ಬೆಂಗಳೂರು ಕಂಬಳದ ರೂವಾರಿ, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನ, ಪುತ್ತೂರು ಮೂಲದ 58 ವರ್ಷದ ಸುಂದರ್ ರಾಜ್ ರೈ ಮಲ್ಲೇಶ್ವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರೆ.
- Home
- News
- State
- Karnataka News Live: ಬೆಂಗಳೂರು ಕಂಬಳದ ರೂವಾರಿ, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನ
Karnataka News Live: ಬೆಂಗಳೂರು ಕಂಬಳದ ರೂವಾರಿ, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನ

ಬೆಂಗಳೂರು: ನವೆಂಬರ್ 15 ರಿಂದ 20 ಅವಧಿ ನಡುವೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ. ನವೆಂಬರ್ 19ರಂದು ರಾಜ್ಯಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗಮಿಸುವ ಸಾಧ್ಯತೆಗಳಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಹೆಚ್ಚು ಆಸಕ್ತಿ ವಹಿಸಿಕೊಂಡು ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಆಗಮಿಸಿದ ಸಂದರ್ಭದಲ್ಲಿ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ರಾಹುಲ್ ಗಾಂಧಿ ರಾಜ್ಯ ಪ್ರವಾಸದ ವೇಳೆ ಕೆಲ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳಿವೆ ಎಂಬ ಚರ್ಚೆಗಳು ಕಾಂಗ್ರೆಸ್ ಪಡಸಾಲೆಯಲ್ಲಿ ನಡೆಯುತ್ತಿವೆ.
Karnataka News Live 23 October 2025ಬೆಂಗಳೂರು ಕಂಬಳದ ರೂವಾರಿ, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಹೃದಯಾಘಾತದಿಂದ ನಿಧನ
Karnataka News Live 23 October 2025ರಾಜ್ಯದ ಮುಧೋಳ ನಾಯಿಗಳಿಗೆ ಹೈರಿಸ್ಕ್ ಕಮಾಂಡೋ ತರಬೇತಿ - ಬಿಎಸ್‌ಎಫ್‌ನ ಹೊಸ ಪ್ರಯೋಗ
ದೇಸೀ ನಾಯಿ ತಳಿಗಳಾದ ಕರ್ನಾಟಕದ ಮುಧೋಳ ಮತ್ತು ಉತ್ತರ ಭಾರತದ ರಾಂಪುರ ಬೇಟೆನಾಯಿಗಳನ್ನು ಇದೀಗ ಹೈರಿಸ್ಕ್ ಕಮಾಂಡೋ ಕಾರ್ಯಾಚರಣೆಗಳಲ್ಲೂ ಬಳಸಲು ಭಾರತೀಯ ಗಡಿ ಭದ್ರತಾ ಪಡೆ ಮುಂದಾಗಿದೆ.
Karnataka News Live 23 October 2025ರೇಣುಕಾಸ್ವಾಮಿ ಕೊಲೆ ಆರೋಪಿ ತಂದೆ ನಿಧನ, ಅಂತ್ಯಕ್ರಿಯೆಗೆ ತೆರಳಲು ಕೋರ್ಟ್ ಅನುಮತಿ
ರೇಣುಕಾಸ್ವಾಮಿ ಕೊಲೆ ಆರೋಪಿ ತಂದೆ ನಿಧನ, ಅಂತ್ಯಕ್ರಿಯೆಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಕಾಮಾಕ್ಷಿಪಾಳ್ಯ ಪೊಲೀಸರಿಗೆ ಇಮೇಲ್ ಮೂಲಕ ಕೋರ್ಟ್ ಸೂಚನೆ ನೀಡಿದೆ. ನಾಳೆ ಜೈಲಿನಿಂದ ಕರೆತರಲು ಪೊಲೀಸ್ ಸಿದ್ದತೆ ಮಾಡಿಕೊಂಡಿದೆ.
