ತುಪ್ಪದ ಬೆಡಗಿ ರಾಗಿಣಿಗೆ 35 ವರ್ಷವಾಗಿದ್ದು, ಗುಡ್ನ್ಯೂಸ್ ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕೊನೆಗೂ ಈ ಬಗ್ಗೆ ನಟಿ ಹೇಳಿದ್ದೇನು? ಯಾವಾಗ ಗುಡ್ನ್ಯೂಸ್?
ವಯಸ್ಸು 35 ಆದರೂ ಇನ್ನೂ ಮದುವೆಯಾಗದ ತುಪ್ಪದ ಬೆಡಗಿ, ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಅವರು ಯಾವಾಗ ಗುಡ್ನ್ಯೂಸ್ ಕೊಡ್ತಾರೆ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಸದ್ಯ ಸಿನಿಮಾಗಿಂತಲೂ ಹೆಚ್ಚಾಗಿ ಇವರು ಹಾಟ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಲೇ ಫೇಮಸ್ ಆಗ್ತಿದ್ದಾರೆ. ತುಪ್ಪ ಬೇಕಾ ತುಪ್ಪ ಅನ್ನೋ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಸ್ಯಾಂಡಲ್ವುಡ್ ಚೆಲುವೆ ಈಕೆ. ರಾಗಿಣಿ ಅಂದ್ರೆ ಸಾಕು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ. ಏಕಾಏಕಿ ದಪ್ಪ ಆಗಿ ಸ್ವಲ್ಪ ಸಮಯ ಸಿನಿಮಾಗಳಿಂದ ದೂರ ಉಳಿದು ಸಮಾಜ ಸೇವೆ ಮಾಡಿಕೊಂಡು ಇದ್ದ ನಟಿ, ಪುನಃ ತೂಕ ಇಳಿಸಿಕೊಂಡು ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ. ಹಾಟ್ ಫೋಟೋಶೂಟ್ ಮಾಡಿಕೊಂಡು ಮತ್ತೆ ಯುವ ಹೃದಯಗಳಲ್ಲಿ ಕಚಗುಳಿ ಇಡುತ್ತಿದ್ದಾರೆ. ಇದರ ಜೊತೆಗೆ ಯೋಗ, ಧ್ಯಾನದಲ್ಲಿಯೂ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿಯೂ ಗುರುತಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎನ್ನಲಾಗಿದೆ.
ಇದೀಗ ನಟಿಗೆ ಮತ್ತೆ ಮದುವೆಯ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ರಾಗಿಣಿ, ಗುಡ್ನ್ಯೂಸಾ ಅದೇನು ಎಂದು ಕೇಳಿದ್ದಾರೆ. ಕೊನೆಗೆ ಮದುವೆ ಎಂದಾಕ್ಷಣ ರಾಗಿಣಿ, ನಾನು ತುಂಬಾ ಚೆನ್ನಾಗಿದ್ದೀನಿ, ಸಿಂಗಲ್ ಆಗಿದ್ದೀನಿ. ನಾನು ಒಬ್ಬಳೇ ಸಿಂಗಲ್ ಹ್ಯಾಪ್ಪಿ ಪರ್ಸನ್ ಎಂದು ಅನ್ನಿಸ್ತಿದೆ. ನನ್ನನ್ನು ಸಿಂಗಲ್ ಆಗಿರಲು ಬಿಡಿ, ನನ್ನನ್ನು ಖುಷಿಯಾಗಿಡಲು ಬಿಡಿ ಎಂದಿದ್ದಾರೆ. ಅದು ಯಾವಾಗ ಆಗಬೇಕೋ ಆವಾಗ ಆಗುತ್ತದೆ ಎನ್ನುವುದು ನಟಿಯ ಮಾತು. ಈ ಹಿಂದೆ ಕೂಡ ರಾಗಿಣಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಸಮಾಜಕ್ಕೆ, ಬಡವರಿಗೆ ಆದಷ್ಟು ಸಹಾಯ ಮಾಡಬೇಕು ಅನ್ನೋ ಮನಸ್ಥಿತಿ ಇರೋ ನಟಿಗೆ ಮದುವೆಯಾಗುವ ಆಸೆ ಇದ್ಯಾ? ಇವರ ಮದ್ವೆ ಯಾವಾಗ? ಈ ಬಗ್ಗೆ ಪ್ರತಿಬಾರಿಯೂ ಪ್ರಶ್ನೆಗಳ ಸುರಿಮಳೆಯೇ ಆಗ್ತಿದ್ದು ಅದಕ್ಕೆ ಉತ್ತರಿಸಿದ್ದರು.
