Asianet Suvarna News Asianet Suvarna News

ನಾವು ಮನವರಿಕೆ ಮಾಡೋದಲ್ಲ, ಅವರಿಗೆ ಆಗಬೇಕು: ಬರ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಆರೋಪಕ್ಕೆ ಜಾರಕಿಹೊಳಿ ತಿರುಗೇಟು

ಕೇಂದ್ರ ಬರ ಅಧ್ಯಯನ ತಂಡಕ್ಕೆ ಬರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ನಾವು ಮನವರಿಕೆ ಮಾಡೋದಲ್ಲ ಅವರಿಗೆ ಆಗಬೇಕು. ನಾವು ಹೇಳಿದ್ರೆ ವರದಿ ಕೊಡಲ್ಲ, ವಸ್ತು ಸ್ಥಿತಿ ಇದ್ರೆ ಮಾತ್ರ ವರದಿ ಕೊಡ್ತಾರೆ ಎಂದ ಸಚಿವ ಸತೀಶ್ ಜಾರಕಿಹೊಳಿ

I will also hold a KDP meeting in Chikkodi taluk says satish jarkiholi rav
Author
First Published Oct 9, 2023, 9:26 PM IST

ಚಿಕ್ಕೋಡಿ (ಅ.9): ಶಾಸಕರ ಬಳಿ ಮಾತನಾಡಿ ಸದ್ಯದಲ್ಲೇ  ಚಿಕ್ಕೋಡಿಯಲ್ಲೂ ಕೆಡಿಪಿ ಸಭೆ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸಚಿವರಾದ ಬಳಿಕ ಪ್ರತಿ ತಾಲೂಕಿನಲ್ಲೂ ಕೆಡಿಪಿ ಸಭೆ ಮಾಡೋದಾಗಿ ಹೇಳಿದ್ದ ಸಚಿವ ಸತೀಶ್ ಜಾರಕಿಹೊಳಿ. ಆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಈಗಾಗಲೇ ರಾಯಬಾಗ, ಸವದತ್ತಿ ತಾಲೂಕಿನಲ್ಲಿ ಸಭೆ ಮಾಡಿದ್ದೇನೆ. ಶೀಘ್ರವೇ ಶಾಸಕರ ಜೊತೆ ಮಾತನಾಡಿ ದಿನಾಂಕ ನಿಗದಿಪಡಿಸಿ ಚಿಕ್ಕೋಡಿಯಲ್ಲಿಯೂ ಸಭೆ ಮಾಡುತ್ತೇನೆ ಎಂದರು.

ರೈತರ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

ಕೇಂದ್ರ ಬರ ಅಧ್ಯಯನ ತಂಡ ಚಿಕ್ಕೋಡಿ ಉಪವಿಭಾಗಕ್ಕೆ ಭೇಟಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಬರಪೀಡಿತ ತಾಲೂಕುಗಳ ಘೋಷಣೆಯಾಗಿದೆ, ಇಲ್ಲಿ ಬರಬೇಕು ಅಂತೇನಿಲ್ಲ. ಬರ ಅಧ್ಯಯನ ತಂಡ 194 ತಾಲೂಕುಗಳಿಗೂ ಹೋಗಲ್ಲ, ರಾಂಡಮ್ ಆಗಿ ಚೆಕ್ ಮಾಡ್ತಾರೆ. ಲಿಮಿಟೆಡ್ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಬರ ಅಧ್ಯಯನ ತಂಡ ಹೋಗಿದೆ. ಬರದೇ ಹೋದ್ರೆ ತಾರತಮ್ಯ ಅಂತೇನಿಲ್ಲ, ಗೋಕಾಕ್, ಮೂಡಲಗಿಗೂ ಬಂದಿಲ್ಲ. ಅದಕ್ಕೂ ಇದಕ್ಕೂ ಲಿಂಕ್ ಮಾಡೋದು ಅವಶ್ಯಕತೆ ಇಲ್ಲ. ಬರ ಘೋಷಣೆ ಮಾಡಿದ್ದು ಅದರ ಲಾಭ ಏನು ಸಿಗಬೇಕು ಇಲ್ಲೂ ಸಿಗುತ್ತೆ ಎಂದರು.

ಕೇಂದ್ರ ಬರ ಅಧ್ಯಯನ ತಂಡಕ್ಕೆ ಬರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ನಾವು ಮನವರಿಕೆ ಮಾಡೋದಲ್ಲ ಅವರಿಗೆ ಆಗಬೇಕು. ನಾವು ಹೇಳಿದ್ರೆ ವರದಿ ಕೊಡಲ್ಲ, ವಸ್ತು ಸ್ಥಿತಿ ಇದ್ರೆ ಮಾತ್ರ ವರದಿ ಕೊಡ್ತಾರೆ. ಇನ್ಫ್ಲೂಯೆನ್ಸ್ ಮಾಡೋ ಅವಶ್ಯಕತೆ ಇಲ್ಲ, ನಿಜವಾದ ವರದಿ ಅವರೇ ಕೊಡ್ತಾರೆ ನಾವು ಉಪಸಮಿತಿಯಲ್ಲಿ ಹೇಳಿದ್ದೇವೆ, ಸಿಎಂ ಸಭೆ ಮಾಡಿ ಹೇಳಿದ್ದಾರೆ ಎಂದರು.

 

ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಬಂದವರಿಗೆ ಸ್ವಾಗತ: ಸತೀಶ ಜಾರಕಿಹೊಳಿ

Follow Us:
Download App:
  • android
  • ios