ನವದೆಹಲಿ(ಏ.18): ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಶನಿವಾರ ಈ ಕುರಿತು ಟ್ವೀಟ್‌ ಮಾಡಿರುವ 49 ವರ್ಷದ ಕಿರಣ್ ರಿಜಿಜು, ನನ್ನ ಕೊರೋನಾ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದ್ದು, ವೈದ್ಯರ ಸಲಹೆ ಪಡೆಯುತ್ತಿದ್ದೆನೆ. ನಾನು ದೈಹಿಕವಾಗಿ ಫಿಟ್‌ ಆಗಿದ್ದೇನೆ. ನನ್ನ ಜೊತೆ ಸಂರ್ಪಕಕ್ಕೆ ಬಂದಿರುವವರು ಕೂಡಲೇ ಕ್ವಾರಂಟೈನ್‌ ಆಗಿ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಕೋರಿದ್ದಾರೆ. 

ರಿಜಿಜು ಶುಕ್ರವಾರವಷ್ಟೇ ಉತ್ತರ್‌ಖಂಡ್‌ನ ತೆಹ್ರಿಯಲ್ಲಿ ವಾಟರ್‌ ಸ್ಪೋರ್ಟ್ಸ್ ಮತ್ತು ಅಡ್ವೆಂಚರ್‌ ಇನ್ಸ್‌ಟಿಟ್ಯೂಟ್‌ಗೆ ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೇ ಸೋಂಕಿನಿಂದ ಗುಣಮುಖರಾಗಿದ್ದ ಉತ್ತರ್‌ಖಂಡ್‌ನ ಸಿಎಂ ತಿರತ್‌ ಸಿಂಗ್‌ ರಾವತ್‌ ಪಾಲ್ಗೊಂಡಿದ್ದರು.

ಕೊರೋನಾ ಎದುರಿಸಲು 10 ಹಾದಿ: ಡಾ. ಬಿಎಂ ಹೆಗ್ಡೆ ಕೊಟ್ಟ ಸಲಹೆಗಳಿವು

ದೇಶದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದ್ದು, ಶನಿವಾರ(ಏ.17)ದಂದು ಒಂದೇ ದಿನ ದಾಖಲೆಯ 2.34 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 1,341 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ ದಾಖಲೆಯ 17480 ಕೋವಿಡ್ 19 ಪ್ರಕರಣಗಳು ಒಂದೇ ದಿನ ಪತ್ತೆಯಾಗಿವೆ.