ಹುಬ್ಬಳ್ಳಿ-ಧಾರವಾಡದಿಂದ ಏಮ್ಸ್‌ ಎತ್ತಂಗಡಿ?

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ ಬಳಿಕ ಧಾರವಾಡ ಜಿಲ್ಲೆಯಲ್ಲಿ 200 ಎಕರೆ ಪ್ರದೇಶ ಜಾಗ ನಿಗದಿಗೊಳಿಸಲಾಗಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ರಾಯಚೂರಿಗೆ ಏಮ್ಸ್‌ ಬರಲಿದೆ ಎಂದು ಹೇಳಿಕೆ ನೀಡಿರುವುದು ಹುಬ್ಬಳ್ಳಿ-ಧಾರವಾಡ ಜನತೆಗೆ ನುಂಗಲಾರದ ತುತ್ತಾಗಿದೆ.

AIIMS to be moved from Hubli-Dharwad? Sat

ಬಾಲಕೃಷ್ಣ ಜಾಡಬಂಡಿ, ಕನ್ನಡಪ್ರಭ ವಾರ್ತೆ
ಹುಬ್ಬಳ್ಳಿ (ನ.14) : ರಾಜ್ಯದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ ಬಳಿಕ ಧಾರವಾಡ ಜಿಲ್ಲೆಯಲ್ಲಿ 200 ಎಕರೆ ಪ್ರದೇಶ ಜಾಗ ನಿಗದಿಪಡಿಸಲಾಗಿತ್ತು. ಆದರೆ ಇತ್ತೀಚಿಗೆ ರಾಯಚೂರಿನ ಗಿಲ್ಲೆಸುಗೂರಿನಲ್ಲಿ ನಡೆದಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಯಚೂರಿಗೆ ಏಮ್ಸ್‌ ಬರಲಿದೆ ಎನ್ನುವ ಮೂಲಕ ಧಾರವಾಡ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದ್ದಾರೆ.

ರಾಜ್ಯಕ್ಕೆ ಏಮ್ಸ್‌ (AIMS) ಘೋಷಣೆಯಾದ ಬಳಿಕ ಹುಬ್ಬಳ್ಳಿಯ ಗಾಮನಗಟ್ಟಿ (Gamanagatti), ಧಾರವಾಡದ ಹೊರ ವಲಯದ ಮಮ್ಮಿಗಟ್ಟಿ, ಇಟ್ಟಿಗಟ್ಟಿ ಕೈಗಾರಿಕಾ ಪ್ರದೇಶದ (Industrial Area)ನೂರಾರು ಎಕರೆ ಜಮೀನನ್ನು ಕೇಂದ್ರದ ಆರೋಗ್ಯ ಇಲಾಖೆ (Health Depoartment) ತಂಡ ಪರಿಶೀಲಿಸಿ ಜಿಲ್ಲಾಡಳಿತದಿಂದ ಸಂಬಂಧಿಸಿದ ದಾಖಲೆ ಪಡೆದಿತ್ತು. ಗಾಮನಗಟ್ಟಿಬಳಿ 200 ಎಕರೆ ಜಾಗ ನಿಗದಿ ಮಾಡಲಾಗಿತ್ತು. 2021ರ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರನ್ನು ಮುಖ್ಯಮಂತ್ರಿ ಭೇಟಿಯಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್‌ ಮಂಜೂರು ಮಾಡುವಂತೆ ಕೋರಿದ್ದರು. ಬಹುತೇಕ ಹುಬ್ಬಳ್ಳಿ-ಧಾರವಾಡದಲ್ಲಿಯೇ ಏಮ್ಸ್‌ ಸ್ಥಾಪನೆಯಾಯಿತು ಎನ್ನುವಷ್ಟರಲ್ಲಿಯೇ ಸಾಕಷ್ಟುಗೊಂದಲಗಳು ಮುಂದುವರಿದಿವೆ.

