ಟ್ರಿನಿಡಾಡ್(ಆ.14): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಆರಂಭಿಕ ಹಂತದಲ್ಲಿ ಮಳೆಯಿಂದಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತ್ತು. 1.3 ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ 8 ರನ್ ಸಿಡಿಸಿದಾಗ ಪಂದ್ಯ ಸ್ಥಗಿತಗೊಂಡಿತ್ತು. ಆದರೆ ಕೆಲ ಹೊತ್ತಲ್ಲೇ ಪಂದ್ಯ ಮತ್ತೆ ಆರಂಭವಾಗಿತ್ತು. ಇದೀಗ 2ನೇ ಬಾರಿಗೆ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಅಂತಿಮ ಪಂದ್ಯದಲ್ಲಿ ಗೇಲ್ ಅಬ್ಬರ; ಶುಭಕೋರಿದ ಕೊಹ್ಲಿ ಬಾಯ್ಸ್!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಉತ್ತಮ ಆರಂಭ ಪಡೆಯಿತು. ಕ್ರಿಸ್ ಗೇಲ್ ಹಾಗೂ ಇವಿನ್ ಲಿವಿಸ್ ಮೊದಲ ವಿಕೆಟ್‍‌‌ಗೆ 115 ರನ್ ಜೊತೆಯಾಟ ನೀಡಿತು. ಲಿವಿಸ್ 43 ರನ್ ಸಿಡಿಸಿ ಔಟಾದರು. ಆದರೆ ಅಬ್ಬರಿಸಿದ ಗೇಲ್ ಹಾಫ್ ಸೆಂಚುರಿ ಸಿಡಿಸಿದರು. ಗೇಲ್ 41 ಎಸೆತದಲ್ಲಿ 72 ರನ್ ಚಚ್ಚಿದರು. ಇದು ಕ್ರಿಸ್ ಗೇಲ್ ಕೊನೆಯ ಏಕದಿನ ಪಂದ್ಯ ಎಂದೇ ಬಿಂಬಿತವಾಗಿದೆ. ಶೈ ಹೋಪ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಇನ್ನಿಂಗ್ಸ್ ಮುಂದುವರಿಸುತ್ತಿದ್ದಂತೆ ಮತ್ತೆ ಮಳೆ ಅಡ್ಡಿಯಾಗಿದೆ.

ಇದನ್ನೂ ಓದಿ: INDvWI 3ನೇ ಏಕದಿನ: ಮಹತ್ವದ ಪಂದ್ಯ ತಾತ್ಕಾಲಿಕ ಸ್ಥಗಿತ! 

ವೆಸ್ಟ್ ಇಂಡೀಸ್ 22 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿದೆ. ಈ ವೇಳೆ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