Asianet Suvarna News Asianet Suvarna News

ಪೂಜಾ ಗಾಂಧಿ ತಂಗಿ ಸುಹಾನಿ ದೇಶದ ಸ್ಟ್ರಾಂಗೆಸ್ಟ್ ವುಮನ್..!

ಕನ್ನಡದ ಎವರ್‌ಗ್ರೀನ್ ಚಿತ್ರ ‘ಮುಂಗಾರು ಮಳೆ’ಯ ಬೆಡಗಿ ಪೂಜಾ ಗಾಂಧಿಗೆ ಇಬ್ಬರು ತಂಗಿಯರು. ಅದರಲ್ಲಿ ಒಬ್ಬರಾದ ರಾಧಿಕಾ ಗಾಂಧಿ ‘ಶ್ರೀ ಹರಿಕಥೆ’ ಚಿತ್ರದಲ್ಲಿ ನಟಿಸಿ ನಾನೂ ನಟಿ ಎಂದು ಸಾಬೀತು ಮಾಡಿಕೊಂಡರು. ಆದರೆ ಅವರಿಗೆ ಮತ್ತೊಬ್ಬ ತಂಗಿ ಇದ್ದಾರೆ ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಈಗ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ‘ಸ್ಟ್ರಾಂಗೆಸ್ಟ್ ವುಮನ್ ಇನ್ ಇಂಡಿಯಾ’ ಎನ್ನುವ ಅಭಿದಾನ ಪಡೆದಿದ್ದಾರೆ.

Strong Indian woman Suhani all set to lift nation higher
Author
Bengaluru, First Published Jul 16, 2018, 4:20 PM IST

ಬೆಂಗಳೂರು: ಅಕ್ಕ ಪೂಜಾ ಗಾಂಧಿಯೂ ನಟಿ, ತಂಗಿ ರಾಧಿಕಾ ಗಾಂಧಿಯೂ ನಟಿ. ಆದರೆ ಸುಹಾನಿ ಗಾಂಧಿಗೆ ಮಾತ್ರ ಕ್ರೀಡೆಯಲ್ಲಿ ಆಸಕ್ತಿ. ಅದೂ ವೈಟ್ ಲಿಫ್ಟಿಂಗ್‌ನಲ್ಲಿ. ಇದೇ ಆಸಕ್ತಿ ಇಂದು ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ. ರಷ್ಯಾದಲ್ಲಿ ನಡೆದ ವರ್ಲ್ಡ್ 90 ಪ್ಲಸ್ ಮಹಿಳೆಯರ ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದ ಸ್ಟ್ರಾಂಗೆಸ್ಟ್ ವುಮೆನ್ ಸುಹಾನಿ.

ಕನ್ನಡದ ಎವರ್‌ಗ್ರೀನ್ ಚಿತ್ರ ‘ಮುಂಗಾರು ಮಳೆ’ಯ ಬೆಡಗಿ ಪೂಜಾ ಗಾಂಧಿಗೆ ಇಬ್ಬರು ತಂಗಿಯರು. ಅದರಲ್ಲಿ ಒಬ್ಬರಾದ ರಾಧಿಕಾ ಗಾಂಧಿ ‘ಶ್ರೀ ಹರಿಕಥೆ’ ಚಿತ್ರದಲ್ಲಿ ನಟಿಸಿ ನಾನೂ ನಟಿ ಎಂದು ಸಾಬೀತು ಮಾಡಿಕೊಂಡರು. ಆದರೆ ಅವರಿಗೆ ಮತ್ತೊಬ್ಬ ತಂಗಿ ಇದ್ದಾರೆ ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಈಗ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ‘ಸ್ಟ್ರಾಂಗೆಸ್ಟ್
ವುಮನ್ ಇನ್ ಇಂಡಿಯಾ’ ಎನ್ನುವ ಅಭಿದಾನ ಪಡೆದಿದ್ದಾರೆ.

