Wimbledon 2023: 24ನೇ ಗ್ರ್ಯಾನ್‌ಸ್ಲಾಂ ಮೇಲೆ ಜೋಕೋವಿಚ್ ಕಣ್ಣು
ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜೋಕೋವಿಚ್-ಆಲ್ಕರಜ್ ಮುಖಾಮುಖಿ
ದಾಖಲೆಯ 24ನೇ ಟೆನಿಸ್ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಜೋಕೋವಿಚ್
ಚೊಚ್ಚಲ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಗೆಲ್ಲುವ ವಿಶ್ವಾಸದಲ್ಲಿ ಕಾರ್ಲೊಸ್ ಆಲ್ಕರಜ್
ಲಂಡನ್(ಜು.16): ನೋವಾಕ್ ಜೋಕೋವಿಚ್ ದಾಖಲೆಯ 24ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲುವಿನ ಸನಿಹಕ್ಕೆ ತಲುಪಿದ್ದು, ಭಾನುವಾರ ವಿಂಬಲ್ಡನ್ ಫೈನಲ್‌ನಲ್ಲಿ ವಿಶ್ವ ನಂ.1 ಕಾರ್ಲೊಸ್ ಆಲ್ಕರಜ್ ವಿರುದ್ಧ ಸೆಣಸಲಿದ್ದಾರೆ. ಸರ್ಬಿಯಾದ ಟೆನಿಸ್ ಮಾಂತ್ರಿಕ ಜೋಕೋವಿಚ್ ಸತತ 5ನೇ ಹಾಗೂ ಒಟ್ಟಾರೆ 8ನೇ ವಿಂಬಲ್ಡನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಭವಿಷ್ಯದ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿರುವ ಸ್ಪೇನ್‌ನ 20 ವರ್ಷದ ಆಲ್ಕರಜ್ ಚೊಚ್ಚಲ ವಿಂಬಲ್ಡನ್ ಹಾಗೂ 2ನೇ ಗ್ರ್ಯಾನ್ ಸ್ಲಾಂ ಗೆಲ್ಲಲು ಹಪಹಪಿಸುತ್ತಿದ್ದಾರೆ.
ಜೋಕೋ ಹಲವು ದಾಖಲೆ?
ಒಂದು ವೇಳೆ ಜೋಕೋವಿಚ್ ಗೆದ್ದರೆ ಹಲವು ದಾಖಲೆಗಳು ಸೃಷ್ಟಿಯಾಗಲಿವೆ. ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಗೆದ್ದ ದಾಖಲೆ ಬರೆದಿದ್ದ ಜೋಕೋ, ವಿಂಬಲ್ಡನ್ ಗೆದ್ದರೆ ಒಟ್ಟಾರೆ ಸಿಂಗಲ್ಸ್‌ನಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ದಾಖಲೆ ಸರಿಗಟ್ಟಲಿದ್ದಾರೆ. ಮಾರ್ಗರೇಟ್ ಮಹಿಳಾ ಸಿಂಗಲ್ಸ್‌ನಲ್ಲಿ 24 ಗ್ರ್ಯಾನ್‌ಸ್ಲಾಂ ಗೆದ್ದಿದ್ದು, ಸೆರೆನಾ ವಿಲಿಯಮ್ಸ್ 23 ಬಾರಿ ಚಾಂಪಿಯನ್ ಆಗಿದ್ದಾರೆ. ಇನ್ನು, ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆ ರೋಜರ್ ಫೆಡರರ್ ಹೆಸರಲ್ಲಿದೆ. ಅವರು 8 ಬಾರಿ ಚಾಂಪಿಯನ್ ಆಗಿದ್ದಾರೆ. ಇದನ್ನೂ ಸರಿಗಟ್ಟುವ ಉತ್ತಮ ಅವಕಾಶ ಜೋಕೋವಿಚ್‌ಗಿದೆ.
Wimbledon 2023: ಮಾರ್ಕೆಟಾ ವೊಂಡ್ರೊಸೋವಾ ವಿಂಬಲ್ಡನ್ ರಾಣಿ!
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2
ಯುಎಸ್ ಓಪನ್: ಸೇನ್ ಸೆಮೀಸ್‌ಗೆ, ಸಿಂಧು ಔಟ್
ಲೋವಾ(ಅಮೆರಿಕ): ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಪಿ.ವಿ.ಸಿಂಧು ಹಾಗೂ ಯುವ ಪ್ರತಿಭೆ ಶಂಕರ್ ಮುತ್ತುಸ್ವಾಮಿ ಸೋತು ಹೊರಬಿದ್ದಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ವಿಶ್ವ ನಂ.12 ಸೇನ್, 19 ವರ್ಷದ ಶಂಕರ್ ವಿರುದ್ಧ 21-10, 21-17 ನೇರ ಗೇಮ್‌ಗಳಲ್ಲಿ ಮಣಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿದರು. ಸೆಮೀಸ್‌ನಲ್ಲಿ ಅವರು ಚೀನಾದ ಲೀ ಶಿ ಫೆಂಗ್ ವಿರುದ್ಧ ಸೆಣಸಲಿದ್ದಾರೆ. ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಚೀನಾದ ಫಾಂಗ್ ಜೀ ವಿರುದ್ಧ 20-22, 13-21 ಗೇಮ್‌ಗಳಲ್ಲಿ ಪರಾಭವಗೊಂಡರು.
'ನಾನು ಈವರೆಗೂ ಮಾಡಿದ ಅತ್ಯಂತ ಮುಜುಗರದ ಸಂಗತಿ..' ತಾಯಿಗೆ ಮುಖ ತೋರಿಸಲು ನಾಚಿಕೆ ಪಟ್ಟಿದ್ದೇಕೆ ದ್ರಾವಿಡ್!
ವಿನೇಶ್ ಏಷ್ಯನ್ ಗೇಮ್ಸ್ ಸ್ಪರ್ಧೆ ಕನಸು ಭಗ್ನ?
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವುದು ಅನುಮಾನವೆನಿಸಿದೆ. ಕಳೆದೊಂದು ವರ್ಷದಿಂದ ಸ್ಪರ್ಧೆಯಿಂದ ದೂರವಿರುವ ವಿನೇಶ್, ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವ ಮೊದಲು ತಾವು ಫಿಟ್ ಇರುವುದಾಗಿ ಸಾಬೀತುಪಡಿಸಬೇಕಿತ್ತು.
ಇದೇ ಕಾರಣಕ್ಕೆ ಅವರು ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ರ್‍ಯಾಂಕಿಂಗ್ ಸರಣಿಯೊಂದರಲ್ಲಿ ಸ್ಪರ್ಧಿಸಲು ನೋಂದಾಯಿಸಿಕೊಂಡಿದ್ದರು. ಆದರೆ ಶುಕ್ರವಾರ ಅನಾರೋಗ್ಯದ ಕಾರಣ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಹೀಗಾಗಿ ವಿನೇಶ್ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆಯುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.