Asianet Suvarna News Asianet Suvarna News

ಪ್ರೊ ಕಬಡ್ಡಿ 2018: ಪಾಟ್ನಾ ಪೈರೇಟ್ಸ್ ಮಣಿಸಿದ ತೆಲುಗು ಟೈಟಾನ್ಸ್!

ಪ್ರೊ ಕಬಡ್ಡಿ ಲೀಗ್ ಟೂರ್ನಿಯ 40ನೇ ಲೀಗ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತವರಿನಲ್ಲೇ ಸೋಲಿನ ಕಹಿ ಅನುಭವಿಸಿದೆ. ತೆಲುಗು ಟೈಟಾನ್ಸ್ ವಿರುದ್ಧ ಹೋರಾಟದಲ್ಲಿ ಪಾಟ್ನಾಗೆ ಹಿನ್ನಡೆಯಾಗಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

Pro Kabaddi 2018 Telugu Titans crush Patna Pirates 53-32
Author
Bengaluru, First Published Oct 30, 2018, 10:27 PM IST
  • Facebook
  • Twitter
  • Whatsapp

ಬಿಹಾರ(ಅ.30): ಪಾಟ್ನಾ ಪೈರೇಟ್ಸ್ ವಿರುದ್ಧದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 53-32 ಅಂಕಗಳ ಅಂತರದ ಗೆಲುವು ಸಾಧಿಸಿದೆ. 

 

 

ತೆಲುಗು ಟೈಟಾನ್ಸ್ ಮೊದಲ ಅಂಕ ಸಂಪಾದಿಸೋ ಮೂಲಕ ಖಾತೆ ಆರಂಭಿಸಿತು. ಆರಂಭಿಕ 3 ರೈಡ್ ವರೆಗೂ ಪಾಟ್ನಾ ಅಂಕ ಗಳಿಸುವಲ್ಲಿ ವಿಫಲವಾಯಿತು. ಆದರೆ ಪಂದ್ಯದ 6ನೇ ನಿಮಿಷದಲ್ಲಿ 6-5 ಮುನ್ನಡೆ ಸಾಧಿಸಿದ  ಪಾಟ್ನಾ 11ನೇ ನಿಮಿಷದಿಂದ ಹಿನ್ನಡೆ ಅನುಭವಿಸಿತು.

ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ಅದ್ಬುತ ಪ್ರದರ್ಶನದ ಮೂಲಕ 25-17 ಅಂಕಗಳಿಸೋ ಮೂಲಕ ಮುನ್ನಡೆ ಸಾಧಿಸಿತು. ಇನ್ನು ದ್ವಿತೀಯಾರ್ಧದಲ್ಲೂ ತೆಲುಗು ಟೈಟಾನ್ಸ್ ಮುನ್ನಡೆ ಕಾಯ್ದುಕೊಂಡಿತು.

ಮುನ್ನಡೆಗಾಗಿ ಕಠಿಣ ಹೋರಾಟ ನಡೆಸಿದ ಪಾಟ್ನಾ ಅಂಕಗಳಿಸುವಲ್ಲಿ ವಿಫಲವಾಯಿತು. ಪಂದ್ಯದ ಅಂತಿಮ ಹಂತದಲ್ಲಿ ತೆಲುಗು ಟೈಟಾನ್ಸ್ 53- 32 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.
 

Follow Us:
Download App:
  • android
  • ios