ಅಂದಹಾಗೆ ಅವರ ಹೆಸರು ಸುಹಾನಿ ಗಾಂಧಿ. ಸುಹಾನಿ ಗಾಂಧಿ ಮೂರು ವರ್ಷಗಳ ಹಿಂದೆ ಎಲ್ಲರಂತೆ ಸಾಮಾನ್ಯವಾಗಿದ್ದ ಹೆಣ್ಣು ಮಗಳು. ಆದರೆ ಒಂದು ಸಂದರ್ಭದಲ್ಲಿ ವೈಟ್‌ಲಿಫ್ಟಿಂಗ್ ಮೇಲೆ ಅಪಾರ ಪ್ರೀತಿ ಹುಟ್ಟಿ ಭರ್ಜರಿ ವರ್ಕ್‌ಔಟ್‌ಗೆ ಇಳಿದೇ ಬಿಟ್ಟರು. ಅದೆಲ್ಲದರ ಪರಿಣಾಮ ಈಗ ಸುಹಾನಿ ದೇಶದ ಅತಿ ಬಲಿಷ್ಠ ಹೆಣ್ಣು ಮಗಳು. ಹೀಗಾಗಿಯೇ ದೂರದ ರಷ್ಯಾದಲ್ಲಿ ಜುಲೈ 13, 14 ರಂದು ಅಂತಾರಾಷ್ಟ್ರೀಯ ವಲ್ಡ್ ವೈಟ್‌ಲಿಫ್ಟಿಂಗ್ ಸ್ಪರ್ಧೆಗೆ ದೇಶವನ್ನು ಪ್ರತಿನಿಧಿಸುತ್ತಿರುವುದು.

ದೇಶದ ಮೊಟ್ಟ ಮೊದಲ ವೈಟ್ ಲಿಫ್ಟರ್: 

ಅಷ್ಟಕ್ಕೂ ಸುಹಾನಿ ಸಾಧನೆ ಕಡಿಮೆಯದ್ದೇನಲ್ಲಾ ನಮ್ಮಲ್ಲಿ ಪುರುಷರಿಗೂ ಕಷ್ಟ ಸಾಧ್ಯವಾಗಿರುವ ವೈಟ್‌ಲಿಫ್ಟಿಂಗ್‌ನಲ್ಲಿ ಮೂರು ವರ್ಷದಿಂದ ನಮ್ಮನ್ನು ತಾವು ತೊಡಗಿಸಿಕೊಂಡು ಗೋವಾದಲ್ಲಿ ನಡೆದ ರಾಷ್ಟ್ರೀಯ ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಗೆದ್ದು ದೇಶದ ಬಲಿಷ್ಠ ಹೆಣ್ಣು ಎಂದೆನಿಸಿಕೊಂಡಿದ್ದರು. ಇದೀಗ ರಷ್ಯಾದಲ್ಲಿ ಮಹಿಳೆಯರ 90 ಕೆಜಿಗೂ ಅಧಿಕ ವಿಭಾಗದಲ್ಲಿ ವೈಟ್‌ಲಿಫ್ಟಿಂಗ್ ಚಾಲೆಂಜ್ ತೆಗೆದುಕೊಂಡಿದ್ದಾರೆ. ಇದು ಈಗಾಗಲೇ ಇತಿಹಾಸದ ಪುಟ ಸೇರಿದೆ. ಅಲ್ಲಿ ಗೆದ್ದರೆ ಖಂಡಿತಕ್ಕೂ ಅದೊಂದು ದೊಡ್ಡ ಮೈಲುಗಲ್ಲು. ಹಾಗಿದ್ದರೂ ಕೂಡ ದೇಶದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ವನಿತೆ ಇವರೇ. 

ಭವಿಷ್ಯದಲ್ಲಿ ಅವಕಾಶವಿದೆ: 

‘ಭಾರತದಂತಹ ದೇಶದಲ್ಲಿ ವೈಟ್‌ಲಿಫ್ಟಿಂಗ್‌ಗೆ ಹೆಚ್ಚಿನ ಪ್ರೋತ್ಸಾಹವಿಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ನನ್ನ ತಂಗಿ ಸುಹಾನಿಗೆ ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಇತ್ತು. ನಾವು ಸಿನಿಮಾ ಅಂದರೆ ಅವಳು ಆಟ, ಪವರ್ ಲಿಫ್ಟಿಂಗ್ ಎನ್ನುತ್ತಿದ್ದಳು. ರಷ್ಯಾದಲ್ಲಿ ಮೂರು ಚಿನ್ನದ ಪದಕ ಗೆದ್ದಿರುವುದು ತುಂಬಾ ಖುಷಿ ನೀಡಿದೆ. ಅವಳು ದೇಶಕ್ಕೆ ಕೀರ್ತಿ ತಂದಿದ್ದಾಳೆ.
- ಪೂಜಾಗಾಂಧಿ, ನಟಿ

