11:14 PM (IST) Aug 26

Karnataka latest News Live ಅನ್ನಭಾಗ್ಯ ಅಕ್ಕಿ ವಿದೇಶಕ್ಕೆ ಅಕ್ರಮ ರಫ್ತು - ಸರ್ಕಾರಿ ಗೋದಾಮಿನ ಸಹಾಯಕ ಚಂದ್ರಶೇಖರ್ ಅಮಾನತು

ಕೊಪ್ಪಳದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರಿ ಗೋದಾಮಿನ ಕಿರಿಯ ಸಹಾಯಕರನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
Read Full Story
11:00 PM (IST) Aug 26

Karnataka latest News Live ನನಗೆ ಗಂಡ-ಪ್ರೇಮಿ ಇಬ್ಬರೂ ಬೇಕು; ಗಂಡನ ಜೊತೆ 15 ದಿನ, ಪ್ರಿಯಕರನ ಜೊತೆ 15 ದಿನ ಇರುತ್ತೇನೆಂದ ಮಹಿಳೆ!

ನವವಿವಾಹಿತ ಮಹಿಳೆಯೊಬ್ಬಳು ಗಂಡ ಮತ್ತು ಪ್ರೇಮಿ ಇಬ್ಬರ ಜೊತೆಗೂ 15 ದಿನಗಳಂತೆ ಕಾಲ ಕಳೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಪಂಚಾಯಿತಿಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಪ್ರಿಯಕರನೊಂದಿಗೆ 10 ಬಾರಿ ಓಡಿ ಹೋಗಿದ್ದ ಈ ಮಹಿಳೆಯ ನಿರ್ಧಾರಕ್ಕೆ ಗಂಡ ಒಪ್ಪಿಗೆ ನೀಡಿದ್ದಾನೆ.

Read Full Story
09:44 PM (IST) Aug 26

Karnataka latest News Live 61ನೇ ಬರ್ತ್ ಡೇಗೆ ತಾಯಿ ಜೊತೆ ಮದ್ಯ ಕುಡಿದ ಮಗ; ಅಮ್ಮನ ರಿಯಾಕ್ಷನ್ ಹೇಗಿತ್ತು ಅಂತ ನೋಡಿ

ಮಗನೊಬ್ಬ ತಾಯಿಯ 61ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಮೊದಲ ಬಾರಿಗೆ ತಾಯಿಯೊಂದಿಗೆ ಮದ್ಯಪಾನ ಮಾಡಿ ಸಂಭ್ರಮಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಂಡುಬರುವ ಪ್ರೀತಿ ಮತ್ತು ಬಾಂಧವ್ಯ ಎಲ್ಲರ ಮನಗೆದ್ದಿದೆ.
Read Full Story
09:04 PM (IST) Aug 26

Karnataka latest News Live ಚಾಮುಂಡಿ ದೇವಾಲಯ ಹಿಂದೆ, ಇಂದು ಹಾಗೂ ಮುಂದೆಯೂ ಹಿಂದೂಗಳದ್ದೇ; ಡಿಕೆಶಿಗೆ, ಯದುವೀರ್ ಒಡೆಯರ್ ತಿರುಗೇಟು!

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ 'ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ' ಎಂಬ ಹೇಳಿಕೆಗೆ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ. ಚಾಮುಂಡಿ ಬೆಟ್ಟ ಹಿಂದೆಯೂ ಹಿಂದೂಗಳದ್ದೇ, ಈಗಲೂ ಮತ್ತು ಮುಂದೆಯೂ ಹಿಂದೂಗಳದ್ದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 

Read Full Story
08:23 PM (IST) Aug 26

Karnataka latest News Live Davanagere - ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ - ಸ್ಥಳೀಯರಲ್ಲಿ ತೀವ್ರ ಕುತೂಹಲ

ನಾಟಿ ಕೋಳಿಯೊಂದು ನೀಲಿ ಮೊಟ್ಟೆಯನ್ನಿಟ್ಟಿದೆ. ನಿತ್ಯ ಬಿಳಿ ಮೊಟ್ಟೆ ಇಡುತ್ತಿದ್ದ ಕೋಳಿ ಇದ್ದಕ್ಕಿದ್ದಂತೆ ನೀಲಿ ಮೊಟ್ಟೆ ಇಟ್ಟಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. 

