ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ರಿಷಬ್ ಶೆಟ್ಟಿ ಈ ಉಡುಗೊರೆ ನೀಡಿದ್ದಾರೆ. ಇದಕ್ಕೆ ಬಿಗ್ ಬಿ ಉತ್ತರದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
- Home
- News
- State
- Karnataka News Live: ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ
Karnataka News Live: ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾ*ಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಕೆ.ಆರ್.ನಗರದ ಸಂತ್ರಸ್ತೆಯ ಅಪಹರಣ ಆರೋಪದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಆರೋಪಿಗಳಾದ ಕೆ.ಎ.ರಾಜಗೋಪಾಲ್ ಮತ್ತು ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ 7ನೇ ಆರೋಪಿ ಕೆ.ಎ.ರಾಜಗೋಪಾಲ್ ಮತ್ತು 8ನೇ ಆರೋಪಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ಸಂಬಂಧ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು ಸೋಮವಾರ ವಿಚಾರಣೆ ನಡೆಸಿ ಇಬ್ಬರು ಆರೋಪಿಗಳ ಅರ್ಜಿ ವಜಾಗೊಳಿಸಿ ಆದೇಶಿಸಿದರು. ಇದೇ ರೀತಿಯ ಮನವಿ ಸಂಬಂಧ ಪ್ರಕರಣದ 3ನೇ ಆರೋಪಿ ಸುಜಯ್, 4ನೇ ಆರೋಪಿ ಎಚ್.ಎನ್.ಮಧು ಮತ್ತು 5ನೇ ಆರೋಪಿ ಎಚ್ .ಡಿ.ಮನುಗೌಡ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಅ.18ಕ್ಕೆ ಕಾಯ್ದಿರಿಸಿದರು.
Karnataka News Live 14 October 2025 ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ
Karnataka News Live 14 October 2025 ದಿವಂಗತ ನಟ ನವೀನ್ ಮಯೂರ್ ಕುಟುಂಬದಲ್ಲಿ ಮತ್ತೊಂದು ಅಕಾಲಿಕ ಸಾವು, ತಮ್ಮ ಶ್ರೇಯಸ್ ಕೂಡ ನಿಧನ!
Actor Naveen Mayurs Brother Shreyas Dies of Heart Attack ದಿವಂಗತ ನಟ ನವೀನ್ ಮಯೂರ್ ಅವರ ಸಹೋದರ, ಪತ್ರಕರ್ತ ಶ್ರೇಯಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಅವರ ತಂದೆ ರೈಲು ಅಪಘಾತದಲ್ಲಿ ಸಾವು ಕಂಡಿದ್ದರು.
Karnataka News Live 14 October 2025 ಪ್ರಶಾಂತ್ ಆಗಿದ್ದ ನಟ ರಿಷಬ್ ಶೆಟ್ಟಿ ಆಗಿದ್ದು ಹೇಗೆ? 'R' ತಂದ ಅದೃಷ್ಟ- ಕಾಂತಾರಾ ಸ್ಟಾರ್ ರೋಚಕ ಸ್ಟೋರಿ
ಕಾಂತಾರ ಚಿತ್ರದ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಜ್ಯೋತಿಷ ಮತ್ತು ಸಂಖ್ಯಾಶಾಸ್ತ್ರದ ಸಲಹೆಯ ಮೇರೆಗೆ ತಮ್ಮ ಹೆಸರನ್ನು ಬದಲಿಸಿಕೊಂಡ ನಂತರ ಅವರ ವೃತ್ತಿಜೀವನದಲ್ಲಿ ಅದೃಷ್ಟ ಕೈಹಿಡಿಯಿತು. 'R' ಅಕ್ಷರದಿಂದ ಆರಂಭವಾದ ಹೆಸರು ಯಶಸ್ಸಿಗೆ ಕಾರಣವಾಯಿತು.
Karnataka News Live 14 October 2025 'ನನ್ನ ತಲೆಕೂದಲು ಎಲ್ಲಿ..?' ಟೈಮ್ ಮ್ಯಾಗಝೀನ್ ಪ್ರಕಟಿಸಿದ ಕವರ್ ಫೋಟೋಗೆ ಟ್ರಂಪ್ ಆಕ್ರೋಶ!