ರಾಯಚೂರಿಗೆ ಏಮ್ಸ್‌ ನೀಡದಿದ್ದರೆ ಚುನಾವಣೆಗೆ ಸ್ಪರ್ಧಿಸಲ್ಲ: ಶಿವನಗೌಡ ನಾಯಕ

ಐದು ಸ್ಥಾನ ಗೆದ್ದರೆ ಏಮ್ಸ್ ಸ್ಥಾಪನೆ:
ರಾಯಚೂರಿಗೆ (Raichur) ಏಮ್ಸ್‌ ಮಂಜೂರು ಮಾಡದಿದ್ದರೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಶಾಸಕ ಶಿವನಗೌಡ ನಾಯಕ (Shivanagowda Nayaka) ಘೋಷಿಸಿದ್ದಾರೆ. ಗಿಲ್ಲೆಸುಗೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಜನಸಂಕಲ್ಪ (Janasankalpa) ಯಾತ್ರೆಯಲ್ಲಿ ರಾಯಚೂರಿಗೆ ಏಮ್ಸ್‌ ಬರಲಿದೆ. ಈ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ 5 ಸ್ಥಾನ ಗೆಲ್ಲಿಸಿದರೆ ಏಮ್ಸ್‌ ಸ್ಥಾಪಿಸಲು ಶ್ರಮಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (Yadiyurappa) ಭರವಸೆ ನೀಡಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಏಮ್ಸ್‌ ರಾಜಕೀಯ (Political) ದಾಳವಾಗಿ ಬಳಕೆಯಾಗುತ್ತಿದೆಯೇ ಎಂಬ ಪ್ರಶ್ನೆ ಧಾರವಾಡ ಜಿಲ್ಲೆ ಜನರನ್ನು ಕಾಡುತ್ತಿದೆ.

ವಿವಿಧ ಜಿಲ್ಲೆಗಳಲ್ಲಿ ಏಮ್ಸ್ ನಿರ್ಮಾಣಕ್ಕೆ ಪಟ್ಟು:
ಇನ್ನು ಏಮ್ಸ್‌ಗಾಗಿ ಬಾಗಲಕೋಟೆ (Bagalakote, ಬೆಳಗಾವಿ (Belgaum)ಯಲ್ಲಿ ಹಲವು ರೀತಿಯ ಹೋರಾಟ ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಏಮ್ಸ್‌ ಫಾರ್‌ ಬೆಳಗಾವಿ (AIMS For Belgaum), ಏಮ್ಸ್‌ ಫಾರ್‌ ಬಾಗಲಕೋಟೆ ಅಭಿಯಾನ ನಡೆದಿದ್ದವು. ಆದರೆ ರಾಯಚೂರಿನಲ್ಲಿ ಈಗಾಗಲೇ ಏಮ್ಸ್‌ಗಾಗಿ ನಡೆಯುತ್ತಿರುವ ಹೋರಾಟ (Protest) ತೀವ್ರ ಸ್ವರೂಪ ಪಡೆದಿದೆ. ಅಲ್ಲಿ ಏಮ್ಸ್‌ ಸ್ಥಾಪಿಸುವಂತೆ ಆಗ್ರಹಿಸಿ ಪ್ರತ್ಯೇಕ ಕಲ್ಯಾಣ ರಾಜ್ಯದ (Kalyana State) ಕೂಗು ಕೇಳಿಬಂದಿತ್ತು. ಈಗಾಗಲೇ ಧಾರವಾಡದಲ್ಲಿ ಜಾಗ ನಿಗದಿ ಮಾಡಲಾಗಿದ್ದರೂ ಏಮ್ಸ್‌ ಸ್ಥಾಪನೆಗೆ ಏಕೆ ಮೀನಮೇಷ ಎಣಿಸಲಾಗುತ್ತಿದೆ. ರಾಜ್ಯ ಸರ್ಕಾರದ ಈ ಧೋರಣೆ ವಿರುದ್ಧ ಹುಬ್ಬಳ್ಳಿ-ಧಾರವಾಡ ಜನರು ಪಕ್ಷಾತೀತವಾಗಿ (Non-partisan) ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ವಸಂತ ಲದವಾ ಹೇಳಿದ್ದಾರೆ.

