Asianet Suvarna News Asianet Suvarna News

ಡೇವಿಸ್‌ ಕಪ್‌ಗೆ ಬೋಪ​ಣ್ಣ ಸೆಪ್ಟೆಂಬರ್‌ನಲ್ಲಿ ವಿದಾ​ಯ; ಬೆಂಗಳೂರಿನಲ್ಲಿ ವಿದಾಯದ ಪಂದ್ಯವಾಡುವ ಬಯಕೆ

ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ಡೇವಿಸ್ ಕಪ್‌ನಲ್ಲಿ ರೋಹನ್ ಬೋಪಣ್ಣ ಭಾಗಿ
ಮೊರಾಕ್ಕೊ ವಿರುದ್ದ ಕೊನೆಯ ಡೇವಿಸ್ ಕಪ್ ಪಂದ್ಯ ಆಡಲಿರುವ ಟೆನಿಸಿಗ
ವಿದಾಯದ ಪಂದ್ಯವನ್ನು ತವರಿನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ ರೋಹನ್ ಬೋಪಣ್ಣ

Rohan Bopanna to end Davis Cup career in September wants to play farewell match in Bengaluru kvn
Author
First Published Jun 22, 2023, 12:23 PM IST

ನವ​ದೆ​ಹ​ಲಿ(ಜೂ.22): ಭಾರ​ತದ ತಾರಾ ಟೆನಿ​ಸಿಗ, ಕರ್ನಾ​ಟ​ಕದ ರೋಹನ್‌ ಬೋಪಣ್ಣ ಸೆಪ್ಟೆಂಬ​ರ್‌​ನಲ್ಲಿ ಡೇವಿಸ್‌ ಕಪ್‌ ವೃತ್ತಿ​ಬ​ದು​ಕಿಗೆ ವಿದಾಯ ಹೇಳ​ಲಿ​ದ್ದಾರೆ. ಇದನ್ನು ಸ್ವತಃ 43 ವರ್ಷದ ಬೋಪಣ್ಣ ಬಹಿ​ರಂಗ​ಪ​ಡಿ​ಸಿದ್ದು, ವಿದಾ​ಯದ ಪಂದ್ಯ​ವನ್ನು ಬೆಂಗ​ಳೂ​ರಲ್ಲಿ ಆಡುವ ಬಯಕೆ ವ್ಯಕ್ತ​ಪ​ಡಿ​ಸಿ​ದ್ದಾರೆ. 

ಆದರೆ ಮೊರಾಕ್ಕೊ ವಿರುದ್ಧ ವಿಶ್ವ ಗುಂಪು-2ರ ಪಂದ್ಯಕ್ಕೆ ಉತ್ತರ ಪ್ರದೇಶ ಆತಿಥ್ಯ ವಹಿ​ಸ​ಲಿ​ದೆ. ಪಂದ್ಯ ಉತ್ತರ ಪ್ರದೇ​ಶ​ದಲ್ಲೇ ನಡೆ​ದರೆ ಬೋಪ​ಣ್ಣಗೆ ಬೆಂಗ​ಳೂ​ರಿ​ನಲ್ಲಿ ಪಂದ್ಯ ಆಡುವ ಅವ​ಕಾ​ಶ​ವಿಲ್ಲ. ಆದರೆ ಈ ಪಂದ್ಯ ಬೆಂಗ್ಳೂ​ರಲ್ಲಿ ನಡೆ​ಯ​ಬೇ​ಕೆಂದು ಬಯ​ಸಿ​ರುವ ಬೋಪಣ್ಣ, ಪಂದ್ಯ ಸ್ಥಳಾಂತ​ರ​ಗೊ​ಳ್ಳುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ. ಬೋಪಣ್ಣ 2002ರಲ್ಲಿ ಭಾರತ ಪರ ಮೊದಲ ಡೇವಿಡ್‌ ಪಂದ್ಯ​ವಾ​ಡಿದ್ದು, ಈವ​ರೆಗೆ 32 ಪಂದ್ಯಗಳಲ್ಲಿ ಪ್ರತಿ​ನಿ​ಧಿ​ಸಿ​ದ್ದಾರೆ.

