ಲಾಕ್ಡೌನ್ ಅವಧಿಯಲ್ಲಿ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರು ಸಂಚಾರಕ್ಕೆ ಪಡುವ ಬವಣೆ ಕಂಡು ಮಂಗಳೂರು ಯುವಕನೊಬ್ಬ ಸ್ವಯಂ ಆಗಿ ಉಚಿತ ವಾಹನ ವ್ಯವಸ್ಥೆ ರೂಪಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಇಲ್ಲಿವೆ ಫೋಟೋಸ್
Karnataka Districts Jul 22, 2020, 1:26 PM IST
ಕೊರೊನಾ ಸೋಂಕು ತಡೆಗಾಗಿ ವಿಧಿಸಲಾಗಿದ್ದ ಲಾಕ್ಡೌನ್ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮುಕ್ತಾಯಗೊಂಡಿದ್ದು ಇಂದಿನಿಂದ ಅನ್ಲಾಕ್ ಆಗಿದೆ. ಹೇಗಿದೆ ಅಲ್ಲಿಯ ಚಿತ್ರಣ ಇಲ್ಲಿದೆ ನೋಡಿ..!
state Jul 22, 2020, 12:07 PM IST
ಬಾಗಲಕೋಟೆಯಲ್ಲಿ ಲಾಕ್ಡೌನ್ ಫ್ರೀ ಇಲ್ಲ! ಬೆಳಿಗ್ಗೆ 9 ರಿಂದ 2 ಗಂಟೆಯವರೆಗೆ ಮಾತ್ರ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 2 ರಿಂದ ಲಾಕ್ ಆಗುತ್ತದೆ. ಸೋಂಕು ಹೆಚ್ಚಳದ ಹಿನ್ನಲೆಯಲ್ಲಿ ಲಾಕ್ಡೌನ್ ಮಾಡಬೇಕೆಂದು ಸ್ಥಳೀಯರು, ವ್ಯಾಪಾರಸ್ಥರು ಒತ್ತಾಯ ಹೇರಿದ್ದರು.
state Jul 22, 2020, 11:26 AM IST
ಕಲಬುರ್ಗಿಯಲ್ಲಿ ಜಿಲ್ಲಾಡಳಿತ ಒಂದು ವಾರ ಲಾಕ್ಡೌನ್ಗೆ ಆದೇಶ ನೀಡಿತ್ತು. ಆದರೆ ಸಿಎಂ ಯಡಿಯೂರಪ್ಪ , ಲಾಕ್ಡೌನ್ ಎಲ್ಲದಕ್ಕೂ ಪರಿಹಾರ ಅಲ್ಲ. ಇನ್ಮುಂದೆ ಲಾಕ್ಡೌನ್ ಮಾಡುವುದಿಲ್ಲ ಸ್ಪಷ್ಟವಾಗಿ ಹೇಳಿದ್ದಾರೆ. ಅದೇ ರೀತಿ ಕಲ್ಬುರ್ಗಿ ಡಿಸಿ ಲಾಕ್ಡೌನ್ ಆದೇಶವನ್ನು ರದ್ದುಗೊಳಿಸಿ ಸಂಚಾರ, ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಷರತ್ತು ವಿಧಿಸಿ ಲಾಕ್ಡೌನ್ ಆದೇಶವನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!
state Jul 22, 2020, 11:03 AM IST
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಒಂದು ವಾರಗಳ ಕಾಲ ಲಾಕ್ಡೌನ್ ಮಾಡಲಾಗಿತ್ತು. ಇಂದು ಬೆಳಿಗ್ಗೆ 5 ಗಂಟೆಗೆ ಲಾಕ್ಡೌನ್ ಮುಕ್ತಾಯಗೊಂಡಿದ್ದು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿದಿವೆ. ಪ್ರಯಾಣಿಕರು ಕೂಡಾ ಬಸ್ ಸ್ಟಾಂಡ್ಗಳಿಗೆ ಆಗಮಿಸಿ, ತಮ್ಮ ತಮ್ಮ ಊರುಗಳಿಗೆ ಹೋಗುವ ಧಾವಂತದಲ್ಲಿದ್ದಾರೆ. ಜನಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳುತ್ತಿದೆ. ವಾಹನಗಳು ರಸ್ತೆಗಿಳಿದಿವೆ. ಬೆಂಗಳೂರಿನ ಎಲ್ಲೆಲ್ಲಿ ಹೇಗೆಗಿದೆ ಚಿತ್ರಣ ಇಲ್ಲಿದೆ ನೋಡಿ..!
state Jul 22, 2020, 10:46 AM IST
ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಾಲಯಗಳು ಬಂದ್ ಮಾಡಲಾಗಿತ್ತು. 100 ದಿನಗಳ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇವಾಲಯಗಳನ್ನು ಓಪನ್ ಮಾಡಲು ಅವಕಾಶ ನೀಡಲಾಗಿತ್ತು. ದೇವಾಲಯಗಳನ್ನು ಶುಚಿಗೊಳಿಸಿ ಬಾಗಿಲು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ.
Karnataka Districts Jul 22, 2020, 10:33 AM IST
ಕೊರೋನಾ ಮುಕ್ತವಾಗಿದ್ದ ಬ್ಯಾಡಗಿ ತಾಲೂಕಿನಲ್ಲಿ ಸೋಂಕಿತರು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಜು. 22ರ ಬುಧವಾರದಿಂದ ಮಧ್ಯಾಹ್ನ 3ರ ಬಳಿಕ ತಾಲೂಕಿನಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಲಾಕ್ಡೌನ್ಗೆ ಸಹಕರಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದ್ದಾರೆ.