ಏಮ್ಸ್‌ ಮಾದರಿಯ ಸುಸಜ್ಜಿತ ಆಸ್ಪತ್ರೆ ಬಗ್ಗೆ ಠರಾವು ಹೊರಡಿಸಲು ಮನವಿ

ರಾಜಕೀಯ ಇಚ್ಛಾಶಕ್ತಿ ಕೊರತೆ:
ಆದರೆ ಹುಬ್ಬಳ್ಳಿ-ಧಾರವಾಡದಲ್ಲಿ ಒಬ್ಬರು ಕೇಂದ್ರ ಸಚಿವರು (MP), ಒಬ್ಬರು ಮಾಜಿ ಮುಖ್ಯಮಂತ್ರಿ (Ex Chief Minister), ಸದ್ಯ ಮುಖ್ಯಮಂತ್ರಿಯಾಗಿರುವವರು ಪಕ್ಕದ ಜಿಲ್ಲೆಯವರಾಗಿದ್ದಾರೆ. ಆದರೆ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಗಾಗಿ ರಾಜಕಾರಣಿಗಳು (Politicians) ಒಂದಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಏಮ್ಸ್‌ ಹುಬ್ಬಳ್ಳಿ-ಧಾರವಾಡದಿಂದ ಎತ್ತಂಗಡಿಯಾದರೆ ಅದಕ್ಕೆ ರಾಜಕೀಯ ಇಚ್ಛಾಶಕ್ತಿ (Will Power)ಕೊರತೆಯೇ ಕಾರಣ ಎಂಬುದು ಇಲ್ಲಿನ ಪ್ರಜ್ಞಾವಂತ ನಾಗರಿಕರ (Citizens)ಅಭಿಪ್ರಾಯ.

ಕಿಮ್ಸ್, ಜಯದೇವದ ನೆರವು ಲಭ್ಯ:
ಕಿಮ್ಸ್‌, ಡಿಮಾನ್ಸ್‌, ಮಂಜೂರಾಗಿರುವ ಜಯದೇವ (Jayadeva) ಹೃದ್ರೋಗ ಆಸ್ಪತ್ರೆ (Hospital) ಏಮ್ಸ್‌ಗೆ ನೆರವಾಗಲಿವೆ. ಮಹಾನಗರದಲ್ಲಿ ಏಮ್ಸ್‌ ಸ್ಥಾಪನೆಯಿಂದಾಗಿ ಉತ್ತರ ಕರ್ನಾಟಕದಲ್ಲಿ (North Karnataka) ವೈದ್ಯಕೀಯ ಸೌಲಭ್ಯದ ಕೊರತೆ ನೀಗಲಿದೆ. ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಗದಗ, ವಿಜಯಪುರ, ಬಾಗಲಕೋಟ, ಹಾವೇರಿ, ಧಾರವಾಡ ಜಿಲ್ಲೆಗಳ ಬಡ ಹಾಗೂ ಮಧ್ಯಮ ರೋಗಿಗಳಿಗೆ ಸಕಲ ರೀತಿಯ ಚಿಕಿತ್ಸೆ ಸರ್ಕಾರದಿಂದಲೇ ದೊರೆಯುವಂತಾಗಲಿದೆ. ಹಾಗಾಗಿ ಈಗಾಗಲೇ ಗುರುತಿಸಿರುವ ಜಾಗದಲ್ಲಿಯೇ ಏಮ್ಸ್‌ ಸ್ಥಾಪನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎನ್ನುವುದು ಜಿಲ್ಲೆಯ ಪ್ರಜ್ಞಾವಂತರ ಒತ್ತಾಯವಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿಯೇ ಏಮ್ಸ್‌ ಸ್ಥಾಪಿಸಬೇಕು. ಈ ಹಿಂದೆ ಇಲ್ಲಿಯೇ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತು ಕೊಟ್ಟಿದ್ದರು. ಅದರಂತೆ ಅವರು ನಡೆಯಬೇಕು. ಇಲ್ಲದಿದ್ದರೆ ನಮ್ಮ ಭಾಗದವರು ಮುಖ್ಯಮಂತ್ರಿಯಾಗಿದ್ದರೂ ಏನು ಪ್ರಯೋಜನ?
ವಸಂತ ಲದವಾ, ಕೆಸಿಸಿಐ ಮಾಜಿ ಅಧ್ಯಕ್ಷ

Latest Videos
Follow Us:
Download App:
  • android
  • ios