Asianet Suvarna News Asianet Suvarna News

ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ: ಅದ್ರಲ್ಲೂ ಬೆಂಗ್ಳೂರಿಗರಿಗೆ ಎಚ್ಚರಿಕೆ ಕೊಟ್ಟ KSNDMC

ಇಷ್ಟು ದಿನ ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಇದೀಗ ಮಳೆಕಾಟ ಶುರುವಾಗಲಿದೆ. ಹೀಗಂತ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

likely heavy rainfall  in Karnataka several districts Next 5 Days
Author
Bengaluru, First Published Jun 26, 2020, 3:05 PM IST

ಬೆಂಗಳುರು, (ಜೂನ್.26):  ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಇದು ಇನ್ನು 5 ದಿನಗಳ ಕಾಲ ಮಳೆರಾಯನ ಆರ್ಭಟ  ಮುಂದುವರೆಯಲಿದೆ ಎಂದು ಸುವರ್ಣನ್ಯೂಸ್‌ಗೆ ಹವಾಮಾನ ಇಲಾಖೆ ನಿರ್ದೇಶಕ ಚನ್ನಬಸವನಗೌಡ ಪಾಟೀಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಲಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರಲ್ಲಿ ವರುಣನ ಅಬ್ಬರ: ಮೈಸೂರು ರಸ್ತೆಯಲ್ಲಿ ಓಡಾಡೋರೇ ಎಚ್ಚರ..!

ಅರಬ್ಬೀ ಸಮುದ್ರದಲ್ಲಿ  ಸುಳಿಗಾಳಿ ವೇಗದಲ್ಲಿ ಬಿಸುತ್ತಿರುವ  ಹಿನ್ನಲೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಪೂರ್ವ ‌ಮುಂಗಾರುಗಿಂತ ಕಡಿಮೆ ಪ್ರಮಾಣದಲ್ಲಿ ಗುಡಗು ಸಿಡಿಲು ಬೀಳುವ ಸಾಧ್ಯತೆ ಇದೆ.

ಬೆಂಗಳೂರಿಗರೇ ಎಚ್ಚರ ಎಚ್ಚರ
ಹೌದು...ಮೊದಲು ಬೆಂಗಳೂರು ಜನತೆ ಎಚ್ಚರದಿಂದ ಇರಬೇಕಾಗುತ್ತದೆ. ಯಾಕಂದ್ರೆ ನಿನ್ನೆ (ಗುರುವಾರ) ಬೆಂಗಳೂರಿನಲ್ಲಿ 185.5 ಮಿ.ಮೀಟರ್ ದಾಖಲೆಯ ಮಳೆಯಿಂದಾಗಿ ಕೆಂಗೇರಿಯ ಬಳಿಯ ವೃಷಭಾವತಿ ನದಿ ಕಾಲುವೆಯ ತಡೆಗೋಡೆ ಕೊಚ್ಚಿ ಹೋಗಿದೆ. ಗೋಡೆ ಕುಸಿದ ಕಾರಣ ನದಿ ನೀರು ರಸ್ತೆಗೆ ನುಗ್ಗಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. 

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿಇಲ್ಲಿಯವರೆಗೂ ಇಷ್ಟು ಪ್ರಮಾಣದಲ್ಲಿ  ‌ಮಳೆಯಾಗಿಲ್ಲ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಸಂಜೆ ವೇಳೆ ಭಾರೀ  ಮಳೆಯಾಗುವ ಸಾಧ್ಯತೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ಅವರು ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ಕೊಟ್ಟಿದ್ದು, ಮಳೆ ಬಂದ ಸಂದರ್ಭದಲ್ಲಿ ಜನ ಎಚ್ಚರದಿಂದ ಇರಬೇಕಾಗುತ್ತೆದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Follow Us:
Download App:
  • android
  • ios