Trump Fumes at Time Magazine's Worst Photo Cover Despite Good Article ಟೈಮ್ ನಿಯತಕಾಲಿಕೆಯು ತಮ್ಮ ಕೆಟ್ಟ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Karnataka News Live 14 October 2025 ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್, 30*40 ನಿವೇಶನಗಳಿಗೆ ಓಸಿ ವಿನಾಯಿತಿ
ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್, 30*40 ನಿವೇಶನಗಳಿಗೆ ಓಸಿ ವಿನಾಯಿತಿ ನೀಡಲಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಕೆ ಅಧಿಕೃತ ಆದೇಶ ಹೊರಡಿಸಿದೆ. ಏನಿದು ನಿವೇಷನಗಳ ಒಸಿ? ಹೊಸ ಆದೇಶದಲ್ಲಿ ಏನಿದೆ?
Karnataka News Live 14 October 2025 8.5 ಕೋಟಿ ರೂ. ಬೇಕಾದ್ರೆ ಬೇಗ ಒಪ್ಪಿಕೊಳ್ಳಿ! ನಿಮ್ಮ ಕನಸಿಗೆ ರೆಕ್ಕೆ ಬರೋ ಟೈಮಿದು- ಏನಿದು ಹೊಸ ಷೋ?
ಜೀ ಕನ್ನಡ ವಾಹಿನಿಯು 'ಶಾರ್ಕ್ ಟ್ಯಾಂಕ್' ಮಾದರಿಯ 'ಐಡಿಯಾಬಾಜ್' ಎಂಬ ಹೊಸ ಬ್ಯುಸಿನೆಸ್ ರಿಯಾಲಿಟಿ ಷೋ ಅನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ, ಉದ್ಯಮಿಗಳು ತಮ್ಮ ವ್ಯವಹಾರ ಕಲ್ಪನೆಗಳನ್ನು ಹೂಡಿಕೆದಾರರ ಮುಂದೆ ಮಂಡಿಸಿ, ತಮ್ಮ ಕನಸುಗಳಿಗೆ ಬಂಡವಾಳವನ್ನು ಪಡೆಯಲಿದ್ದಾರೆ.
Karnataka News Live 14 October 2025 ಅಮಿತಾಭ್ ಜೊತೆ ಅಧಿಕಪ್ರಸಂಗ ಮಾಡಿದ ಬಾಲಕನ ಸುದ್ದಿ ನಡುವೆಯೇ ಯದುವೀರ ದತ್ತ ಮಾತೀಗ ವೈರಲ್
Karnataka News Live 14 October 2025 10 ಮಕ್ಕಳು, 3 ಹೆಂಡ್ತಿಯರ ಸಾಕಲು ಕಳ್ಳತನಕ್ಕೆ ಇಳಿದಿದ್ದ ಫೇಕ್ ಬಾಬಾ ದಾದಾಪೀರ್ ಬಂಧನ!
Fake Baba Dadapir Arrested for Gold Theft ಮನೆಯಲ್ಲಿನ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ನಂಬಿಸಿ ವಿಶೇಷ ಪೂಜೆಯ ನೆಪದಲ್ಲಿ ಚಿನ್ನಾಭರಣಗಳನ್ನು ಕದಿಯುತ್ತಿದ್ದ ದಾದಾಪೀರ್ ಎಂಬ ನಕಲಿ ಬಾಬಾನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
Karnataka News Live 14 October 2025 ಆಟೋ ಡ್ರೈವರ್ ನಂಬಿಹೋದ ಕಾಲೇಜು ಹುಡ್ಗೀರು; ಗ್ಯಾಂಗ್‌ರೇ*ಪ್ ತಪ್ಪಿಸಿ 4 ಜನರ ಬಂಧಿಸಿದ ಪೊಲೀಸರು!
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ, ಸಾಮೂಹಿಕ ಅತ್ಯಾಚಾ*ರ ಯತ್ನವನ್ನು ವಿಫಲಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
Karnataka News Live 14 October 2025 ಇದು Bigg Boss ಅಲ್ಲ, ಪೋ*ರ್ನ್ ಷೋ ಅನ್ಬೇಡಿ ಮತ್ತೆ! ಅಷ್ಟೆಲ್ಲಾ ಕ್ಯಾಮೆರಾ ಇದ್ರೂ ಕಂಟ್ರೋಲೇ ಆಗಿಲ್ಲ ನೋಡಿ
ಬಿಗ್ಬಾಸ್ ಶೋ ಸ್ಕ್ರಿಪ್ಟೆಡ್ ಎನ್ನುವ ಚರ್ಚೆಗಳ ನಡುವೆಯೇ, ಹಿಂದಿ ಬಿಗ್ಬಾಸ್ನಲ್ಲಿ ನಡೆದ ಲಿಪ್ಲಾಕ್ ಘಟನೆ ವಿವಾದ ಸೃಷ್ಟಿಸಿದೆ. ಟಿಆರ್ಪಿಗಾಗಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಕನ್ನಡ ಬಿಗ್ಬಾಸ್ನಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂಬುದು ಸದ್ಯದ ಸಮಾಧಾನ.