Read Full Story
08:13 PM (IST) Aug 26

Karnataka latest News Live RSS ಗೀತೆ ಮೂಲಕ ಭಾರತಾಂಬೆಗೆ ನಮಸ್ಕರಿಸದೇ, ಇಟಲಿ ಮೇಡಂಗೆ ನಮಸ್ಕರಿಸಬೇಕಾ - ಡಿಕೆಶಿ ಕ್ಷಮೆಗೆ, ಆರ್. ಅಶೋಕ್ ಬೇಸರ!

ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಗೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಬೇಕೆಂಬ ಕಾಂಗ್ರೆಸ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ತಾಯ್ನಾಡಿಗೆ ನಮಸ್ಕರಿಸುವುದು ತಪ್ಪೇ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಡಿಕೆಶಿ ಕ್ಷಮೆ ಕೇಳಲೊಪ್ಪದೇ ರಾಜೀನಾಮೆ ನೀಡಬೇಕಿತ್ತು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.

Read Full Story
08:02 PM (IST) Aug 26

Karnataka latest News Live ಬೆಂಗಳೂರು ಟ್ರಾಫಿಕ್‌ ಪೊಲೀಸ್‌ ಮಾಹಿತಿ, 2024ರಿಂದ ಬಿಎಂಟಿಸಿಗೆ ಬಲಿಯಾಗಿದ್ದಾರೆ 80 ಜನ!

2024ರಿಂದ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಐದು ಮಾರಕ ಅಪಘಾತಗಳು ವರದಿಯಾಗಿವೆ. ಹೆಚ್ಚಿನ ಅಪಘಾತಗಳಿಗೆ ದ್ವಿಚಕ್ರ ವಾಹನ ಸವಾರರ ಅಜಾಗರೂಕತೆ ಕಾರಣ ಎಂದು ಬಿಎಂಟಿಸಿ ಹೇಳಿದೆ.
Read Full Story
07:51 PM (IST) Aug 26

Karnataka latest News Live ಆಸ್ತಿ ಗಾಗಿಯೇ ಸೃಷ್ಟಿಯಾದ ಪಾತ್ರ ಅನನ್ಯ ಭಟ್! ಉಡುಪಿ ಪರಿಕ ಅರಮನೆ ಹಕ್ಕು ಕೇಳುತ್ತಿರೋದ್ಯಾಕೆ ಸುಜಾತಾ ಭಟ್?

ಉಡುಪಿಯ ಪರಿಕಾ ಜಮೀನು ವಿವಾದದಲ್ಲಿ ಸುಜಾತಾ ಭಟ್ ಅವರ ಹಕ್ಕು ಪ್ರಶ್ನಾರ್ಹ ಎಂದು ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಹೇಳಿದ್ದಾರೆ. ಜಮೀನು ಧರ್ಮಸ್ಥಳ ಕ್ಷೇತ್ರಕ್ಕೆ ದಾನವಾಗಿದ್ದು, ಸುಜಾತಾ ಭಟ್ ಅವರ ತಂದೆಗೆ ಪರಿಹಾರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

Read Full Story
07:36 PM (IST) Aug 26

Karnataka latest News Live ಧರ್ಮಸ್ಥಳದಲ್ಲಿ ಎಷ್ಟೇ ಹುಡುಕಿದರೂ ಸಿಗದ ಮೂಳೆ ಪರಪ್ಪನ ಅಗ್ರಹಾರದ ರಸ್ತೆಯಲ್ಲೇ ಸಿಕ್ತು, ಆದ್ರೆ ಸುದ್ದಿಯಲ್ಲಿದೆ ಟ್ವಿಸ್ಟು!

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ತನಿಖೆಯ ನಂತರ, ವೈದ್ಯಕೀಯ ವಿದ್ಯಾರ್ಥಿನಿಯ ತಂದೆ ಅಧ್ಯಯನಕ್ಕೆ ಬಳಸಿದ ಮೂಳೆಗಳನ್ನು ಕಸದಲ್ಲಿ ಎಸೆದಿರುವುದು ಬೆಳಕಿಗೆ ಬಂದಿದೆ.
Read Full Story
07:26 PM (IST) Aug 26

Karnataka latest News Live ಕೋಟಿ ಕನ್ನಡಿಗರ ಪ್ರೀತಿ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ, ಯದುವೀರ್ ಅಂಥವರ ಸಂತತಿ ಹೆಚ್ಚಾಗಲಿ; ಬಾನು ಮುಷ್ತಾಕ್!