ಅಕ್ಕ ಪೂಜಾ ಗಾಂಧಿಯೂ ನಟಿ, ತಂಗಿ ರಾಧಿಕಾ ಗಾಂಧಿಯೂ ನಟಿ. ಆದರೆ ಸುಹಾನಿ ಗಾಂಧಿಗೆ ಮಾತ್ರ ಕ್ರೀಡೆಯಲ್ಲಿ ಆಸಕ್ತಿ. ಅದೂ ವೈಟ್ ಲಿಫ್ಟಿಂಗ್‌ನಲ್ಲಿ. ಇದೇ ಆಸಕ್ತಿ ಇಂದು ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ. ರಷ್ಯಾದಲ್ಲಿ ನಡೆದ ವರ್ಲ್ಡ್ 90 ಪ್ಲಸ್ ಮಹಿಳೆಯರ ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದ ಸ್ಟ್ರಾಂಗೆಸ್ಟ್ ವುಮೆನ್ ಸುಹಾನಿ. ತುಂಬಾ ಪ್ರೋತ್ಸಾಹವಿದೆ. ಮುಂದೆ ನಮ್ಮ ದೇಶದಲ್ಲೂ ಈ ಬಗ್ಗೆ ಕ್ರೇಜ್ ಹುಟ್ಟೇ ಹುಟ್ಟುತ್ತದೆ. ಅದಕ್ಕಾಗಿಯೇ ನಾನು ಮೂರು ವರ್ಷಗಳ ಹಿಂದೆ ಇದರಿಂದ ಆಕರ್ಷಿತಳಾದೆ. ದಿನವೂ ವರ್ಕೌಟ್ ಮಾಡಿದೆ. ಇಂದು ನಾನು ದೇಶದಲ್ಲಿಯೇ ಅತಿ ಹೆಚ್ಚು ಭಾರ ಎತ್ತಿದ ಮಹಿಳೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನ್ನಿಸುತ್ತದೆ’ ಎನ್ನುವ ಸುಹಾನಿ ಭವಿಷ್ಯದತ್ತ ತಮ್ಮ ಚಿತ್ತ ನೆಟ್ಟು ಸಾಗುತ್ತಿದ್ದಾರೆ.

ತಯಾರಿ ತುಂಬಾ ಬೇಕು: 

ಭಾರ ಎತ್ತುವುದು ಎಂದರೆ ಸಾಮಾನ್ಯ ಸಂಗತಿಯಲ್ಲ. ಅದಕ್ಕೆ ಇಡೀ ದೇಹದ ಎಲ್ಲಾ ಅಂಗಾಂಗಗಳನ್ನೂ ಒಟ್ಟು ಮಾಡಿ, ಎಲ್ಲಾ ಶಕ್ತಿಯನ್ನು ಸೇರಿಸಿ ಭಾರ ಎತ್ತಬೇಕು. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿಯೂ ಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೇ ಅಪಾಯ. ಈ ಬಗ್ಗೆ ಸುಹಾನಿ ಹೇಳುವುದು ಹೀಗೆ ‘ವೈಟ್‌ಲಿಫ್ಟಿಂಗ್ ಮಾಡಬಯಸುವವರು ಮುಖ್ಯವಾಗಿ ಡಯಟ್‌ಗೆ ಹೆಚ್ಚಿನ ಒತ್ತು ನೀಡಬೇಕು. ದೇಹದಲ್ಲಿ ಪ್ರೊಟೀನ್, ಫೈಬರ್, ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇಡೀ ದೇಹದಲ್ಲಿ ಯಾವುದೇ ಅಂಗಕ್ಕೆ ಸಮಸ್ಯೆಯಾದರೂ ವೈಟ್ ಲಿಫ್ಟಿಂಗ್ ಕಷ್ಟ. ಹಾಗಾಗಿ ಹೆಚ್ಚು ಪರಿಶ್ರಮ ಹಾಕಿದರೆ ಮಾತ್ರ ಈ ಕ್ರೀಡೆಯಲ್ಲಿ ಗೆಲ್ಲಲು ಸಾಧ್ಯ’.

