ಮೂರು ಚಿತ್ರಕತೆ ರೆಡಿ ಆಗುತ್ತಿದೆ

- ದಯಾಳ್‌ ಪದ್ಮನಾಭನ್‌, ನಿರ್ದೇಶಕ

ನಾನು ಮೂರು ಕತೆಗಳನ್ನು ಮಾಡಿಕೊಂಡಿದ್ದೇನೆ. ಈ ಪೈಕಿ ಎರಡು ಕತೆಗಳಿಗೆ ಈಗಾಗಲೇ ಚಿತ್ರಕಥೆಯನ್ನೂ ಬರೆದು ಮುಗಿಸಿದ್ದೇನೆ. ಮತ್ತೊಂದು ಕತೆಗೆ ಚಿತ್ರಕಥೆ ಬರೆಯುವುದು ಒಂಚೂರು ಸವಾಲು ಅನಿಸುತ್ತಿದೆ. ಹೀಗಾಗಿ ಅದಕ್ಕೆ ಸಮಯ ಹಿಡಿಯುತ್ತಿದೆ.

1. ಮಹಿಳಾ ಪ್ರಧಾನ ಕತೆ. ಇದು ಅಮ್ಮ ಮತ್ತು ಮಗಳ ನಡುವಿನ ಸಂಬಂಧವನ್ನು ಹೇಳುವ ಸಿನಿಮಾ.

2. ಕ್ರೈಮ್‌ ಥ್ರಿಲ್ಲರ್‌ ಕತೆ. ಅಂದರೆ ಒಂದೇ ರಾತ್ರಿಯಲ್ಲಿ ಒಂದು ಪೊಲೀಸ್‌ ಸ್ಟೇಷನ್‌ನಲ್ಲಿ ನಡೆಯುವ ಸಿನಿಮಾ.

3. ಶಿವಕುಮಾರ್‌ ಮಾವಲಿ ಅವರ ನಾಟಕವನ್ನು ಆಧರಿಸಿದ ಕತೆ. ಅವರು ಈಗಾಗಲೇ ನಾಟಕ ಬರೆದಿದ್ದಾರೆ. ಅದರಲ್ಲಿ ಬರುವ ಒಂದು ಅಂಶವನ್ನು ಇಟ್ಟುಕೊಂಡು ಚಿತ್ರಕಥೆ ಮಾಡಬೇಕಿದೆ.

ಚಿತ್ರರಂಗ ಎಂದೂ ಮರೆಯದ ಮಾಣಿಕ್ಯ ಡಾ. ರಾಜ್; ಅವರಿಗಿದೋ ಫೋಟೋ ನಮನ!

ಕರಿಮಾಯಿ, ಕರ್ವಾಲೋ ಓದಿದೆ

- ಜಡೇಶ್‌ ಕುಮಾರ್‌ ಹಂಪಿ, ನಿರ್ದೇಶಕ

ನಾನು ಹಬ್ಬಕ್ಕೆ ಅಂತ ಊರಿಗೆ ಬಂದವನು, ಲಾಕ್‌ ಡೌನ್‌ ದಿನಗಳನ್ನು ಬಳ್ಳಾರಿನಲ್ಲಿ ಕಳೆಯುತ್ತಿದ್ದೇನೆ. ಈ ಬಿಡುವಿನ ವೇಳೆಯಲ್ಲಿ ಒಂದು ಕತೆ ಹೊಳೆದಿದೆ. ಆ ಕತೆಯ ಒಂದು ಸಾಲು ಈಗಾಗಲೇ ಒಬ್ಬ ನಟರಿಗೂ ಹೇಳಿದ್ದೇನೆ. ಅದನ್ನೇ ಚಿತ್ರಕತೆಯಾಗಿ ಮಾಡುತ್ತಿದ್ದೇನೆ.

ಈಗಾಗಲೇ ಫಸ್ಟ್‌ ಹಾಫ್‌ ಚಿತ್ರಕತೆ ಮುಗಿದಿದೆ, ಸೆಕೆಂಡ್‌ ಹಾಫ್‌ ಚಿತ್ರಕಥೆ ಮಾಡುತ್ತಿದ್ದೇನೆ. ಇದರ ಜತೆಗೆ ಕರಿಮಾಯಿ, ಕರ್ವಾಲೋ ಪುಸ್ತಕಗಳನ್ನು ಓದುತ್ತಿದ್ದೇನೆ. ಈ ಎರಡೂ ಪುಸ್ತಕಗಳು ನನಗೆ ಮತ್ತೊಂದು ಹೊಸ ಕತೆಯ ಹುಟ್ಟಿಗೆ ಕಾರಣವಾಗಿದೆ.

ಲಾಕ್‌ಡೌನ್‌ನಿಂದ ಸಿನಿಮಾ ತಾರೆಯರು ಮಿಸ್ ಮಾಡಿಕೊಂಡ ಸಂಗತಿಗಳು!

ಮೂರು ಕತೆಗಳಿವೆ

- ಮನ್ಸೋರೆ, ನಿರ್ದೇಶಕ

ಸದ್ಯಕ್ಕೆ ಮೂರು ಕತೆಗೆ ಜೀವ ತುಂಬುವುದಕ್ಕೆ ಲಾಕ್‌ಡೌನ್‌ ಬಿಡುವು ಅನುಕೂಲವಾಗಿದೆ. ಈ ಮೂರು ಕತೆಗಳ ಪೈಕಿ ಒಂದು ಲಾಕ್‌ಡೌನ್‌ಗಿಂತ ಮೊದಲೇ ಹೊಳೆದಿದ್ದರೆ,

ಮತ್ತೆರಡು ಕತೆಗಳು ಈಗ ಹುಟ್ಟಿಕೊಂಡವು.