"ನಾನು ಸೆಪ್ಟೆಂಬರ್‌ನಲ್ಲಿ ನನ್ನ ಪಾಲಿನ ಕೊನೆಯ ಡೇವಿಸ್‌ ಕಪ್ ಪಂದ್ಯವನ್ನು ಆಡಬೇಕು ಎಂದುಕೊಂಡಿದ್ದೇನೆ" ಎಂದು ಲಂಡನ್‌ನಲ್ಲಿರುವ ರೋಹನ್ ಬೋಪಣ್ಣ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು 2002ರಿಂದಲೂ ತಂಡದ ಜತೆಗಿದ್ದೇನೆ. ನಾನು ನನ್ನ ಕೊನೆಯ ಪಂದ್ಯವನ್ನು ನನ್ನ ತವರಿನಲ್ಲಿ ಆಡಬೇಕು ಎಂದು ಬಯಸಿದ್ದೇನೆ. ನಾನು ನಮ್ಮ ಹುಡುಗರ (ಭಾರತೀಯ ಆಟಗಾರರ) ಜತೆ ಮಾತನಾಡಿದ್ದೇನೆ. ಅವರೆಲ್ಲರೂ ಬೆಂಗಳೂರಿನಲ್ಲಿ ಆಡುವ ಕುರಿತಂತೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೂಡಾ ಡೇವಿಡ್ ಕಪ್ ಆಯೋಜನೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಹೀಗಾಗಿ ಭಾರತೀಯ ಟೆನಿಸ್ ಫೆಡರೇಷನ್‌ ಡೇವಿಸ್ ಕಪ್ ಟೂರ್ನಿಯನ್ನು ಬೆಂಗಳೂರಿನಲ್ಲಿ ಆಯೋಜಿಸುವ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

90ನೇ ಗೋಲು: ಸಕ್ರಿ​ಯ ಫುಟ್ಬಾ​ಲಿಗರ ಪಟ್ಟಿ​ಯ​ಲ್ಲಿ 4ನೇ ಸ್ಥಾನ​ಕ್ಕೇ​ರಿದ ಚೆಟ್ರಿ!

ಟೆನಿಸ್‌ ಗ್ರ್ಯಾನ್‌ ಸ್ಲಾಂ ಜಯಿಸಿದ ನಾಲ್ವರು ಟೆನಿಸ್ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ರೋಹನ್ ಬೋಪಣ್ಣ, "ನಾನು ಕಳೆದ 20 ವರ್ಷಗಳಿಂದ ಟೆನಿಸ್ ಆಡುತ್ತಾ ಬಂದಿದ್ದೇನೆ. ಪ್ರತಿಯೊಬ್ಬರು ಬಂದು ನನ್ನ ಕೊನೆಯ ಪಂದ್ಯವನ್ನು ವೀಕ್ಷಿಸಲಿ ಎಂದು ಬಯಸುತ್ತೇನೆ" ಎಂದು ಬೋಪಣ್ಣ ಹೇಳಿದ್ದಾರೆ.

ರೋಹನ್ ಬೋಪಣ್ಣ ಮೊರಾಕ್ಕೊ ವಿರುದ್ದ ಕಣಕ್ಕಿಳಿಯುವ ಮೂಲಕ ಡೇವಿಸ್‌ ಕಪ್‌ ಇತಿಹಾಸದಲ್ಲಿ ಟೆನಿಸ್ ದಿಗ್ಗಜ ವಿಜಯ್ ಅಮೃತ್‌ರಾಜ್ ಅವರನ್ನು ಹಿಂದಿಕ್ಕಲಿದ್ದಾರೆ. ರೋಹನ್ ಬೋಪಣ್ಣ ಇದುವರೆಗೂ 32 ಡೇವಿಸ್ ಕಪ್ ಪಂದ್ಯಗಳನ್ನಾಡಿದ್ದು, 12 ಸಿಂಗಲ್ಸ್‌ ಹಾಗೂ 10 ಡಬಲ್ಸ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

