‘ಆಸ್ಟ್ರೇಲಿಯಾ ಪುಟಿದೇಳಬೇಕಿದೆ. ಕೋಲ್ಕತಾ ಪಂದ್ಯ ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದೆ’ ಎಂದು ಕ್ಲಾಕ್ ಹೇಳಿದ್ದಾರೆ.
ಕೋಲ್ಕತಾ(ಸೆ.19): ನಾಯಕ ಸ್ಟೀವನ್ ಸ್ಮಿತ್'ಗೆ ದೊಡ್ಡ ಸವಾಲು ಎದುರಾಗಿದ್ದು, ಭಾರತ ವಿರುದ್ಧ ಸರಣಿಯಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
‘ಬ್ಯಾಟಿಂಗ್ ವಿಚಾರದಲ್ಲಿ ಸ್ಮಿತ್ ಸಾಮರ್ಥ್ಯವನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ನಾಯಕನಾಗಿ ಅವರು ಮುಂದುವರಿಯಬೇಕಿದ್ದರೆ, ತಂಡ ಗೆಲುವಿನ ಹಳಿಗೆ ಮರಳಬೇಕು. ಬಾಂಗ್ಲಾದೇಶದಲ್ಲಿ ಟೆಸ್ಟ್ ಸರಣಿ ಸಮಗೊಂಡಿದ್ದು ಸಹ ಅವರಿಗೆ ಹಿನ್ನಡೆ ಉಂಟು ಮಾಡಿದೆ’ ಎಂದು ಕ್ಲಾರ್ಕ್ ಹೇಳಿದ್ದಾರೆ.
‘ಆಸ್ಟ್ರೇಲಿಯಾ ಪುಟಿದೇಳಬೇಕಿದೆ. ಕೋಲ್ಕತಾ ಪಂದ್ಯ ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದೆ’ ಎಂದು ಕ್ಲಾಕ್ ಹೇಳಿದ್ದಾರೆ.