ನಿಮ್ಮ ವಯಸ್ಸಿನವರು ಅಥವಾ ಸ್ನೇಹಿತರು ಮದುವೆಯಾಗಿ, ಮಕ್ಕಳು ಮಾಡಿಕೊಂಡು ಸೆಟ್ಲ್ ಆದಾಗ ನಿಮಗೂ ಹಾಗೆಯೇ ಅನ್ನಿಸುತ್ತಾ ಎಂದು ಪ್ರಶ್ನಿಸಿದಾಗ ರಾಗಿಣಿ ಅವರು, ಅದು ನನಗೆ ತುಂಬಾ ಖುಷಿ ಕೊಡುತ್ತದೆ. ಮದುವೆಯಾಗುವುದು, ಮಕ್ಕಳು ಮಾಡಿಕೊಳ್ಳುವುದು ಖುಷಿಯ ವಿಚಾರ. ನನಗೂ ಮದುವೆ ಎಂದರೆ ಇಷ್ಟನೇ. ಹಾಗೆಂದು ಅವರು ಮದ್ವೆಯಾಗ್ತಿದ್ದಾರೆ, ಇವರು ಆಗ್ತಿದ್ದಾರೆ ಎಂದು ನಾವು ಆಗಬಾರದು. ಅದು ನ್ಯಾಚುರಲ್ ಆಗಿ ಆಗಬೇಕು. ಬೇರೆಯವರು ಫೋರ್ಸ್ ಮಾಡ್ತಾ ಇದ್ದಾರೆ ಎಂದು ಆದರೆ ಎಡವಟ್ಟು ಆಗುತ್ತದೆ ಎಂದಿದ್ದರು. ಯಾರ ಡೆಸ್ಟಿನಿ ಹೇಗೋ ಗೊತ್ತಿಲ್ಲ. ಮದುವೆಯಾಗಿ ಒಂದರೆಡು ವರ್ಷಗಳಲ್ಲಿ ಬ್ರೇಕಪ್, ಡಿವೋರ್ಸ್ ಆಗ್ತಿದೆ. ಕೆಲವು ಸಂದರ್ಭಗಳಲ್ಲಿ ಸಂಗಾತಿ ಬೆಸ್ಟ್ ಆಗಿದ್ದರೂ ಯಾರೋ ವರ್ಕ್ಔಟ್ ಆಗಲ್ಲ. ಆದ್ದರಿಂದ ಮದುವೆಗೆ ಗಡಿಬಿಡಿ ಮಾಡಬಾರದು ಅದು ಫ್ಲೋನಲ್ಲಿಯೇ ಆಗಬೇಕು ಎಂದಿದ್ದರು.
ಕೆಲ ದಿನಗಳ ಹಿಂದೆ ನಟಿ ಸ್ಲಿಟ್ ಡ್ರೆಸ್ ಹಾಕಿಕೊಂಡು ಕಾಲ ಮೇಲೆ ಕಾಲು ಹಾಕಿಕೊಂಡು ಫಂಕ್ಷನ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅವರ ಒಳಉಡುಪು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಪಾಪರಾಜಿಗಳು ಸುಮ್ಮನೇ ಇರ್ತಾರಾ? ಝೂಮ್ ಮಾಡಿ ತೋರಿಸಿದ್ದರು. ಆದರೆ ರಾಗಿಣಿಗೆ ಇದರ ಅರಿವೇ ಇರಲಿಲ್ಲ. ಇದ್ದರೂ ಏನೂ ಮಾಡುತ್ತಿರಲಿಲ್ಲ ಬಿಡಿ, ಇದೇನು ನಟಿಯರಿಗೆ ಹೊಸ ವಿಷಯವೇನಲ್ಲ. ಆದರೂ ಕೊನೆಗೆ ಗೊತ್ತಾಗಿ ರಾಗಿಣಿ ಡ್ರೆಸ್ ಅನ್ನು ಕೈಯಿಂದ ಸರಿ ಮಾಡಿಕೊಳ್ಳಲು ಒದ್ದಾಡಿದರು. ಇರೋದೇ ತುಂಡು ಡ್ರೆಸ್, ಇನ್ನೆಲ್ಲಿ ಸರಿ ಮಾಡಿಕೊಳ್ಳೋದು ಎಂದೆಲ್ಲಾ ಕಮೆಂಟ್ ಸುರಿಮಳೆಯಾಗಿತ್ತು.