ದಸರಾ ಉದ್ಘಾಟನೆಗೆ ಆಯ್ಕೆಯಾದ ಬಗ್ಗೆ ಟೀಕಿಸಿದವರಿಗೆ ಸಾಹಿತಿ ಬಾನು ಮುಷ್ತಾಕ್ ತಿರುಗೇಟು ನೀಡಿದ್ದಾರೆ. ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ-ಅಭಿಮಾನವನ್ನು ಪಡೆದಿರುವ ನಾನು, ಒಂದಿಬ್ಬರ ಟೀಕೆಗಳಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಜನರೇ ಇಂಥವರಿಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿದರು.

Read Full Story
07:20 PM (IST) Aug 26

Karnataka latest News Live MBBS ಸೀಟು ನಿರಾಕರಣೆ, ವಿದ್ಯಾರ್ಥಿನಿಗೆ 15 ಲಕ್ಷ ಪರಿಹಾರ ನೀಡುವಂತೆ ಸಿದ್ದಾರ್ಥ ಸಂಸ್ಥೆಗೆ ಹೈಕೋರ್ಟ್‌ ಸೂಚನೆ!

ಭರವಸೆ ಪತ್ರವನ್ನು ಕಟ್ಟುಕಥೆ ಎಂದು ಕಾಲೇಜಿನವರು ಹೇಳಿದ್ದನ್ನು ನ್ಯಾಯಾಧೀಶರು ತಳ್ಳಿಹಾಕಿದರು, ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡಲಾಗಿಲ್ಲ ಎಂದು ಹೇಳಿದರು.

 

Read Full Story
07:12 PM (IST) Aug 26

Karnataka latest News Live ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್‌ ಗೆ ಬಿದ್ದ ಸೆಕ್ಯೂರಿಟಿ ಗಾರ್ಡ್‌ನ ರಕ್ಷಿಸಿದ ಪ್ರಯಾಣಿಕ!

ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಟ್ರ್ಯಾಕ್‌ಗೆ ಬೀಳದಂತೆ ಪಕ್ಕಕ್ಕೆ ಸರಿಸಿ ಎಚ್ಚರಿಕೆ ನೀಡುವ ಭದ್ರತಾ ಸಿಬ್ಬಂದಿಯೇ ಆಯತಪ್ಪಿ ಟ್ರ್ಯಾಕ್‌ಗೆ ಬಿದ್ದಂತಹ ಘಟನೆಯೊಂದು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

Read Full Story
06:32 PM (IST) Aug 26

Karnataka latest News Live ಮಂಗಳೂರು ಏರ್‌ಪೋರ್ಟ್‌ ವಿಸ್ತರಣೆಗೆ ಶೀಘ್ರವೇ 45 ಎಕರೆ ಭೂಮಿ ವಶ - ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ೪೫ ಎಕರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದ್ದು,  ಹೊಸ ಹೂಡಿಕೆಗಳನ್ನು ಆಕರ್ಷಿಸಲು 'ಬೊಲ್ಪು' ಮತ್ತು 'ಬ್ಯಾಕ್ ಟು ಊರು' ಯೋಜನೆಗಳನ್ನು ರೂಪಿಸಲಾಗಿದೆ.

Read Full Story
06:27 PM (IST) Aug 26

Karnataka latest News Live ಧರ್ಮಸ್ಥಳ ಎಸ್‌ಐಟಿ ತನಿಖೆ ವಿಚಾರದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹೆಸರಲ್ಲಿ ವೈರಲ್‌ ಆಗ್ತಿದೆ ಫೇಕ್‌ ಪೋಸ್ಟ್‌!

ಧರ್ಮಸ್ಥಳ ಪ್ರಕರಣದ ವರದಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹರ್ಷೇಂದ್ರ ಕುಮಾರ್ ಮೇಲೆ ಎಸ್ಐಟಿ ದಾಳಿ ಎಂಬ ಸುಳ್ಳು ಸುದ್ದಿ ವೈರಲ್ ಆಗಿದ್ದು, ಇದು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಯತ್ನ.
Read Full Story
06:11 PM (IST) Aug 26

Karnataka latest News Live ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು - ಕಾರಣ ಏನು?

ಸಾಮಾಜಿಕ ಹೋರಾಟಗಾರ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ SYRO ಮಲಬಾರ್ ಕೆತೋಲಿಕ್ ಅಸೋಸಿಯೇಷನ್ ದೂರು ದಾಖಲಿಸಿದೆ.

