ಎಚ್ ಎಸ್ ಪ್ರಣಯ್ ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್!
ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಣಯ್ ಚಾಂಪಿಯನ್
ಬಿಡಬ್ಲ್ಯುಎಫ್ ವಿಶ್ವ ಟೂರ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ
ಮಲೇಷ್ಯಾ ಮಾಸ್ಟರ್ಸ್ ಇತಿಹಾಸದಲ್ಲೇ ಭಾರತಕ್ಕೆ ಪುರುಷರ ಸಿಂಗಲ್ಸ್ನಲ್ಲಿ ಮೊದಲ ಪ್ರಶಸ್ತಿ
ಕೌಲಾಲಂಪುರ(ಮೇ.29): ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಬಿಡಬ್ಲ್ಯುಎಫ್ ವಿಶ್ವ ಟೂರ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಅಲ್ಲದೇ ಮಲೇಷ್ಯಾ ಮಾಸ್ಟರ್ಸ್ ಇತಿಹಾಸದಲ್ಲೇ ಭಾರತಕ್ಕೆ ಪುರುಷರ ಸಿಂಗಲ್ಸ್ನಲ್ಲಿ ಮೊದಲ ಪ್ರಶಸ್ತಿ ತಂದುಕೊಟ್ಟರು.
ಕಳೆದ ವರ್ಷ ಐತಿಹಾಸಿಕ ಥಾಮಸ್ ಕಪ್ ಗೆದ್ದ ಭಾರತ ತಂಡದಲ್ಲಿದ್ದ 30 ವರ್ಷದ ಪ್ರಣಯ್ ಭಾನುವಾರ 94 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಚೀನಾದ ವೆಂಗ್ ಹೊಂಗ್ ಯಾಂಗ್ ವಿರುದ್ಧ 21-19, 13-21, 21-18 ಗೇಮ್ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 2017ರಲ್ಲಿ ಯುಎಸ್ ಓಪನ್ ಗ್ರ್ಯಾನ್‌ಪ್ರಿ ಚಿನ್ನ ಗೆದ್ದಿದ್ದ ಪ್ರಣಯ್ಗೆ ಇದು 6 ವರ್ಷಗಳಲ್ಲಿ ದೊರೆತ ಮೊದಲ ಪ್ರಶಸ್ತಿ.
4ನೇ ಪ್ರಶಸ್ತಿ: ಮಲೇಷ್ಯಾ ಮಾಸ್ಟರ್ಸ್ನಲ್ಲಿ ಭಾರತ 4ನೇ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಮೊದಲು ಮಹಿಳಾ ಸಿಂಗಲ್ಸ್ನಲ್ಲಿ 2013, 2016ರಲ್ಲಿ ಪಿ.ವಿ.ಸಿಂಧು, 2017ರಲ್ಲಿ ಸೈನಾ ನೆಹ್ವಾಲ್ ಚಾಂಪಿಯನ್ ಆಗಿದ್ದರು.
ಕಿರಿಯರ ಹಾಕಿ: 1-1 ಡ್ರಾಗೆ ತೃಪ್ತಿಪಟ್ಟ ಭಾರತ-ಪಾಕ್
ಸಲಾಲ್ಹ(ಒಮಾನ್): ತಲಾ 2 ಬಾರಿ ಚಾಂಪಿಯನ್ ಆಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಶನಿವಾರದ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿ ‘ಎ’ ಗುಂಪಿನ ಪಂದ್ಯ 1-1 ಗೋಲಿನೊಂದಿಗೆ ಡ್ರಾಗೊಂಡಿದೆ. ಇದರೊಂದಿಗೆ ಉಭಯ ತಂಡಗಳು ಸದ್ಯ 3 ಪಂದ್ಯಗಳಲ್ಲಿ ತಲಾ 7 ಅಂಕ ಹೊಂದಿದ್ದರೂ ಪಾಕಿಸ್ತಾನ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಭಾರತ 2ನೇ ಸ್ಥಾನದಲ್ಲಿದೆ.
French Open: 2ನೇ ಸುತ್ತಿಗೆ ಸಬಲೆಂಕಾ, ಸಿಟ್ಸಿಪಾಸ್ ಲಗ್ಗೆ
ಶನಿವಾರದ ರೋಚಕ ಪಂದ್ಯದಲ್ಲಿ ಭಾರತ 24ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಶಾರ್ದಾನಂದ್ ತಿವಾರಿ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ಒದಗಿಸಿದರೂ, 44ನೇ ನಿಮಿಷದಲ್ಲಿ ಬಶರತ್ ಅಲಿ ಬಾರಿಸಿದ ಗೋಲು ಭಾರತದ ಗೆಲುವನ್ನು ಕಸಿಯಿತು.
ಖೇಲೋ ಗೇಮ್ಸ್: ಜೈನ್ ವಿವಿಯ ಶಿವಗೆ 5 ಚಿನ್ನ!
ಲಖನೌ: ಖೇಲೋ ಇಂಡಿಯಾ ವಿವಿ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಜೈನ್ ವಿವಿ ಪ್ರಾಬಲ್ಯ ಮುಂದುವರಿಸಿದ್ದು, ವಿವಿಯ ಶಿವ ಶ್ರೀಧರ್ ನೂತನ ಕೂಟ ದಾಖಲೆ ಜೊತೆಗೆ 5 ಚಿನ್ನ ಸೇರಿ 7 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರಿಗೆ ತೀವ್ರ ಪೈಪೋಟಿ ನೀಡುತ್ತಿರುವ ಬೆಂಗಳೂರಿನ ಕ್ರೈಸ್ಟ್ ವಿವಿಯ ಅನೀಶ್ ಗೌಡ ಕೂಡಾ ಒಟ್ಟು 7 ಪದಕಗಳನ್ನು ಗೆದ್ದಿದ್ದಾರೆ.
ಭಾನುವಾರ ಪುರುಷರ 400 ಮೀ. ಮೆಡ್ಲೆ ವಿಭಾಗದಲ್ಲಿ 4 ನಿಮಿಷ 37.21 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದ ಶಿವ, ಕಳೆದ ಆವೃತ್ತಿಯ ತಮ್ಮದೇ ದಾಖಲೆ(4.38.39 ನಿ.)ಯನ್ನು ಉತ್ತಮಗೊಳಿಸಿದರು. ಅನೀಶ್(4:41.02 ನಿ.) ಬೆಳ್ಳಿ ಪಡೆದರು. ಒಟ್ಟಾರೆ ಜೈನ್ ವಿವಿ ಈಜಿನಲ್ಲಿ 8 ಚಿನ್ನ ಸೇರಿ 17 ಪದಕ ಬಾಚಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಕ್ರೈಸ್ಟ್ ವಿವಿ 4 ಚಿನ್ನ ಸೇರಿ 8 ಪದಕ ತನ್ನದಾಗಿಸಿಕೊಂಡಿದ್ದು, ಮಹಿಳಾ ವಿಭಾಗದ ಈಜಿನಲ್ಲಿ ಬೆಂಗಳೂರು ವಿವಿಯ ಪ್ರೀತಾ ವಿ. 3 ಚಿನ್ನ ಪಡೆದಿದ್ದಾರೆ.