ನವದೆಹಲಿ(ಡಿ.05): ಕ್ರಿಕೆಟ್ ಜಗತ್ತು ಕಂಡ ಸ್ಪೋಟಕ ಆರಂಭಿಕ ಆಟಗಾರರಲ್ಲಿ ಒಬ್ಬರು ಎನಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ ಭಾರತ ತಂಡದ ಅಪಾಯಕಾರಿ ಆಟಗಾರರು ಯಾರು ಎನ್ನುವುದನ್ನು ದ ಕ್ವಿಂಟ್ ಇವೆಂಟ್'ನಲ್ಲಿ ಹೊರಗೆಡವಿದ್ದಾರೆ.

ನನ್ನ ಪ್ರಕಾರ ಭಾರತ ತಂಡದ ಡೇಂಜರಸ್ ಬೌಲರ್ ಎಂದರೆ ಅದು ಅದು ಅನಿಲ್ ಕುಂಬ್ಳೆ. ಎದುರಾಳಿ ಬ್ಯಾಟ್ಸ್'ಮನ್'ನ ದೌರ್ಬಲ್ಯ ಅರಿತು ಬೌಲಿಂಗ್ ಮಾಡುವ ಚಾಣಾಕ್ಷ ಕ್ರಿಕೆಟಿಗ ಕುಂಬ್ಳೆ ಎಂದು ಜಯಸೂರ್ಯ ಹೇಳಿದ್ದಾರೆ.

ಅದೇರೀತಿ ಬ್ಯಾಟಿಂಗ್'ನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಯಾವಾಗಲೂ ತುಂಬಾ ಅಪಾಯಕಾರಿ ಆಟಗಾರರಾಗಿದ್ದರು ಎಂದಿದ್ದಾರೆ. ಸಚಿನ್ ಎಂತಹ ಒತ್ತಡದ ಪರಿಸ್ಥಿತಿಯೇ ಇದ್ದರೂ ಅದನ್ನು ಸಾವಧಾನವಾಗಿ ಎದುರಿಸುತ್ತಿದ್ದರು. ಸಚಿನ್ ನಿಜಕ್ಕೂ ಅದ್ಭುತ ಆಟಗಾರ ಎಂದು ಲಂಕಾ ಮಾಜಿನಾಯಕ ಜಯಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ವಿರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಟೀಂ ಇಂಡಿಯಾದಲ್ಲಿ ಆಕರ್ಷಕ ಬ್ಯಾಟಿಂಗ್ ಶೈಲಿ ಹೊಂದಿದ ಆಟಗಾರರು ಎಂದು 47 ವರ್ಷದ ಜಯಸೂರ್ಯ ಹೇಳಿದ್ದಾರೆ.