Read Full Story
05:47 PM (IST) Aug 26

Karnataka latest News Live ತಿಮರೋಡಿ ಮನೆಗೆ ಜನ ಬರುತ್ತಿದ್ದ ವೇಳೆ ಕೋಣೆಯಲ್ಲಿಟ್ಟು ನನ್ನನ್ನು ಬೀಗ ಹಾಕುತ್ತಿದ್ರು - ಮಾಸ್ಕ್ ಮ್ಯಾನ್

ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ. ತಿಮರೋಡಿ ಮನೆಯಲ್ಲಿ ಆರು ಗಂಟೆಗಳ ಕಾಲ ಶೋಧ ನಡೆಸಿದ್ದು, ಹಲವು ಮಹತ್ವದ ಮಾಹಿತಿಗಳು ಹೊರಬಿದ್ದಿವೆ. ಜಯಂತ್‌, 'ನಾವು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ' ಎಂದಿದ್ದಾರೆ.
Read Full Story
05:27 PM (IST) Aug 26

Karnataka latest News Live ಗುಂಡಿ ಮುಚ್ಚಲು 12 ಕೋಟಿ ಖರ್ಚು ಮಾಡಿದ ಬಿಬಿಎಂಪಿ, ಹಾಗಿದ್ರೂ Potholes ಸಂಖ್ಯೆಯಲ್ಲಿ ಶೇ. 63ರಷ್ಟು ಏರಿಕೆ!

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದ್ದು, ದುರಸ್ತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ತೇಪೆ ಹಾಕಿದ ಕೆಲವೇ ದಿನಗಳಲ್ಲಿ ಗುಂಡಿಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ ಎಂದು ಪ್ರಯಾಣಿಕರು ದೂರಿದ್ದಾರೆ. 

Read Full Story
05:06 PM (IST) Aug 26

Karnataka latest News Live ಸಿಗಂದೂರು ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ - ಶರವಾತಿ ಹಿನ್ನೀರಿನಲ್ಲಿ ವಿಮಾನಗಳ ಲ್ಯಾಂಡಿಂಗ್

ಶಿವಮೊಗ್ಗ ಜಿಲ್ಲೆಯ ಸಿಗಂದೂರು ಬಳಿ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರ್‌ಡ್ರೋಮ್ ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 

Read Full Story
04:59 PM (IST) Aug 26

Karnataka latest News Live ಶಾಲಾ ಮಕ್ಕಳಿಗೆ ದಸರಾ ಸಂಭ್ರಮ - ಈ ಬಾರಿಯ ಸುಧೀರ್ಘ ರಜೆ ವೇಳಾಪಟ್ಟಿ ಇಲ್ಲಿದೆ ನೋಡಿ!

2025ರ ದಸರಾ ರಜೆ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ಒಟ್ಟು 18 ದಿನಗಳು ಇರಲಿವೆ. ಅಕ್ಟೋಬರ್ 2 ರಂದು ಗಾಂಧಿ ಮತ್ತು ಶಾಸ್ತ್ರಿ ಜಯಂತಿಯ ಕಾರ್ಯಕ್ರಮಗಳಿಗೆ ಶಾಲೆಗೆ ಹಾಜರಾಗುವುದು ಕಡ್ಡಾಯ. ಈ ರಜೆ ಮಕ್ಕಳಿಗೆ ಹಬ್ಬದ ಸಂಭ್ರಮದ ಜೊತೆಗೆ ಓದಿನ ಕಡೆಗೂ ಗಮನ ಹರಿಸಲು ಉತ್ತಮ ಅವಕಾಶ.
Read Full Story
04:52 PM (IST) Aug 26

Karnataka latest News Live ಬೆಂಗಳೂರು ಪೊಲೀಸ್‌ ಟ್ರಾಫಿಕ್‌ ಫೈನ್‌ ಕಟ್ಟಲು ಹೋಗಿ ಎರಡೂವರೆ ಲಕ್ಷ ಕಳೆದುಕೊಂಡ ಇಂಜಿನಿಯರ್‌!

ಬೆಂಗಳೂರಿನಲ್ಲಿ ಟ್ರಾಫಿಕ್ ದಂಡ ಪಾವತಿಸಲು ಹೋದ ಇಂಜಿನಿಯರ್‌ಗೆ ₹2.6 ಲಕ್ಷ ರೂಪಾಯಿ ವಂಚನೆಯಾಗಿದೆ. ವಾಟ್ಸಾಪ್‌ನಲ್ಲಿ ಬಂದ apk ಫೈಲ್ ಕ್ಲಿಕ್ ಮಾಡಿದ್ದೇ ಇದಕ್ಕೆ ಕಾರಣ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story