Asianet Suvarna News Asianet Suvarna News

ವೈದ್ಯಕೀಯ ಪದವಿ ಪಡೆದ ಸಚಿನ್‌ ಪುತ್ರಿ ಸಾರಾ

ತಮ್ಮ ಪುತ್ರಿಯ ಸಾಧನೆಗೆ ಸಚಿನ್‌ ಮತ್ತು ಅಂಜಲಿ ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಸಾರಾ, ತಮ್ಮ ಪದವಿ ಪ್ರಧಾನ ಸಮಾರಂಭದಲ್ಲಿ ಪೋಷಕರಾದ ಸಚಿನ್‌ ಮತ್ತು ಅಂಜಲಿಯವರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ಅವು ವೈರಲ್‌ ಆಗಿವೆ. 

Sachin Tendulkar Congratulates Daughter Sara on Her Graduation
Author
Mumbai, First Published Sep 22, 2018, 10:19 AM IST

ಲಂಡನ್‌(ಸೆ.22): ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌, ಇಲ್ಲಿನ ಪ್ರತಿಷ್ಠಿತ ಯುನಿವರ್ಸಿಟಿ ಕಾಲೇಜ್‌ ಆಫ್‌ ಲಂಡನ್‌(ಯುಸಿಎಲ್‌)ನಲ್ಲಿ ಇತ್ತೀಚೆಗೆ ವೈದ್ಯಕೀಯ ಪದವಿ ಪಡೆದಿದ್ದಾರೆ. 

ತಮ್ಮ ಪುತ್ರಿಯ ಸಾಧನೆಗೆ ಸಚಿನ್‌ ಮತ್ತು ಅಂಜಲಿ ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಸಾರಾ, ತಮ್ಮ ಪದವಿ ಪ್ರಧಾನ ಸಮಾರಂಭದಲ್ಲಿ ಪೋಷಕರಾದ ಸಚಿನ್‌ ಮತ್ತು ಅಂಜಲಿಯವರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ಅವು ವೈರಲ್‌ ಆಗಿವೆ. 

 
 
 
 
 
 
 
 
 
 
 
 
 

I did what?🙊

A post shared by Sara Tendulkar (@saratendulkar) on Sep 6, 2018 at 10:47am PDT

ಇನ್ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸಾರಾ, ಮುಂಬೈನ ಧೀರೂಭಾಯ್‌ ಅಂಬಾನಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಬಾಲ್ಯದ ಶಿಕ್ಷಣ ಮುಗಿಸಿ, ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದ್ದರು.

Follow Us:
Download App:
  • android
  • ios