ಮೂರು ತಿಂಗಳ ತಯಾರಿ: 

ಸುಹಾನಿ ಗಾಂಧಿ ಇಂದು ರಷ್ಯಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರಬಹುದು, ಆದರೆ ಇದರ ಹಿಂದೆ ಅವರು ಮಾಡಿಕೊಂಡಿರುವುದು ಕೇವಲ ಮೂರು ತಿಂಗಳ ತಯಾರಿ ಅಷ್ಟೇ. ಅದಕ್ಕೂ ಮೊದಲು ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರೂ ತದನಂತರ ತಯಾರಿ ನಿಲ್ಲಿಸಿದ್ದರು. ಆದರೆ ಯಾವಾಗ ಅಂತಾರಾಷ್ಟ್ರೀಯ 90 ಪ್ಲಸ್ ಸ್ಪರ್ಧೆ ನಿಗದಿಯಾಯಿತೋ ಆಗಲೇ ನಿರ್ಧಾರ ಮಾಡಿ ತಯಾರಿಯಲ್ಲಿ ತೊಡಗಿಕೊಂಡರು. ಸರಿಯಾಗಿ ಮೂರು ತಿಂಗಳು ಆಹಾರ, ವ್ಯಾಯಾಮಗಳಲ್ಲಿ ತೊಡಗಿಸಿಕೊಂಡು ಇಂದು ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.

ರಾಘವೇಂದ್ರರ ಮಾರ್ಗದರ್ಶನ:

 ಸುಹಾನಿ ಸಾಮಾನ್ಯ ವ್ಯಕ್ತಿಯಿಂದ ದೇಶದ ಗಟ್ಟಿಗಿತ್ತಿಯಾಗಿ ರೂಪುಗೊಳ್ಳುವುದರ ಹಿಂದೆ ರಾಘವೇಂದ್ರ ಎನ್ನುವವರ ಮಾರ್ಗದರ್ಶನವಿದೆ. ಸೂಕ್ತ ಆಹಾರ ಪದ್ಧತಿ, ನಿಗದಿತ ಅಭ್ಯಾಸಗಳಿಂದ ಇಂದು ಸುಹಾನಿ ಕ್ವಿಂಟಾಲ್ ತೂಕವನ್ನಾದರೂ ನಿರಾಯಾಸವಾಗಿ ಎತ್ತುತ್ತಾರೆ. ‘ನಮ್ಮಲ್ಲಿ ಲೈಟ್‌ಲಿಫ್ಟಿಂಗ್, ಬಾಡಿ ಬಿಲ್ಡಿಂಗ್‌ಗೆ ಹೆಚ್ಚಿನ ಮಹತ್ವ ನೀಡುತ್ತಿರಲಿಲ್ಲ. ಆದರೆ ಈಗೀಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬಾಡಿ ಬಿಲ್ಡ್ ಸ್ಪರ್ಧೆಗಳು ಹೆಚ್ಚಾಗುತ್ತಿವೆ. ಅಲ್ಲದೇ ಇದೇ ಹಾದಿಯಲ್ಲಿ ವೈಟ್ ಲಿಫ್ಟ್ ಸ್ಪರ್ಧೆಯೂ ಸಾಗಬೇಕು’ ಎನ್ನುವುದು ರಾಘವೇಂದ್ರ ಅವರ ಆಶಯ. ಹೀಗೆ ಕನ್ನಡದ ತಾರೆ ಪೂಜಾ ಗಾಂಧಿಯ ತಂಗಿ ಬೆಂಗಳೂರಿನ ಸುಹಾನಿ ಇಂದು ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ. ಅವರು ರಷ್ಯಾದಲ್ಲಿ ಗೆಲ್ಲುವುದು, ಸೋಲುವುದು ಎರಡನೇಯ ಸಂಗತಿ, ಆದರೆ ಅಲ್ಲಿನ ತನಕ ಸಾಗಿರುವುದೇ ಸಾಧನೆ. 

Follow Us:
Download App:
  • android
  • ios