ಇಂದಿನಿಂದ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿ; ಎಚ್.ಎಸ್.ಪ್ರಣಯ್ ಮೇಲೆ ಕಣ್ಣು
ಇಂದಿನಿಂದ ತೈಪೆ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭ
ಕಳೆದ ತಿಂಗಳು ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಆಗಿದ್ದ ಪ್ರಣಯ್
ಪ್ರಣಯ್ ಮತ್ತೊಂದು ಪ್ರಶಸ್ತಿ ಗೆಲ್ಲುವ ನಿರೀಕ್ಷೆ
ತೈಪೆ(ಜೂ.20): ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರದಿಂದ ಆರಂಭವಾಗಲಿದ್ದು, ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಭಾರತವನ್ನು ಸವಾಲನ್ನು ಮುನ್ನಡೆಸಲಿದ್ದಾರೆ. ಕಳೆದ ತಿಂಗಳು ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಆಗಿದ್ದ ಪ್ರಣಯ್ ಮತ್ತೊಂದು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಅವರ ಜೊತೆ ಪುರುಷರ ಸಿಂಗಲ್ಸ್ನಲ್ಲಿ ಕಿರಣ್ ಜಾರ್ಜ್, ರಾಷ್ಟ್ರೀಯ ಚಾಂಪಿಯನ್ ಮಿಥುನ್ ಮಂಜುನಾಥ್, ಪಾರುಪಳ್ಳಿ ಕಶ್ಯಪ್ ಕಣಕ್ಕಿಳಿಯಲಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ತಾನ್ಯಾ ಹೇಮಂತ್, ಮಾಳವಿಕಾ ಬನ್ಸೋದ್, ಆಕರ್ಷಿ ಕಶ್ಯಪ್ ಆಡಲಿದ್ದಾರೆ. ಆದರೆ ಭಾನುವಾರ ಇಂಡೋನೇಷ್ಯಾ ಓಪನ್ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಪುರುಷ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.
ಏಷ್ಯಾಡ್ಗೆ ರಾಜ್ಯದ ಯಶಸ್, ಕಾವೇರಮ್ಮ!
ಭುವನೇಶ್ವರ: ಕರ್ನಾಟಕದ ತಾರಾ ಅಥ್ಲೀಟ್ಗಳಾದ ಯಶಸ್ ಹಾಗೈ ಸಿಂಚಲ್ ಕಾವೇರಮ್ಮ ಆಗಸ್ಟ್ನಲ್ಲಿ ಹಂಗೇರಿಯ ಬೂಡಾಪೆಸ್ಟ್ನಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದಿದ್ದಾರೆ. ಸೋಮವಾರ ಇಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಕೂಟದದಲ್ಲಿ ಪುರುಷರ ವಿಭಾಗದ 400 ಮೀ. ಹರ್ಡಲ್ಸ್ನಲ್ಲಿ ಯಶಸ್ 49.37 ಸೆಕಂಡ್ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದರು. ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಲು 49.75 ಸೆಕೆಂಡ್ಗಳಲ್ಲಿ ಕ್ರಮಿಸಬೇಕಿತ್ತು. ಇನ್ನು, ಇದೇ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಸಿಂಚಲ್ 56.76 ಸೆಕೆಂಡ್ಗಳಲ್ಲಿ ಕ್ರಮಿಸಿ ಬೆಳ್ಳಿ ಜಯಿಸುವುದರ ಜೊತೆಗೆ, ಏಷ್ಯಾಡ್ ಅರ್ಹತಾ ಮಟ್ಟ(57.48 ಸೆಕೆಂಡ್)ವನ್ನು ತಲುಪಿದರು.
ಫುಟ್ಬಾಲ್ ವೃತ್ತಿ ಬದುಕಿನ ಕೊನೆ ಹಂತದಲ್ಲಿದ್ದೇನೆ: ಲಿಯೋನೆಲ್ ಮೆಸ್ಸಿ ನಿವೃತ್ತಿ ಸುಳಿವು
ಇನ್ನು, ಪುರುಷರ 200 ಮೀ. ಓಟದ ಸ್ಪರ್ಧೆಯಲ್ಲಿ ರಾಜ್ಯದ ಶಶಿಕಾಂತ್ ವೀರೂಪಾಕ್ಷ 21.08 ಸೆಕೆಂಡ್ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ ಎತ್ತರ ಜಿಗಿತದಲ್ಲಿ ಅಭಿನಯ ಶೆಟ್ಟಿ1.76 ಮೀ. ಎತ್ತರಕ್ಕೆ ನೆಗೆದು ಕಂಚಿಗೆ ಕೊರಳೊಡ್ಡಿದರು. ಆದರೆ ಪುರುಷರ ಜಾವೆಲಿನ್ ಎಸೆತದಲ್ಲಿ ಕರ್ನಾಟಕದ ಡಿ.ಪಿ.ಮನು(76.85 ಮೀ.) 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಅನ್ನು, ಶೈಲಿಗೂ ಏಷ್ಯಾಡ್ ಅರ್ಹತೆ
ಇದೇ ವೇಳೆ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಉತ್ತರ ಪ್ರದೇಶದ ಅನ್ನು ರಾಣಿ, ಹ್ಯಾಮರ್ ಎಸೆತದಲ್ಲಿ ಉತ್ತರ ಪ್ರದೇಶದ ರಚನಾ ಹಾಗೂ ತಾನ್ಯಾ ಚೌಧರಿ, ಲಾಂಗ್ಜಂಪ್ನಲ್ಲಿ ಕೇರಳ ಆ್ಯನ್ಸಿ ಹಾಗೂ ಯುಪಿಯ ಶೈಲಿ ಸಿಂಗ್ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡರು.
ಜು.13ರಿಂದ ಅಲ್ಟಿಮೇಟ್ ಟೇಬಲ್ ಟೆನಿಸ್ ಲೀಗ್
ಮುಂಬೈ: 4ನೇ ಆವೃತ್ತಿಯ ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿ ಜುಲೈ 13ರಂದು ಪುಣೆಯಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಲಯನ್ಸ್ ಹಾಗೂ ಪುಣೇರಿ ಪಲ್ಟನ್ ಮುಖಾಮುಖಿಯಾಗಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಟೂರ್ನಿಯಲ್ಲಿ ಬೆಂಗಳೂರು ಸ್ಮಾ್ಯಷರ್ಸ್, ದಬಾಂಗ್ ಡೆಲ್ಲಿ ಟಿಟಿಸಿ, ಗೋವಾ ಚಾಲೆಂಜರ್ಸ್ ಹಾಗೂ ಯು ಮುಂಬಾ ಟಿಟಿ ತಂಡಗಳೂ ಪಾಲ್ಗೊಳ್ಳಲಿವೆ. ಫೈನಲ್ ಸೇರಿ ಟೂರ್ನಿಯಲ್ಲಿ 18 ಪಂದ್ಯಗಳು ನಡೆಯಲಿದ್ದು, ಜುಲೈ 30ರಂದು ಫೈನಲ್ ನಡೆಯಲಿದೆ. ಬೆಂಗಳೂರು ತಂಡ ಜು.14ರಂದು ಮುಂಬಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.