Karnataka Districts Jul 22, 2020, 8:56 AM IST
ಜಿಲ್ಲೆಯ ಗಂಗಾವತಿ ನಗರ ಹಾಗೂ 9 ಹಳ್ಳಿಗಳಲ್ಲಿ ಮಂಗಳವಾರ ರಾತ್ರಿಯಿಂದ ಜಾರಿಯಾಗಬೇಕಾಗಿದ್ದ ಲಾಕ್ಡೌನ್ ಜಾರಿಗೂ ಮುನ್ನವೇ ರದ್ದು ಮಾಡಲಾಗಿದೆ.
Karnataka Districts Jul 22, 2020, 8:46 AM IST
ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಹಾಗೆಯೇ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಧ್ಯಾಹ್ನದ ನಂತರ ಲಾಕ್ಡೌನ್ ಮಾಡುತ್ತಿದ್ದರೂ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೂ ಬಂದಿಲ್ಲ. ಹೀಗಾಗಿ ಮುಂದಿನ ತೀರ್ಮಾನದವರೆಗೂ ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ.
Karnataka Districts Jul 22, 2020, 8:36 AM IST
ಕಳೆದ ಒಂದು ವಾರದಿಂದ ನಗರದಲ್ಲಿ ಜಾರಿಯಲ್ಲಿದ್ದ ಲಾಕ್ಡೌನ್ನಿಂದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿಷೇಧ ತೆರವಾಗಿರುವ ಹಿನ್ನೆಲೆಯಲ್ಲಿ ಲಾಲ್ಬಾಗ್ ಮತ್ತು ಕಬ್ಬನ್ ಉದ್ಯಾನವನಗಳಲ್ಲಿ ಬುಧವಾರದಿಂದ ಸಾರ್ವಜನಿಕರ ವಾಯು ವಿಹಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
state Jul 22, 2020, 8:13 AM IST
ರಾಜಧಾನಿಯಲ್ಲಿ ಲಾಕ್ಡೌನ್ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಬಿಎಂಟಿಸಿಯು ಇಂದಿನಿಂದ(ಬುಧವಾರ) ಬಸ್ ಸೇವೆ ಪುನರಾರಂಭಿಸುವುದಾಗಿ ತಿಳಿಸಿದೆ.
state Jul 22, 2020, 7:35 AM IST
ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗೂಡದಂತೆ ಪೊಲೀಸರು ಹದ್ದಿನಗಣ್ಣು ಇಡಲಿದ್ದಾರೆ, ಸಿಟಿ ಮಾರ್ಕೆಟ್ ಸೇರಿದಂತೆ ಹಲವು ಮಾರ್ಕೆಟ್ಗಳು ಬಂದ್ ಆಗಲಿವೆ. ಬೆಂಗಳೂರಲ್ಲಿ ಕಠಿಣ ರೂಲ್ಸ್ ಹೇಗೆಲ್ಲಾ ಇರಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
state Jul 21, 2020, 5:18 PM IST
ರಾಮ ಮಂದಿರ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದ ನಂತರ ಇದೀಗ ಅಂತಿಮ ರೂಪ ನೀಡಲಾಗಿದೆ. ಇತ್ತ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮತ್ತೆ ಲಾಕ್ಡೌನ್ ವಿಸ್ತರಣೆ ಸಾಧ್ಯತೆಗಳಿಲ್ಲ. ಆದರೆ ಬೆಂಗಳೂರಿನಿಂದಲೇ ಗ್ರಾಮೀಣ ಭಾಗಕ್ಕೆ ಕೊರೋನಾ ಹರಡುತ್ತಿದೆ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಫ್ರಾನ್ಸ್ನಿಂದ ಹಾರಾಟ ಆರಂಭಿಸಿರುವ 5 ರಾಫೆಲ್ ಯುದ್ಧ ವಿಮಾನ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್ ಆಗಲಿದೆ. ಕಂಗನಾ ಕುರಿತು ನಿರ್ದೇಶಕರ ಮಾತು, ಹೊಸ ರೂಪದಲ್ಲಿ ಹಳೇ ಲೂನಾ ಸ್ಕೂಟರ್ ಸೇರಿದಂತೆ ಜುಲೈ 21ರ ಟಾಪ್ 10 ಸುದ್ದಿ ಇಲ್ಲಿವೆ.
News Jul 21, 2020, 4:47 PM IST
ಬೆಂಗಳೂರು ಲಾಕ್ಡೌನ್ ಬಲು ಕಠೀಣವಾಗಿಯೇ ಇದೆ. ಸುಖಾಸುಮ್ಮನೆ ಓಡಾಡುತ್ತಿದ್ದವರಿಗೆ ಜಿಗಣಿ ಪೊಲೀಸರು ಲಾಠಿ ಏಟಿನ ರುಚಿ ತೋರಿಸುತ್ತಿದ್ದಾರೆ. ರಾತ್ರಿ ವೇಳೆಯೂ ಗಸ್ತು ತಿರುಗುತ್ತಿದ್ದಾರೆ.
state Jul 21, 2020, 3:49 PM IST
ಜಿಮ್ ಹಾಗೂ ಸ್ವಿಮ್ಮಿಂಗ್ ಫೂಲ್ ಆರಂಭವಾಗುತ್ತೆ ಎಂದು ಆಸೆಗಣ್ಣಿನಿಂದ ಕಾಯುತ್ತಿರುವವರಿಗೆ ಸರ್ಕಾರ ಮತ್ತೆ ತಣ್ಣೀರೆರಚಿದೆ. ಬಿಬಿಎಂಪಿ ಪಾರ್ಕ್ನಲ್ಲಿ ಓಡಾಡುವವರಿಗೆ ನಿಯಮಾವಳಿಗಳನ್ನು ರೂಪಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
state Jul 21, 2020, 2:59 PM IST