- Home
- News
- State
- Karnataka Latest News Live: ಅಚ್ಚರಿ ಒಗಟಿನ ಮೂಲಕ ಬಿಗ್‌ಬಾಸ್ ಆಟಕ್ಕೆ ಮಲ್ಲಮ್ಮ ವಿದಾಯ; ಹೃದಯ ಗೆದ್ದ ಮಾಳು ನಿಪನಾಳ
Karnataka Latest News Live: ಅಚ್ಚರಿ ಒಗಟಿನ ಮೂಲಕ ಬಿಗ್‌ಬಾಸ್ ಆಟಕ್ಕೆ ಮಲ್ಲಮ್ಮ ವಿದಾಯ; ಹೃದಯ ಗೆದ್ದ ಮಾಳು ನಿಪನಾಳ

ಹಾಸನ: ಈ ಬಾರಿಯ ಭಾರೀ ಮಳೆಯಿಂದ ರಾಜ್ಯದಾದ್ಯಂತ ಸುಮಾರು 15 ಲಕ್ಷ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರದಲ್ಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಯೂತ್ ಹಾಸ್ಟೆಲ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ 2798 ಕೋಟಿ ರು. ಬೆಳೆ ಪರಿಹಾರ ಅಂದಾಜಿಸಿದ್ದು, 200 ಕೋಟಿಗೂ ಹೆಚ್ಚು ಪರಿಹಾರ ಈಗಾಗಲೇ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಉಳಿದ ರೈತರಿಗೂ ಶೀಘ್ರದಲ್ಲೇ ಪರಿಹಾರ ಹಣ ನೇರವಾಗಿ ವರ್ಗಾಯಿಸಲಾಗುವುದು.
Karnataka Latest News Live 2 November 2025 ಅಚ್ಚರಿ ಒಗಟಿನ ಮೂಲಕ ಬಿಗ್‌ಬಾಸ್ ಆಟಕ್ಕೆ ಮಲ್ಲಮ್ಮ ವಿದಾಯ; ಹೃದಯ ಗೆದ್ದ ಮಾಳು ನಿಪನಾಳ
Karnataka Latest News Live 2 November 2025 ನಾಲ್ಕು ವಾರದಿಂದ ಕಾಣೆಯಾಗಿದ್ದ ಮೂವರಿಗೆ ಸ್ವಾಗತಿಸಿ ಅಶ್ವಿನಿ ಗೌಡರಿಂದ ಹುಷಾರ್ ಆಗಿರಿ ಎಂದ ಕಿಚ್ಚ ಸುದೀಪ್
ಕಳೆದ ನಾಲ್ಕು ವಾರಗಳಿಂದ ತೆರೆಮರೆಯಲ್ಲಿದ್ದ ಮೂವರು ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ. ಈ ವಾರ ಧನುಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಮನೆಯ ಲವ್ ಬರ್ಡ್ಸ್ ಸೂರಜ್-ರಾಶಿಕಾ ಪ್ರೀತಿಯ ವಿಚಾರವನ್ನು ಸುದೀಪ್ ಬಯಲು ಮಾಡಿದ್ದಾರೆ.
Karnataka Latest News Live 2 November 2025 ಟಗರಿಗೆ ಠಕ್ಕರ್ ಕೊಡೋರು ಯಾರು ಇಲ್ಲ, ಸಿದ್ದರಾಮಯ್ಯ ಸಿಎಂ ಎಂದು ಸಂದೇಶ ರವಾನಿಸಿದ ಜಮೀರ್
ಟಗರಿಗೆ ಠಕ್ಕರ್ ಕೊಡೋರು ಯಾರು ಇಲ್ಲ, ಸಿದ್ದರಾಮಯ್ಯ ಸಿಎಂ ಎಂದು ಸಂದೇಶ ರವಾನಿಸಿದ ಜಮೀರ್, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ 2028ರ ವರೆಗೆ ಸಿಎಂ ಬದಲಾವಣೆಯೂ ಇಲ್ಲ ಎಂದಿದ್ದಾರೆ.
Karnataka Latest News Live 2 November 2025 Bigg Boss ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! ಕಾವ್ಯಾನೂ ಬತ್ತಿ ಇಟ್ಲಲ್ಲೋ ಗುರೂ ಎಂದು ಫ್ಯಾನ್ಸ್ ಬೇಸರ!