ತೈಪೆ ಓಪನ್‌: ಪ್ರಣಯ್‌, ಕಶ್ಯಪ್‌ ಪ್ರಿ ಕ್ವಾರ್ಟರ್‌ಗೆ

ತೈಪೆ: ಭಾರ​ತದ ಶಟ್ಲರ್‌ಗಳಾದ ಎಚ್‌.ಎಸ್‌.ಪ್ರ​ಣಯ್‌ ಹಾಗೂ ಪಾರು​ಪಲ್ಲಿ ಕಶ್ಯಪ್‌ ಇಲ್ಲಿ ಬುಧ​ವಾರ ಆರಂಭಗೊಂಡ ತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದಾರೆ. ವಿಶ್ವ ನಂ.9 ಪ್ರಣಯ್‌ ಸ್ಥಳೀಯ ಶಟ್ಲರ್‌ ಲಿನ್‌ ಯು ವಿರುದ್ಧ ಕೇವಲ 26 ನಿಮಿಷದಲ್ಲಿ 21-11, 21-10ರಲ್ಲಿ ಗೆದ್ದರೆ, ಕಶ್ಯಪ್‌ ಜರ್ಮ​ನಿಯ ಸ್ಯಾಮು​ಯಲ್‌ ಹಿಯೊ ವಿರುದ್ಧ 21-15, 21-16ರಲ್ಲಿ ಜಯಿ​ಸಿ​ದರು.

ಮಹಿಳಾ ಕ್ರಿಕೆಟ್‌ ಆಯ್ಕೆ ಸಮಿ​ತಿಗೆ ಶ್ಯಾಮ ಶಾ

ಮುಂಬೈ: ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡ​ಳಿ​(​ಬಿ​ಸಿ​ಸಿ​ಐ) ಮಹಿಳಾ ತಂಡದ ಆಯ್ಕೆ ಸಮಿ​ತಿಗೆ ಮಾಜಿ ಕ್ರಿಕೆ​ಟರ್‌ ಶ್ಯಾಮ ಶಾ ಅವ​ರು ಸೇರ್ಪ​ಡೆ​ಗೊಂಡಿ​ದ್ದಾರೆ. ಈ ಬಗ್ಗೆ ಬಿಸಿ​ಸಿಐ ಕಾರ‍್ಯ​ದರ್ಶಿ ಜಯ್‌ ಶಾ ಪ್ರಕ​ಟಣೆ ಹೊರ​ಡಿ​ಸಿ​ದ್ದಾರೆ. 51 ವರ್ಷದ ಶ್ಯಾಮ ಭಾರತ ಪರ 1995-97ರ ನಡುವೆ 3 ಟೆಸ್ಟ್‌ ಹಾಗೂ 5 ಏಕ​ದಿನ ಪಂದ್ಯ​ಗ​ಳ​ನ್ನಾ​ಡಿ​ದ್ದಾರೆ. ಬಂಗಾಳ ಹಾಗೂ ರೈಲ್ವೇಸ್‌ ತಂಡ​ಗ​ಳನ್ನೂ ಪ್ರತಿ​ನಿ​ಧಿ​ಸಿ​ರುವ ಅವರು ಸಮಿ​ತಿ​ಯಲ್ಲಿ ಮಿಥು ಮುಖರ್ಜಿ ಸ್ಥಾನ​ವನ್ನು ತುಂಬ​ಲಿ​ದ್ದಾರೆ. ಇದೇ ವೇಳೆ ಕಿರಿಯರ ಆಯ್ಕೆ ಸಮಿತಿಗೆ ರಾಜ್ಯದ ತಿಲಕ್‌ ಮುಖ್ಯ​ಸ್ಥರಾಗಿ ನೇಮ​ಕ​ಗೊಂಡಿ​ದ್ದಾಗಿ ಬಿಸಿ​ಸಿಐ ತಿಳಿ​ಸಿದೆ. ಇತ್ತೀ​ಚೆಷ್ಟೆಎಸ್‌.ಶ​ರತ್‌ ಅವ​ರಿಂದ ತೆರ​ವು​ಗೊಂಡಿದ್ದ ಸಮಿ​ತಿಯ ಸ್ಥಾನಕ್ಕೆ ತಿಲ​ಕ್‌​ರ​ನ್ನು ನೇಮಿ​ಸ​ಲಾ​ಗಿತ್ತು.

Follow Us:
Download App:
  • android
  • ios