Karnataka News Live 23 October 2025ಕಾಂಗ್ರೆಸ್ ಸಂವಿಧಾನವನ್ನೇ ಐಸಿಯುನಲ್ಲಿ ಇಟ್ಟ ಪಕ್ಷ - ವಿಪ ಸದಸ್ಯ ಸಿ.ಟಿ. ರವಿ ಟೀಕೆ
ಸಂವಿಧಾನವನ್ನೇ ಐಸಿಯುನಲ್ಲಿಟ್ಟ ಕಾಂಗ್ರೆಸ್ಸಿಗೆ ಕೆಲವು ಹಳೇ ಚಾಳಿಗಳಿವೆ. ಅವು ಆಗಾಗ ಮರುಕಳಿಸುತ್ತವೆ. ಹುಣ್ಣಿಮೆ, ಅಮಾವಾಸ್ಯೆ ಬಂದಾಗ ಕೆಲವರಿಗೆ ಕೆದರುತ್ತಂತೆ, ಹಾಗಾಗಿ ಆರೆಸ್ಸೆಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಕುಟುಕಿದರು.
Karnataka News Live 23 October 2025ಕೋಟಿ ಕೋಟಿ ಹಣ ಇದ್ದರೂ ಹೈಸ್ಕೂಲು ಓದುತ್ತಿರೋ ಸ್ವಂತ ತಂಗಿಗೆ ಬಿಡಿಗಾಸೂ ಕೊಡಲ್ವಂತೆ ರಶ್ಮಿಕಾ ಮಂದಣ್ಣ!
ಸ್ವಂತ ತಂಗಿಗೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಹೀಗೆ ಮಾಡುತ್ತಾರೆ ಎಂದರೆ ಯಾರೇ ಅದರೂ ನಂಬುವುದು ಕಷ್ಟ. ಅದರೂ ಈ ಸಂಗತಿ ಸತ್ಯ. ಕಾರಣ, ಇದನ್ನು ಸ್ವತಃ ನಟಿ ರಶ್ಮಿಕಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾನು ತೀರಾ ಸಾಮಾನ್ಯ ಮಧ್ಯಮ ಕುಟುಂಬದಿಂದ ಬಂದವಳು. ಮುಂದೆ ಓದಿ..
Karnataka News Live 23 October 2025ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ - ಸಚಿವ ಎಚ್.ಕೆ. ಪಾಟೀಲ
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
Karnataka News Live 23 October 2025ಬಿಜೆಪಿಯಲ್ಲಿ ಇದ್ದಿದ್ರೆ ಲಕ್ಷ್ಮಣ ಸವದಿ ದೊಡ್ಡ ಲೀಡರ್ ಆಗ್ತಿದ್ದ - ಶಾಸಕ ರಮೇಶ್ ಜಾರಕಿಹೊಳಿ
ಬಿಜೆಪಿಯಲ್ಲಿ ಸವದಿ ಇದ್ದಿದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ. ಕಾಂಗ್ರೆಸ್‌ನಲ್ಲಿ ಬರೀ 5 ವರ್ಷ ಶಾಸಕರಾಗಿ ಕೆಲಸ ಮಾಡಬಹುದು. ಬಿಜೆಪಿ ಬಿಟ್ಟು ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡ ಎಂದು ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
Karnataka News Live 23 October 2025ಅದೃಷ್ಟ ಕೈಕೊಟ್ರೂ ಕ್ರೇಜ್ ಕಮ್ಮಿಯಾಗಿಲ್ಲ.. ಸಾಲು ಸಾಲು ಆಫರ್‌ಗಳಿಂದ ಸಖತ್ ಬ್ಯುಸಿಯಾದ ಕನ್ನಡತಿ ನಟಿ ಯಾರು?
ಬಾಲಿವುಡ್‌ನಲ್ಲಿ ಶ್ರೀಲೀಲಾಗೆ ಸಾಲು ಸಾಲು ಆಫರ್‌ಗಳು ಸಿಗುತ್ತಿವೆ. ಹಿಂದಿ ಚೊಚ್ಚಲ ಚಿತ್ರಕ್ಕೂ ಮುನ್ನವೇ ಎರಡನೇ ಸಿನಿಮಾ ಆಫರ್ ಪಡೆದಿದ್ದಾರೆ. ಸದ್ಯ ಆಶಿಕಿ 3ರಲ್ಲಿ ನಟಿಸುತ್ತಿರುವ ಶ್ರೀಲೀಲಾ, ದೋಸ್ತಾನಾ 2ರಲ್ಲೂ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ.
Karnataka News Live 23 October 2025ಇಷ್ಟೆಲ್ಲಾ ಆದ್ಮೇಲೆ ಕರ್ಣನಿಗೆ ಮತ್ತೊಂದು ಮಹತ್ವದ ಜವಾಬ್ದಾರಿ - ಮೊದಲ ರಾತ್ರಿಯಲ್ಲಿ ಬಯಲಾಗುವುದೇ ಸತ್ಯ?
