US ಓಪನ್ 2019: ಮೂರನೇ ಸುತ್ತಿಗೆ ನಡಾಲ್ ಲಗ್ಗೆ

ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ರಾಫೆಲ್ ನಡಾಲ್ ನಡಾಲ್ ನಾಲ್ಕನೇ ಯುಎಸ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ನಿರೀಕ್ಷೆಯಂತೆಯೇ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಮಹಿಳೆಯರ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಸೋತು ಆಘಾತ ಅನುಭವಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

US Open 2019 Tennis star Rafael Nadal gets walkover

ನ್ಯೂಯಾರ್ಕ್[ಆ.31]: 18 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್ ನಡಾಲ್, ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 4ನೇ ಯುಎಸ್ ಓಪನ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ನಡಾಲ್, ಪುರುಷರ ಸಿಂಗಲ್ಸ್ ನ 2ನೇ ಸುತ್ತಿನಲ್ಲಿ ವಾಕೋವರ್ ಪಡೆದರು. ಎದುರಾಳಿ ಆಟಗಾರ ಆಸ್ಟ್ರೇಲಿಯಾದ ಥನಾಸಿ ಕೊಕ್ಕಿನಾಕಿಸ್ ಗಾಯದ ಕಾರಣದಿಂದ ಹಿಂದೆ ಸರಿದಿದ್ದರಿಂದ ನಡಾಲ್ 3ನೇ ಸುತ್ತಿಗೆ ಲಗ್ಗೆ ಇಟ್ಟರು. 

US ಓಪನ್ 2019: 3ನೇ ಸುತ್ತಿಗೇರಿದ ಸೆರೆನಾ

ಶನಿವಾರ ನಡೆಯಲಿರುವ 3ನೇ ಸುತ್ತಲ್ಲಿ ನಡಾಲ್ ದಕ್ಷಿಣ ಕೊರಿಯಾದ ಚಂಗ್ ಹ್ಯೂನ್ ರನ್ನು ಎದುರಿಸಲಿದ್ದಾರೆ. ಇನ್ನುಳಿದಂತೆ ಕ್ರೋಯೇಷಿಯಾದ ಮರಿನ್ ಸಿಲಿಕ್, ಜರ್ಮನಿಯ ಕೆಡ್ರಿಕ್ ಮರ್ಸೆಲ್ ವಿರುದ್ಧ 4-6, 6-3, 7-5, 6-3 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಫ್ರಾನ್ಸ್‌ನ ಗಾಲೆ ಮೊನಫಿಲ್ಸ್, ರೋಮೆನಿ ಯಾದ ಮಾರಿಸ್ ಕೊಪಿಲ್ ಎದುರು 6-3, 6-2, 6-2 ಸೆಟ್‌ಗಳಲ್ಲಿ ಜಯ ಪಡೆದರು. ಮುಂದಿನ ಸುತ್ತಿನಲ್ಲಿ ಮೊನಫಿಲ್ಸ್, ಕೆನಡಾದ ಶಪೊವಲೊವ್'ರನ್ನು ಎದುರಿಸಲಿದ್ದಾರೆ. 

ಪಿ.ವಿ ಸಿಂಧು ಬಯೋಪಿಕ್; ಪುಲ್ಲೇಲ ಪಾತ್ರಕ್ಕೆ ಬಾಲಿವುಡ್ ಹೀರೋ!

ಹೊರಬಿದ್ದ ವಿಂಬಲ್ಡನ್ ಚಾಂಪಿಯನ್!: ವಿಂಬಲ್ಡನ್ ಹಾಲಿ ಚಾಂಪಿ ಯನ್ ರೋಮೇನಿಯಾದ ಸಿಮೊನಾ ಹಾಲೆಪ್, ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ವಿಶ್ವ ನಂ.4 ಹಾಲೆಪ್ 2ನೇ ಸುತ್ತಿನ ಪಂದ್ಯದಲ್ಲಿ ಶ್ರೇಯಾಂಕ ರಹಿತೆ ಅಮೆರಿಕದ ಟೇಲರ್ ಟೌನ್‌ಸೆಂಡ್ ಎದುರು 6-2, 3-6, 6-7(4-7) ಸೆಟ್‌ಗಳಲ್ಲಿ ಪರಾಭವ ಹೊಂದಿದರು. ಉಳಿದಂತೆ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ, ನೆದರ್‌ಲೆಂಡ್‌ನ ಕಿಕಿ ಬೆರ್ಟೆನ್ಸ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ, ಸ್ವಿಜರ್‌ಲೆಂಡ್‌ನ ಬೆಲಿಂದಾ ಬೆನ್ಸಿಕ್ 3ನೇ ಸುತ್ತಿಗೆ ಪ್ರವೇಶಿಸಿದರು.
 

Latest Videos
Follow Us:
Download App:
  • android
  • ios