National Herald Case: ಸೋನಿಯಾರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ, ಡಿಕೆಶಿ
ಇ.ಡಿ. ಸಮನ್ಸ್ ನೀಡಿದೆ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿಚಲಿತರಾಗಿಲ್ಲ, ಮಾನಸಿಕವಾಗಿ ಕುಗ್ಗಿಲ್ಲ. ಆದರೆ ನಿಮ್ಮ ಬೆಂಬಲಕ್ಕೆ ದೇಶಾದ್ಯಂತ ಕೋಟ್ಯಂತರ ಕಾರ್ಯಕರ್ತರಿದ್ದೇವೆ ಎಂದು ಹೇಳಲು ಹೋರಾಟ ನಡೆಸಲಾಗುತ್ತಿದೆ: ಡಿಕೆಶಿ
ಬೆಂಗಳೂರು(ಜು.21): ಇ.ಡಿ.(ಜಾರಿ ನಿರ್ದೇಶನಾಲಯ) ಬರಲಿ. ಐಟಿ (ಆದಾಯ ತೆರಿಗೆ), ಸಿಬಿಐ ಸಹ ಬರಲಿ. ಬಿಜೆಪಿ ದಂಡೇ ಬಂದರೂ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮುಟ್ಟಲೂ ಸಾಧ್ಯವಿಲ್ಲ. ಇದು ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆದಿರುವುದನ್ನು ಖಂಡಿಸಿ ಗುರುವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಕೇಂದ್ರೀಯ ತನಿಖಾ ಸಂಸ್ಥೆಗಳು, ಭಾರತೀಯ ಜನತಾ ಪಕ್ಷದ ದಂಡೇ ಬಂದರೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮುಟ್ಟಲೂ ಕಾಂಗ್ರೆಸ್ ಕಾರ್ಯಕರ್ತರು ಬಿಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದೆ ಎಂದು ತಿರುಗೇಟು ನೀಡಿದರು.
ನನಗೆ ನಿತ್ಯ ಲವ್ ಲೆಟರ್ ಬರುತ್ತಿವೆ!
ನನ್ನ ವಿರುದ್ಧ ಪ್ರಕರಣ ದಾಖಲಾಗಿ 5 ವರ್ಷ ಆಗಿದೆ. ಜೈಲಿಗೆ ಹೋಗಿ 3 ವರ್ಷವೇ ಆಗಿದೆ. ಈಗ ನನಗೆ ನಿತ್ಯ ಲವ್ ಲೆಟರ್(ಪ್ರೇಮ ಪತ್ರ)ಗಳು ಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಒಂದು ವರ್ಷ ವಿರಾಮ ನೀಡಿ ನಂತರ ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಗಾಂಧಿ ಹೆಸ್ರಿನಲ್ಲಿ ತಲೆಮಾರಿಗೆ ಆಗುವಷ್ಟು ಮಾಡ್ಕೊಂಡಿದ್ದೇವೆ, ಕಾಂಗ್ರೆಸ್ ನಾಯಕನ ಋಣಸಂದಾಯದ ಮಾತು!
ಬಿಜೆಪಿ ಕಿತ್ತೊಗೆಯೋಣ:
ಇ.ಡಿ. ಸಮನ್ಸ್ ನೀಡಿದೆ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿಚಲಿತರಾಗಿಲ್ಲ, ಮಾನಸಿಕವಾಗಿ ಕುಗ್ಗಿಲ್ಲ. ಆದರೆ ನಿಮ್ಮ ಬೆಂಬಲಕ್ಕೆ ದೇಶಾದ್ಯಂತ ಕೋಟ್ಯಂತರ ಕಾರ್ಯಕರ್ತರಿದ್ದೇವೆ ಎಂದು ಹೇಳಲು ಹೋರಾಟ ನಡೆಸಲಾಗುತ್ತಿದೆ. ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ. ಜನವಿರೋಧಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವವರೆಗೂ ಶಾಂತಿಯುತವಾಗಿ ಹೋರಾಟ ನಡೆಸೋಣ. ದೇಶಕ್ಕಾಗಿ ಪ್ರಾಣತ್ಯಾಗ ಮಾಡೋಣ ಎಂದು ಕರೆ ನೀಡಿದರು.
ನಾನು ತಿಹಾರ್ ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಭೇಟಿ ಮಾಡಿ ಶಕ್ತಿ ತುಂಬಿದ್ದರು. ಆಗ ನಾನು ಕೆಪಿಸಿಸಿ ಅಧ್ಯಕ್ಷ ಆಗಿರದೆ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ರಾಹುಲ್ ಗಾಂಧಿ ಅವರು ನನಗೆ ಒಮ್ಮೆ ಕರೆ ಮಾಡಿ ‘ಹೊಸ ರೋಗಿಯು ಹಳೆಯ ರೋಗಿ ಜೊತೆ ಮಾತನಾಡಬೇಕು’ ಎಂದು ಜಾರಿ ನಿರ್ದೇಶನಾಲಯದ ವಿಚಾರಣೆ ಬಗ್ಗೆ ಹಾಸ್ಯವಾಗಿ ಹೇಳಿದ್ದರು ಎಂಬುದನ್ನು ಸ್ಮರಿಸಿದರು.
ನನಗೆ ನಿತ್ಯ ಲವ್ ಲೆಟರ್ ಬರುತ್ತಿವೆ!
ನನ್ನ ವಿರುದ್ಧ ಪ್ರಕರಣ ದಾಖಲಾಗಿ 5 ವರ್ಷ ಆಗಿದೆ. ಜೈಲಿಗೆ ಹೋಗಿ 3 ವರ್ಷವೇ ಆಗಿದೆ. ಈಗ ನನಗೆ ನಿತ್ಯ ಲವ್ ಲೆಟರ್(ಪ್ರೇಮ ಪತ್ರ)ಗಳು ಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಒಂದು ವರ್ಷ ವಿರಾಮ ನೀಡಿ ನಂತರ ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದೇನೆ. ಮೂರು ವರ್ಷದಿಂದ ಆರೋಪ ಪಟ್ಟಿದಾಖಲಿಸದೆ ಈಗ ಸಲ್ಲಿಸಿ ವಿಚಾರಣೆಗೆ ಕರೆಯುತ್ತಿದ್ದಾರೆ. ನನ್ನ ಜೊತೆ ಇರುವವರನ್ನೆಲ್ಲಾ ವಿಚಾರಣೆಗೆ ಕರೆದು ಕಿರುಕುಳ ನೀಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.