Asianet Suvarna News Asianet Suvarna News

ಮೈಸೂರು ಗ್ಯಾಂಗ್‌ರೇಪ್‌: ಪೊಲೀಸರಿಗೆ ನಟ ಜಗ್ಗೇಶ್‌ 1 ಲಕ್ಷ ಬಹುಮಾನ

*   ತನಿಖಾ ತಂಡಕ್ಕೆ 1 ಲಕ್ಷ ರು. ನೀಡುವುದಾಗಿ ಘೋಷಿಸಿದ್ದ ಜಗ್ಗೇಶ್‌ 
*   ಪತ್ನಿ ಪರಿಮಳಾ ಅವರೊಂದಿಗೆ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಜಗ್ಗೇಶ್‌
*   ಮೈಸೂರು ಪೊಲೀಸ್‌ ಆಯುಕ್ತರ ಹೆಸರಲ್ಲಿ ಬಹುಮಾನದ 
 

Actor Jaggesh Given 1 Lakh Rs to Police for Arrested of Rape Accused grg
Author
Bengaluru, First Published Aug 29, 2021, 11:13 AM IST
  • Facebook
  • Twitter
  • Whatsapp

ಬೆಂಗಳೂರು(ಆ.29):  ಮೈಸೂರಿನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮೈಸೂರು ನಗರ ಪೊಲೀಸ್‌ ತಂಡಕ್ಕೆ ನಟ ಜಗ್ಗೇಶ್‌ 1 ಲಕ್ಷ ರು. ನೀಡಿದ್ದಾರೆ.

ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಿದ ಸುದ್ದಿ ತಿಳಿದ ಕೂಡಲೇ ಜಗ್ಗೇಶ್‌ ಅವರು ತನಿಖಾ ತಂಡಕ್ಕೆ 1 ಲಕ್ಷ ರು. ನೀಡುವುದಾಗಿ ಘೋಷಿಸಿದ್ದರು. 

ನನ್ನ ಸ್ನೇಹಿತೆಯನ್ನು 6 ಮಂದಿ ಪೊದೆಗೆ ಎಳೆದೊಯ್ದರು: ಮೈಸೂರು ರೇಪ್‌ ಘಟನೆ ಬಿಚ್ಚಿಟ್ಟ ಯುವಕ!

ಅದರಂತೆ ಶನಿವಾರ ತಮ್ಮ ಪತ್ನಿ ಪರಿಮಳಾ ಅವರೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರಿಗೆ ಬಹುಮಾನ ನೀಡುವಂತೆ 1 ಲಕ್ಷ ರು.ಗಳ ಚೆಕ್‌ ಹಸ್ತಾಂತರಿಸಿದ್ದಾರೆ. ಮೈಸೂರು ಪೊಲೀಸ್‌ ಆಯುಕ್ತರ ಹೆಸರಲ್ಲಿ ಜಗ್ಗೇಶ್‌ ದಂಪತಿ ಬಹುಮಾನದ ಮೊತ್ತದ ಚೆಕ್‌ ಅನ್ನು ಗೃಹ ಸಚಿವರಿಗೆ ನೀಡಿದ್ದಾರೆ.
 

Follow Us:
Download App:
  • android
  • ios