Karnataka Latest News Live 2 November 2025 ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳಲು ಹೆಲ್ಮೆಟ್ ಬದಲು ತಲೆಗೆ ಬಾಣಲೆ ಹಾಕಿಕೊಂಡ ಹಿಂಬದಿ ಸವಾರ
Man wears pan instead of helmet: ಬೆಂಗಳೂರಿನಲ್ಲಿ ಹಿಂಬದಿ ಸವಾರನೊಬ್ಬ ಟ್ರಾಫಿಕ್ ಚಲನ್ ತಪ್ಪಿಸಿಕೊಳ್ಳಲು ಹೆಲ್ಮೆಟ್ ಬದಲು ತಲೆಗೆ ಬಾಣಲೆ ಧರಿಸಿ ಸಂಚರಿಸಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Karnataka Latest News Live 2 November 2025 Bhagyalakshmi - ಆದಿಯ ಎದುರು ಮರು ಮದ್ವೆಯ ಬಗ್ಗೆ ಕೊನೆಗೂ ಮೌನ ಮುರಿದ ಭಾಗ್ಯ- ಫ್ಯಾನ್ಸ್ ಶಾಕ್!
Karnataka Latest News Live 2 November 2025 Bigg Boss ಮನೇಲಿ ಪುರುಷ ಸ್ಪರ್ಧಿಗೆ ಮಹಿಳೆಯೇ ಕಾಲಿನಲ್ಲಿ ಹೊಟ್ಟೆಗೆ ಒದ್ದರು, ಚಪ್ಪಲಿಯಲ್ಲಿ ಹೊಡೆದ್ರು!
Bigg Boss Show: ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಸಣ್ಣ ವಿಷಯಕ್ಕೂ ನಗುತ್ತಾರೆ, ಜಗಳ ಆಡುತ್ತಾರೆ. ಯಾವ ಸಂದರ್ಭ ಎನ್ನೋದು ಮ್ಯಾಟರ್ ಆಗುವುದು. ನನಹೆ ಹಾಗಂದ್ರು, ಹೀಗಂದ್ರು ಎಂದು ಜಗಳ ಆಡೋರು ಈಗ, ಚಪ್ಪಲಿಯಲ್ಲಿ ಹೊಡೆದರೂ ಕೂಡ ನಕ್ಕಿದ್ದಾರೆ. ಎಂಥ ದುರಂತ ನೋಡಿ…ತಮಾಷೆಗೆ ಲಿಮಿಟ್ ಇಲ್ಲವಾ?
Karnataka Latest News Live 2 November 2025 ಸತ್ತ ಮೇಲೆ ನನ್ನ ಪಾದಕ್ಕೆ, ಹಳೆಯ ಚಪ್ಪಲಿ ಹಾಕಿ ಅಂತ್ಯಕ್ರಿಯೆ ಮಾಡು; ತಂದೆಯ ವಿಲ್ ನೋಡಿ ಮಗ ಕಂಗಾಲು
Father Vil: ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ಎಂಬ ಮಾತಿದೆ. ಅಪ್ಪನೊಬ್ಬ ತೀರಿಕೊಳ್ಳುವ ಮುಂಚೆ, ವಿಲ್ ಬರೆದಿದ್ದನು. ಅಂತ್ಯಕ್ರಿಯೆ ಮಾಡುವ ಮುನ್ನ ಮಗ ಆ ವಿಲ್ ಓದಿದ್ದಾನೆ. ಆ ವಿಲ್ ಓದಿ ಕಣ್ಣೀರು ಹಾಕಿದ್ದಾನೆ. ಆ ಪತ್ರದಲ್ಲಿ ಏನಿತ್ತು?
Karnataka Latest News Live 2 November 2025 BBK 12 - ರಾಶಿಕಾ, ಸೂರಜ್ I Love You ಕಥೆ; ಕಿಚ್ಚ ಸುದೀಪ್ ಮುಂದೆ ಅಸಲಿ ಸತ್ಯ ಹೊರಬಿತ್ತು
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ಒಂದೇ ವಾರಕ್ಕೆ ಸೂರಜ್ ಸಿಂಗ್, ರಾಶಿಕಾ ಶೆಟ್ಟಿ ಅವರು ಆತ್ಮೀಯತೆಯಿಂದ ಇದ್ದರು. ಇವರಿಬ್ಬರ ಬಾಂಡಿಂಗ್ ಬಗ್ಗೆ ಇಡೀ ಮನೆ ಹಾಗೂ ವೀಕ್ಷಕರು ಕೂಡ ಮಾತನಾಡಿದ್ದುಂಟು.
Karnataka Latest News Live 2 November 2025 ಕಿಚ್ಚ ಸುದೀಪ್ ಮಗಳು ಹೀಗಿದ್ರೆ ಅವ್ರು ಸುಮ್ನೆ ಇರ್ತಿದ್ರಾ? BBK ರಕ್ಷಿತಾ ಶೆಟ್ಟಿ ವಿರುದ್ಧ ಸಿಡಿದೆದ್ದ ನಟಿ
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಜಾಹ್ನವಿ, ಅಶ್ವಿನಿ ಗೌಡ, ರಿಷಾ ಗೌಡ, ಅಶ್ವಿನಿ ಗೌಡ ಜೊತೆ ರಕ್ಷಿತಾ ಜಗಳ ಆಡಿದ್ದರು. ಈಗ ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ, ದೂರು ಕೊಡ್ತೀನಿ ಎಂದು ರಂಗಭೂಮಿ ಕಲಾವಿದೆ ಕುಶಲಾ ಎನ್ನುವವರು ಹೇಳಿದ್ದಾರೆ.