Karnataka News Live 23 October 2025ಕಾಂಗ್ರೆಸ್ ಹೈಕಮಾಂಡ್ ಇರುವ ಪಕ್ಷ, ಮೈಸೂರು ಅರಮನೆಯಲ್ಲ - ಯತೀಂದ್ರ ವಿರುದ್ಧ ಶಿವಗಂಗಾ ಬಸವರಾಜ ವಾಗ್ದಾಳಿ
ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಡಿಕೆಶಿ ಬಣದ ಶಾಸಕರು ಆ್ಯಕ್ಟೀವ್ ಆಗಿದ್ದು, ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಪರಮಾಪ್ತ, ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
Karnataka News Live 23 October 2025ಚಾಮರಾಜನಗರ ಗಡಿ ಗುಮಟಾಪುರ ಗ್ರಾಮದಲ್ಲಿ ಗೊರೆ ಹಬ್ಬದ ಸಂಭ್ರಮ - ಸಗಣಿಯಲ್ಲಿ ಮಿಂದೆದ್ದ ಜನ!
ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ತಪ್ಪದೆ ಗೊರೆ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ.
Karnataka News Live 23 October 2025Amruthadhaare - ಮಲ್ಲಿ ಕಿತಾಪತಿ- ಅಪ್ಪನ ಬಳಿ ಹೋಗಿ ಅಮ್ಮನ ಕೈಯಲ್ಲಿ ತಗ್ಲಾಕ್ಕೊಂಡ ಆಕಾಶ್! ಮನೆ ಶಿಫ್ಟ್?
Karnataka News Live 23 October 2025ಹೌದು.. ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದು ನಿಜ, ಆದರೆ.. ಕೊನೆಗೂ ಬಾಯ್ಬಿಟ್ಟ ಜಾನ್ವಿ ಕಪೂರ್!
ಜಾನ್ವಿ ಕಪೂರ್ ತನ್ನ ಪ್ಲಾಸ್ಟಿಕ್ ಸರ್ಜರಿ ವಿಷಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಪ್ಲಾಸ್ಟಿಕ್ ಸರ್ಜರಿ ವಿಷಯದಲ್ಲಿ ತಾನು ಎಷ್ಟು ಬುದ್ಧಿವಂತಿಕೆಯಿಂದ ನಡೆದುಕೊಂಡೆ ಅನ್ನೋದನ್ನು ಜಾನ್ವಿ ಹೇಳಿದ್ದಾರೆ.
Karnataka News Live 23 October 2025ಆಡಿಷನ್ ಹೆಸರಲ್ಲಿ ಮೋಸ ಹೋಗದಿರಿ.. ಸಾರ್ವಜನಿಕರಿಗೆ ಜೀ ಕನ್ನಡ ವಾಹಿನಿ ಎಚ್ಚರಿಕೆ
ತನ್ನ ಹೊಸತನದಿಂದ ಯಾವಾಗಲೂ ವೀಕ್ಷಕರಿಗೆ ಹೊಸತನವನ್ನು ಕೊಟ್ಟು ಮನರಂಜಿಸುವ ಜೀ ಕನ್ನಡ ವಾಹಿನಿ ಈಗ 'ಆಡಿಷನ್ ಹೆಸರಲ್ಲಿ ಮೋಸ ಹೋಗದಿರಿ' ಎಂದು ಸಾವರ್ಜನಿಕರಿಗೆ ಸೂಚನೆಯನ್ನು ಕೊಟ್ಟಿದೆ.
Karnataka News Live 23 October 2025ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್ ಮಾಡಿದ್ರಿ? Suhaana Syed ಉತ್ತರ ಕೇಳಿ
'ಸರಿಗಮಪ' ಖ್ಯಾತಿಯ ಗಾಯಕಿ ಸುಹಾನಾ ಸೈಯದ್, ತಮ್ಮ 16 ವರ್ಷಗಳ ಸ್ನೇಹಿತ ನಿತಿನ್ ಶಿವಾಂಶ್ ಅವರನ್ನು ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿವಾಹವಾಗಿದ್ದಾರೆ. ಈ ಅಂತರ್‌ಧರ್ಮೀಯ ವಿವಾಹದ ಕುರಿತ ಚರ್ಚೆಗಳ ನಡುವೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
Karnataka News Live 23 October 2025BBK 12 ಕಾವ್ಯಾಳ ಮಾತು ಕಟ್ಟಿಕೊಂಡು ಕಾಮಿಡಿ ಪೀಸ್ ಆಗೋದ ಗಿಲ್ಲಿ ನಟ; ಗಡ್ಡ ತೆಗೆಸಲು ಹೋಗಿ ಭಾರೀ ಪರದಾಟ!
