3 ತಿಂಗಳ ವಿವಿಧ ದಿನಗಳಂದು18 ರೈಲುಗಳ ಸಂಚಾರ ರದ್ದು ರದ್ದಾದ ರೈಲುಗಳ ಪಟ್ಟಿ ಇಲ್ಲದೆ!
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದಲ್ಲಿ ಸುರಕ್ಷತಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರವನ್ನು ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳುಗಳ ವಿವಿಧ ದಿನಾಂಕಗಳಂದು ರದ್ದುಗೊಳಿಸಲಾಗಿದೆ.
ಬೆಂಗಳೂರು (ಡಿ.2) : ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದಲ್ಲಿ ಸುರಕ್ಷತಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರವನ್ನು ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳುಗಳ ವಿವಿಧ ದಿನಾಂಕಗಳಂದು ರದ್ದುಗೊಳಿಸಲಾಗಿದೆ.
ಮೂರು ತಿಂಗಳ ಕಾಲ ಸುರಕ್ಷತಾ ಕ್ರಮಗಳ ಅಳವಡಿಕೆ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಅದರ ಜತೆಗೆ 6 ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದ್ದು, 30 ರೈಲುಗಳ ಮಾರ್ಗ ಬದಲಿಸಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗ ಕ್ರಮ ಕೈಗೊಂಡಿದೆ.
ಬೆಂಗಳೂರು: ನಗರ ಸುತ್ತ 287 ಕಿ.ಮೀ ರಿಂಗ್‌ರೈಲ್ ನಿರ್ಮಾಣ: ಕೇಂದ್ರ ಸಚಿವ ವೈಷ್ಣವ್
ಸಂಚಾರ ರದ್ದುಗೊಳ್ಳುತ್ತಿರುವ ರೈಲುಗಳ ವಿವರ, ದಿನಾಂಕ
*ಕೊಯಮತ್ತೂರು-ಹಜರತ್ ನಿಜಾಮುದ್ದೀನ್ ಕೊಂಗು ಎಕ್ಸ್‌ಪ್ರೆಸ್: ಡಿ.10, 17, 24, 31, ಜ.7, 14, 21, 28, ಫೆ.4
*ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್: ಡಿ.6, 13, 20, 27, ಜ.3, 10, 17, 24, 31, ಫೆ.7
*ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಅಗ್ಥೋರಿ ಪಾರ್ಸೆಲ್ ಎಕ್ಸ್‌ಪ್ರೆಸ್: ಡಿ.7, 14, 21, 28, ಜ.4, 11, 18, 25, ಫೆ.1, 8
*ಯಶವಂತಪುರ-ಡಾ। ಅಂಬೇಡ್ಕರ್ ನಗರ ಎಕ್ಸ್‌ಪ್ರೆಸ್: ಡಿ.12, 19, 26, ಜ.2, 9, 16, 23, 30, ಫೆ.6
*ಯಶವಂತಪುರ-ಮಚೇಲಿಪಟ್ಟಣ ಕೋಂಡವೀಡು ಎಕ್ಸ್‌ಪ್ರೆಸ್: ಡಿ.9, 12, 14, 16, 19, 21, 23, 25, 28, 30, ಜ.2, 4, 6, 9, 11, 13, 16, 18, 20, 23, 25, 27, 30, ಫೆ.1, 3, 5, 8
*ಯಶವಂತಪುರ-ಸಿಕಂದರಾಬಾದ್ ಗರೀಬ್ ರಥ ಎಕ್ಸ್‌ಪ್ರೆಸ್: ಡಿ.9, 11, 14, 16, 18, 21, 23, 25, 28, 30, ಜ.1, 4, 6, 8, 11, 13, 15, 18, 22, 25, 27, 29, ಫೆ.1, 3, 5, 8
*ಸಾಯಿನಗರ ಶಿರಡಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್: ಡಿ.8, 15, 22, 29, ಜ.5, 12, 19, 26, ಫೆ.2, 9
*ಹಜರತ್ ನಿಜಾಮುದ್ದೀನ್-ಕೊಯಮತ್ತೂರು ಎಕ್ಸ್‌ಪ್ರೆಸ್: ಡಿ.13, 20, 27, ಜ.3, 10, 17, 24, 31, ಫೆ.7
*ಅಗ್ತೋರಿ-ಎಸ್‌ಎಂವಿಟಿ ಬೆಂಗಳೂರು ಪಾರ್ಸೆಲ್ ಎಕ್ಸ್‌ಪ್ರೆಸ್: ಡಿ.11, 18, 25, ಜ.1, 8, 15, 22, 29, ಫೆ.5, 12
*ಡಾ। ಅಂಬೇಡ್ಕರ್‌ನಗರ-ಯಶವಂತಪುರ ಎಕ್ಸ್‌ಪ್ರೆಸ್: ಡಿ.10, 17, 24, 31, ಜ.7, 14, 21, 28, ಫೆ.4
*ಮಚಲಿಪಟ್ಟಣ-ಯಶವಂತಪುರ ಎಕ್ಸ್‌ಪ್ರೆಸ್: ಡಿ.8, 11, 13, 15, 18, 20, 22, 25, 27, 29, ಜ.1, 3, 5, 8, 10, 12, 15, 17, 19, 22, 24, 26, 29, 31, ಫೆ.2, 5, 7
*ಸಿಕಂದರಾಬಾದ್-ಯಶವಂತಪುರ ಗರೀಬ್ ರಥ ಎಕ್ಸ್‌ಪ್ರೆಸ್: ಡಿ.8, 10, 13, 15, 17, 20, 22, 24, 27, 29, 31, ಜ.3, 5, 7, 10, 12, 14, 17, 19, 21, 24, 26, 28, 31, ಫೆ.2, 4, 7
*ಧರ್ಮಾವರಂ-ಕೆಎಸ್‌ಆರ್ ಬೆಂಗಳೂರು: ಡಿ.12ರಿಂದ ಫೆ. 8ರವರೆಗೆ
*ಗುಂತಕಲ್-ಹಿಂದೂಪುರ ಡೆಮು: ಡಿ.7ರಿಂದ ಫೆ.8ರವರೆಗೆ
*ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್: ಡಿ.8ರಿಂದ ಫೆ.8ರವರೆಗೆ
*ಕೆಆರ್‌ಎಸ್ ಬೆಂಗಳೂರು-ಧರ್ಮಾವರಂ ಮೆಮು: ಡಿ.8ರಿಂದ ಫೆ.8ರವರೆಗೆ
*ಹಿಂದೂಪುರ-ಗುಂತಕಲ್ ಡೆಮು: ಡಿ.8ರಿಂದ ಫೆ.9ರವರೆಗೆ
*ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮೆಮು: ಡಿ.8ರಿಂದ ಫೆ.2ರವರೆಗೆ
ಜನರಲ್ ಬೋಗಿ, ಸ್ಲೀಪರ್ ಕೋಚ್ ಸಂಖ್ಯೆ ಕಡಿತಗೊಳಿಸಿದ್ದೇ ರೈಲುಗಳಲ್ಲಿ ಜನದಟ್ಟಣೆಗೆ ಕಾರಣ? ರೈಲ್ವೆ ಸಚಿವರ ಸ್ಪಷ್ಟನೆ..