Karnataka Latest News Live 2 November 2025 ಹಾಲಿವುಡ್‌ನಿಂದ ಕಾಪಿ ಅಲ್ಲ! ಬಾಹುಬಲಿಯಲ್ಲಿ ಶಿವಗಾಮಿಯ ತ್ಯಾಗ.. 48 ವರ್ಷಗಳ ಹಿಂದಿನ ಘಟನೆಯೇ ರಾಜಮೌಳಿಗೆ ಸ್ಫೂರ್ತಿ!
ಬಾಹುಬಲಿಯಲ್ಲಿ ಶಿವಗಾಮಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಹೇಂದ್ರ ಬಾಹುಬಲಿಯನ್ನು ಕಾಪಾಡುತ್ತಾಳೆ. ಆ ದೃಶ್ಯಕ್ಕೆ 48 ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ನಿಜವಾದ ಘಟನೆಯೇ ಸ್ಫೂರ್ತಿ ಅನ್ನೋದು ನಿಮಗೆ ಗೊತ್ತಾ?
Karnataka Latest News Live 2 November 2025 ರಕ್ಷಿತಾ ಶೆಟ್ಟಿ ಅವ್ರೇ.. Bigg Boss ಮನೇಲಿ ಅದೊಂದು ತಪ್ಪು ಮಾಡಿದ್ರಿ..ಕಿಚ್ಚನ ಚಪ್ಪಾಳೆ ಕಳ್ಕೊಂಡ್ರಿ..
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಬಡ್ಡಿ ಆಟ ಆಡಿಸಲಾಗಿತ್ತು. ರಕ್ಷಿತಾ ಮೇಲೆ ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಬಿದ್ದು ಹೊರಳಾಡಿದ್ದರು. ಆ ವೇಳೆ ರಕ್ಷಿತಾ ಅವರ ಬಟ್ಟೆ ಆ ಕಡೆ ಈ ಕಡೆ ಆಯ್ತು. ಇದರಿಂದ ಮತ್ತೆ ಗೇಮ್ ಆಡಿಸಿದರು. ಆಮೇಲೆ ಏನಾಯಿತು?
Karnataka Latest News Live 2 November 2025 ಬೆಂಗಳೂರು - ರೋಗಿ ಇಲ್ಲದಿದ್ರೂ ಸೈರನ್ ಹಾಕೊಂಡ್ ಬಂದು ಸ್ಕೂಟರ್‌ಗೆ ಆಂಬುಲೆನ್ಸ್ ಡಿಕ್ಕಿ - ದಂಪತಿ ಸಾವು
Richmond Circle fatal crash: ಬೆಂಗಳೂರಿನ ರಿಚ್‌ಮಂಡ್ ಸರ್ಕಲ್‌ನಲ್ಲಿ ರೋಗಿಗಳಿಲ್ಲದೇ ಇದ್ದರೂ ಸೈರನ್ ಹಾಕಿಕೊಂಡು ವೇಗವಾಗಿ ಬಂದ ಆಂಬುಲೆನ್ಸ್ ರೆಡ್ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Karnataka Latest News Live 2 November 2025 ಪುಸ್ತಕಕ್ಕಾಗಿ ‘ತಮಿಳು’ ಕನ್ನಡಾಭಿಮಾನಿಯ ವರ್ಷಪೂರ್ತಿ ಸಂಚಾರ - ಕನ್ನಡಕ್ಕೆ ನಿಷ್ಠೆಯ ಕತೆ
ಶ್ರೀಲಂಕಾದಿಂದ ತಮಿಳು ನಿರಾಶ್ರಿತರಾಗಿ ಕರ್ನಾಟಕಕ್ಕೆ ಬಂದು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳದಲ್ಲಿ ನೆಲೆಸಿದ್ದಾರೆ ಕನ್ನಡ ಪುಸ್ತಕ ಮಾರಾಟದ ಪ್ರೇಮಿ ರವಿಚಂದ್ರ. ಇವರ ತಂದೆ, ತಾಯಿ ಇಲ್ಲಿಗೆ ನಿರಾಶ್ರಿತರಾಗಿ ಬಂದು ರಬ್ಬರ್ ಕೂಲಿ ಕಾರ್ಮಿಕರಾಗಿ ದುಡಿದವರು.