Karnataka News Live 14 October 2025 ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ತಮಿಳುನಾಡು ಮೂಲದ ಅಪರಾಧಿಗೆ 30 ವರ್ಷಗಳ ಶಿಕ್ಷೆ ವಿಧಿಸಿದ ಬೆಳಗಾವಿ ಕೋರ್ಟ್
ಅಪ್ರಾಪ್ತೆ ಮೇಲೆ ಅತ್ಯಾ*ಚಾರ ಎಸಗಿದ ತಮಿಳುನಾಡು ಮೂಲದ ಆರೋಪಿಗೆ ಬೆಳಗಾವಿ ಪೋಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ, ಪತ್ನಿಯನ್ನು ಕೊಲೆಗೈದ ಪತಿಗೆ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ.
Karnataka News Live 14 October 2025 ಕಾವೇರಿಯಲ್ಲಿ ನೀರಿನ ಹರಿವು ಏರಿಕೆ, ಹಾರಂಗಿ ಜಲಾಶಯದಿಂದ ಮುನ್ನಚ್ಚರಿಕೆಯಿಂದ ನೀರು ಬಿಟ್ಟು ತಪ್ಪಿದ ಪ್ರವಾಹ
Karnataka News Live 14 October 2025 ಧರ್ಮಸ್ಥಳ ವಿರುದ್ಧ ಮಾನಹಾನಿಕರ ವೀಡಿಯೋ ಡಿಲೀಟ್ ಮಾಡಲು ಕೋರ್ಟ್ ಆದೇಶ; ಯ್ಯೂಟೂಬರ್‌ಗಳಿಗೆ 3 ದಿನ ಗಡುವು!
ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿಗಳ ವಿರುದ್ಧ ಮಾನಹಾನಿಕರ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಯೂಟ್ಯೂಬ್ ಚಾನೆಲ್‌ಗಳಿಗೆ ಬೆಂಗಳೂರಿನ ನ್ಯಾಯಾಲಯವು ಕಠಿಣ ಆದೇಶ ನೀಡಿದೆ. ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅಡಿಯಲ್ಲಿ, ಆಕ್ಷೇಪಾರ್ಹ ವೀಡಿಯೋ 3 ದಿನದಲ್ಲಿ ಡಿಲೀಟ್ ಮಾಡಲು ಆದೇಶ.
Karnataka News Live 14 October 2025 ಮೈಸೂರು ಬೃಹತ್ ಉದ್ಯೋಗ ಮೇಳ, 24000 ಕ್ಕೂ ಹೆಚ್ಚು ಯುವಕರ ನೋಂದಣಿ, 221 ಕಂಪನಿಗಳು ಭಾಗಿ, ಯಾವಾಗ? ಇಲ್ಲಿದೆ ವಿವರ
ಮೈಸೂರಿನಲ್ಲಿ ಅಕ್ಟೋಬರ್ 17 ರಂದು ಮೆಗಾ ವಿಭಾಗೀಯ ಮಟ್ಟದ ಉದ್ಯೋಗ ಮೇಳ ನಡೆಯಲಿದ್ದು, 221 ಕಂಪನಿಗಳು 45,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲಿವೆ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಈ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವೀಧರರು ಸೇರಿದಂತೆ ಯುವನಿಧಿ ಫಲಾನುಭವಿಗಳೂ ಭಾಗವಹಿಸಬಹುದು.
Karnataka News Live 14 October 2025 'ಬೆಂಗಳೂರು ಹಣೆಬರಹ ಬದಲಾಗೋದಿಲ್ಲ..' ಒಂದೇ ಒಂದು ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದಕ್ಕೆ ಇಡೀ ಔಟರ್ ರಿಂಗ್ ರೋಡ್ ಜಾಮ್!
Single BMTC Bus Paralyzes Bengaluru ORR Traffic for Hours ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ (ORR) ಒಂದೇ ಒಂದು ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಈ ಘಟನೆಯಿಂದಾಗಿ ಟೆಕ್ ಕಾರಿಡಾರ್‌ನಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಸಿಲುಕಿಕೊಂಡಿದ್ದರು.