Karnataka News Live 23 October 2025ರಾಜ ಎಲ್ಲಿದ್ದರೂ ರಾಜನೇ.. ಡಾರ್ಲಿಂಗ್ ಪ್ರಭಾಸ್ ಹೀರೋ ಆಗದಿದ್ರೆ ಏನಾಗ್ತಿದ್ರು?
ಪ್ರಭಾಸ್ ಸದ್ಯ ಭಾರತವೇ ಹೆಮ್ಮೆಪಡುವ ಹೀರೋ ಆಗಿ ಬೆಳೆದಿದ್ದಾರೆ. ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹಾಗಾದ್ರೆ ಡಾರ್ಲಿಂಗ್ ಸಿನಿಮಾಗೆ ಬಂದಿಲ್ಲ ಅಂದಿದ್ರೆ, ಹೀರೋ ಆಗದಿದ್ರೆ ಏನ್ ಮಾಡ್ತಿದ್ರು ಗೊತ್ತಾ? ರಾಜ ಅಂದ್ರೆ ರಾಜನೇ.
Karnataka News Live 23 October 2025Lakshmi Nivasa - ವಿಶ್ವನ ಜೊತೆ ಚಿನ್ನುಮರಿಗೂ ಹಳ್ಳತೋಡಿದ ಜಯಂತ್ - ಶ್ರದ್ಧಾಂಜಲಿ ಕಾರ್ಡ್ ಪ್ರಿಂಟ್!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯವನ್ನು ಅರಿತ ಸೈಕೋ ಜಯಂತ್, ಆಕೆಗೆ ಮತ್ತು ವಿಶ್ವನಿಗೆ ಹಳ್ಳ ತೋಡಲು ಭರ್ಜರಿ ಪ್ಲ್ಯಾನ್ ಮಾಡಿದ್ದಾನೆ. ಪತ್ನಿಯ ಶ್ರದ್ಧಾಂಜಲಿ ಕಾರ್ಡ್‌ನಲ್ಲಿ ಆಕೆಯ ಫೋಟೋ ಮುದ್ರಿಸಿ, ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ.
Karnataka News Live 23 October 2025ಮಕ್ಕಳು ದೊಡ್ಡವರಾದ ಮೇಲೆ ಸನ್ಯಾಸಿಯಾಗುತ್ತೇನೆ - ಶಾಕಿಂಗ್ ಹೇಳಿಕೆ ಕೊಟ್ಟ ಪವನ್ ಮಾಜಿ ಪತ್ನಿ ರೇಣು ದೇಸಾಯಿ!
ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ರೇಣು ದೇಸಾಯಿ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಸನ್ಯಾಸಿಯಾಗುವುದಾಗಿ ಹೇಳಿ ಶಾಕ್ ನೀಡಿದ್ದಾರೆ.
Karnataka News Live 23 October 2025ಏಷ್ಯಾದಲ್ಲಿ ನಂಬರ್ 1 ತ್ಯಾಜ್ಯ ನೀರಿನ ಮರುಬಳಕೆ; ಬೆಂಗಳೂರಿನಲ್ಲಿ ನ.6ರಿಂದ ರಾಷ್ಟ್ರೀಯ ಕಾರ್ಯಾಗಾರ
ನೀತಿ ಆಯೋಗ, ಕರ್ನಾಟಕ ಸರ್ಕಾರ ಮತ್ತು BWSSB ಸಹಯೋಗದಲ್ಲಿ ಬೆಂಗಳೂರಿನಲ್ಲಿ 'ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆ' ಕುರಿತು ರಾಷ್ಟ್ರೀಯ ಕಾರ್ಯಾಗಾರ ಆಯೋಜನೆ. ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಏಷ್ಯಾಕ್ಕೆ ಮಾದರಿಯಾದ ಬೆಂಗಳೂರಿನ ಯಶಸ್ಸಿನ ಆಧಾರದ ಮೇಲೆ, ಜಲ-ಸುಭದ್ರ ಭಾರತಕ್ಕಾಗಿ ರಾಷ್ಟ್ರೀಯ ಯೋಜನೆ.