Karnataka Latest News Live 2 November 2025 ಆ ಸಿನಿಮಾ ಮಾಡಿದ್ದಕ್ಕೆ ಒಂದು ವರ್ಷ ಅತ್ತಿದ್ದ ಅನುಷ್ಕಾ ಶೆಟ್ಟಿ.. ಅದಕ್ಕಿಂತ ಕೆಟ್ಟ ಸಿನಿಮಾ ಇನ್ನೊಂದಿದೆ ಎಂದ ಸ್ವೀಟಿ
ಅನುಷ್ಕಾ ಶೆಟ್ಟಿ ತನ್ನ ವೃತ್ತಿಜೀವನದಲ್ಲಿ ಮಾಡಿದ ಒಂದು ಸಿನಿಮಾದಿಂದಾಗಿ ಒಂದು ವರ್ಷ ಅತ್ತಿದ್ದರಂತೆ. ಆದರೆ ಅದೇ ಚಿತ್ರ ಅನುಷ್ಕಾ ಅವರ ಹಣೆಬರಹವನ್ನೇ ಬದಲಾಯಿಸಿತು. ಟಾಲಿವುಡ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಬೆಳೆಯಲು ಕಾರಣವಾಯಿತು.
Karnataka Latest News Live 2 November 2025 ನನ್ನ ಹಿಂದೆ ಬೀಳಬೇಡಿ, I am Committed ಎಂದ ಗಿಲ್ಲಿ ನಟ; ನನ್ನ ಗುಂಡಿ ನಾನ್ಯಾಕೆ ತೋಡಿಕೊಳ್ಳಲಿ
Karnataka Latest News Live 2 November 2025 BBK 12 - ಒಂದಾದ್ಮೇಲೆ ಒಂದು ಕಂಪ್ಲೇಂಟ್ ಮಾಡಿದ ರಾಶಿಕಾಗೆ ಮುಖಭಂಗ; ಕಿಚ್ಚ ಸುದೀಪ್ ಮುಂದೆ ಆ ಘಟನೆ ನಡೀತು
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಈ ವಾರ ಕಾಲೇಜು ಟಾಸ್ಕ್‌ನಲ್ಲಿ ರಘು ಅವರು ಪ್ರಿನ್ಸಿಪಾಲ್ ಆಗಿದ್ದರು. ಪ್ರಿನ್ಸಿಪಾಲ್ ಆಗಿ ಅವರು ಚೆನ್ನಾಗಿ ಟಾಸ್ಕ್ ಮಾಡಿದರಾ? ಫೇವರಿಸಂ ಮಾಡಿದ್ದಾರಾ ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ, ರಾಶಿಕಾ ಶೆಟ್ಟಿ ಮಾತ್ರ ಫೇವರಿಸಂ ಮಾಡಿದರು ಎಂದು ಆರೋಪ ಮಾಡಿದ್ರು.
Karnataka Latest News Live 2 November 2025 ಬೆಂಗಳೂರು - ಡಂಬಲ್ಸ್‌ನಿಂದ ಹೊಡೆದು ವಿಜಯವಾಡದ ಯುವಕನಿಂದ ಚಿತ್ರದುರ್ಗದ ಸಹೋದ್ಯೋಗಿ ಕೊಲೆ
Man killed with dumbbell in office: ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಲೈಟ್ ಸ್ವಿಚ್ ಆಫ್ ಮಾಡುವ ವಿಚಾರಕ್ಕೆ ನಡೆದ ಜಗಳವು ಸಹೋದ್ಯೋಗಿಯ ಕೊಲೆಯಲ್ಲಿ ಅಂತ್ಯವಾಗಿದೆ. ರಾತ್ರಿ ಪಾಳಿಯಲ್ಲಿದ್ದ ಸೋಮಾಲ ವಂಶಿ ಎಂಬ ಯುವಕ, ಭೀಮೇಶ್ ಬಾಬು ಎಂಬುವರ ತಲೆಗೆ ಡಂಬಲ್ಸ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.
Karnataka Latest News Live 2 November 2025 ರಾಜ್ಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಎಂಬ ಮಾತು ಕೇವಲ ವದಂತಿ - ಸಚಿವ ಶಿವರಾಜ ತಂಗಡಗಿ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಎಂಬ ಮಾತು ಕೇವಲ ವದಂತಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುತ್ತಾರೆ ಎನ್ನುವ ವಿಷಯ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.
Karnataka Latest News Live 2 November 2025 ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ - ಸಚಿವ ಜಮೀರ್ ಅಹಮ್ಮದ್ ಘೋಷಣೆ
ರಾಜ್ಯದ ಎಲ್ಲ ಮದರಸಾಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಹಾಗೂ ಉರ್ದು ಶಾಲೆಗಳಲ್ಲಿ ಪ್ರಥಮ ಭಾಷೆ ಕನ್ನಡ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.