ತಿಳಿಸಿದ್ದರು. 

Follow Us:
Download App:
  • android
  • ios