Karnataka News Live 14 October 2025 ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತೆ? ದರ ಕುಸಿತವಾಗುವ ಸನ್ನಿವೇಶ ಬಿಚ್ಚಿಟ್ಟ ಆರ್ಥಿಕ ತಜ್ಞ ವಿಜಯ್ ರಾಜೇಶ್!
Karnataka News Live 14 October 2025 ಫಸ್ಟ್‌ನೈಟ್ ಮರುದಿನವೇ ವಧು ಪರಾರಿ, ಮನೆಯಲ್ಲಿದ್ದ ಹಣ-ಚಿನ್ನಾಭರಣವೂ ರಾಬರಿ; 10 ಜನರಿಂದ ದೂರು!
ಮದುವೆ ಹೆಸರಿನಲ್ಲಿ ದೊಡ್ಡ ವಂಚನೆಯ ಜಾಲವೊಂದು ಬಯಲಾಗಿದೆ. ಫಸ್ಟ್‌ನೈಟ್ ದಿನ ಕುಟುಂಬಕ್ಕೆ ಮತ್ತಿನ ಔಷಧಿ ನೀಡಿ, ಮರುದಿನ ಬೆಳಗ್ಗೆ ವಧು ಹಣ ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಾಳೆ. ಈ ಗ್ಯಾಂಗ್‌ನಿಂದ 10ಕ್ಕೂ ಹೆಚ್ಚು ಯುವಕರು ವಂಚನೆಗೊಳಗಾಗಿದ್ದಾರೆ.
Karnataka News Live 14 October 2025 ಕೇರಳ - ಡ್ರಗ್ ಮಾರಿ ಕಂಡವರ ಮಕ್ಕಳ ಬಾವಿಗೆ ತಳ್ಳುತ್ತಿದ್ದ ಮಹಿಳಾ ವಕೀಲೆ, ಪುತ್ರ ಅರೆಸ್ಟ್
lawyer's dark secret: ಡ್ರಗ್ ಮಾರುತ್ತಿದ್ದ ವೇಳೆ ಕೇರಳದಲ್ಲಿ ಮಹಿಳಾ ವಕೀಲೆ ಹಾಗೂ ಆಕೆಯ 18 ವರ್ಷದ ಟೀನೇಜ್ ಮಗ ಸಿಕ್ಕಿಬಿದ್ದಿದ್ದು, ಘಟನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಪೊಲೀಸರು ಇದರ ಹಿಂದೆ ದೊಡ್ಡ ಜಾಲ ಇರುವುದನ್ನು ಪತ್ತೆ ಮಾಡಿದ್ದಾರೆ.
Karnataka News Live 14 October 2025 ಬಿಜೆಪಿಗರ ಡಿಎನ್‌ಎಯಲ್ಲೇ ಆ ತತ್ವವಿದೆ, ನೀಲಿ ಚಿತ್ರದ ನಾಯಕನೂ, ಚೀಟಿ ರವಿಯೂ ಅಲ್ಲೇ ಇರೋದು - ರಮೇಶ್ ಬಾಬು ಗುಡುಗು
ಎಂಎಲ್‌ಸಿ ರಮೇಶ್ ಬಾಬು ಅವರು, ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್ ಪತ್ರಕ್ಕೆ ವೈಯಕ್ತಿಕ ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜಿಬಿಎ ಸಭೆಯ ವಿವಾದವನ್ನು ಅನಗತ್ಯವಾಗಿ ಬೆಳೆಸಲಾಗುತ್ತಿದೆ ಬಿಜೆಪಿ ವಿವಾದಗಳನ್ನು ಮರೆತು ಮಾತನಾಡುತ್ತಿದೆ ಎಂದರು.
Karnataka News Live 14 October 2025 'ನೀವೇ ಯಾಕೆ ಗುಂಡಿ ಮುಚ್ಬಾರ್ದು..' ರಸ್ತೆಗುಂಡಿ ಬಗ್ಗೆ ಕಿರಣ್ ಮಜುಂದಾರ್ ಶಾ ಟ್ವೀಟ್‌ಗೆ ಎಂಬಿ ಪಾಟೀಲ್ ಕಿಡಿ!
MB Patil Slams Kiran Mazumdar-Shaw Over Infrastructure Criticism ಬೆಂಗಳೂರಿನ ಕಳಪೆ ಮೂಲಸೌಕರ್ಯದ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಅವರ ಟೀಕೆಗೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.