1. ಸುಪಾರಿ ಕಿಲ್ಲರ್‌ಗಳ ಚರಿತ್ರೆ. ಇದೊಂದು ಚಾರಿತ್ರಿಕ ಕತೆ. ಕೊಲೆ, ಸುಪಾರಿಗೂ ಒಂದು ಚರಿತ್ರೆ ಇದೆ ಎಂಬುದನ್ನು ಹೇಳುವ ಸಿನಿಮಾ. ಗುಲ್ಬರ್ಗಾ ಸುತ್ತಮುತ್ತ ನಡೆದಿರುವ ಘಟನೆಗಳನ್ನು ಇಟ್ಟುಕೊಂಡು ಈ ಕತೆ ಮಾಡಿದ್ದೇನೆ. 90 ದಶಕದಲ್ಲಿ ಇದ್ದ ಕಿಲ್ಲರ್‌ ಫ್ಯಾಮಿಲಿಗಳ ಕತೆ ಇದು. ಎಲೆ ಅಡಿಕೆ ತೆಗೆದುಕೊಂಡರೆ ಅಲ್ಲಿಗೆ ಸಾವಿನ ಒಪ್ಪಂದ ಆದಂತೆ.

ಅಂಥದ್ದೊಂದು ಪದ್ದತಿ ಹೇಗೆ ಹುಟ್ಟಿಕೊಂಡಿತು, ಅದರ ಮುಂದುವರಿದ ಭಾಗ ಈಗ ಯಾವ ರೂಪದಲ್ಲಿದೆ ಎಂಬುದನ್ನು ಹೇಳುವ ಸಿನಿಮಾ ಇದು.

2. ಪೊಲಿಟಿಕಲ್‌ ಮಾಫಿಯಾ ಕತೆ. ಜನರ ಡಾಟಾ ಸಂಗ್ರಹ ಹಿಂದೆ ಏನೆಲ್ಲ ಕ್ರೈಮ್‌, ರಾಜಕೀಯ ಮಾಫಿಯಾ ನಡೆಯುತ್ತದೆ ಎಂಬುದನ್ನು ಹೇಳುವ ಸಿನಿಮಾ. ಒಂದು ಉಪ ಚುನಾವಣೆಯ ಹಿನ್ನೆಲೆಯಲ್ಲಿ ಇಡೀ ಕತೆಯನ್ನು ಬರೆದುಕೊಳ್ಳುತ್ತಿದ್ದೇನೆ. ರಾಜ್ಯ, ದೇಶಗಳ ನಡುವಿನ ಡಾಟಾ ವಾರ್‌ಅನ್ನು ತೋರಿಸುವ ಕತೆ ಇದು.

3. ರಾಜಧರ್ಮ ಹೆಸರಿನ ಸಿನಿಮಾ. ರಾಮಾಯಣವನ್ನು ಸಂಪೂರ್ಣವಾಗಿ ಈಗಿನ ಕಾಲಕ್ಕೆ ಪುನರ್‌ ರೂಪಿಸಿ ತೆರೆ ಮೇಲೆ ತರುವ ಸಿನಿಮಾ ಇದು.

ಈ ಬೇಸಿಗೆಯಲ್ಲಿ ಮೂವಿಗಳ ಮೂಲಕ ಮಾಡಿ ವರ್ಚುಯಲ್ ಟ್ರಾವೆಲ್

ಕತೆ ಬರೆಯಲು ಇದು ಒಳ್ಳೆಯ ಸಮಯ

ಟಿ ಕೆ ದಯಾನಂದ, ಕತೆಗಾರ

ಈಗ ಓಡಾಟ ಇಲ್ಲ. ಸಮಯ ನಮ್ಮ ಕೈಯಲ್ಲೇ ಇದೆ. ಮೂಲತಃ ನಾನು ಓದುಗ. ಓದಿದ್ದನ್ನು ಬರೆಯುವವನು ಕೂಡ. ಹೀಗಾಗಿ ಓದು ಮತ್ತು ಬರವಣಿಗೆಗೆ ಹೆಚ್ಚು ಸಮಯ ಸಿಕ್ಕಿದೆ. ಕ್ರೈಮ್‌, ತನಿಖಾ ಬರಹಗಳನ್ನು ಹೆಚ್ಚು ಓದುತ್ತಿದ್ದೇನೆ.

ಈ ಲಾಕ್‌ ಡೈನ್‌ ಬಿಡುವಿನಲ್ಲಿ ಒಟ್ಟು 7 ಕತೆಗಳು ಹೊಳೆದಿವೆ. ಎಲ್ಲವನ್ನೂ ಒಂದು ಸಾಲಿನಲ್ಲಿ ಬರೆದಿಟ್ಟುಕೊಂಡಿದ್ದೇನೆ. ಕ್ರೈಮ್‌, ಮಾಫಿಯಾ, ಅಂತಾರಾಷ್ಟ್ರೀಯ ರಾಜಕೀಯದ ನೆರಳು ಹಾಗೂ ಹ್ಯೂಮನ್‌ ಬೇಸ್‌ ಕತೆಗಳನ್ನು ಮಾಡಿಕೊಂಡಿದ್ದೇನೆ. ಇದರಲ್ಲಿ ಹೆಚ್ಚಾಗಿ ಕ್ರೈಮ್‌ ಥ್ರಿಲ್ಲರ್‌ ಕತೆಗಳು ಇವೆ. ಕತೆಗಳನ್ನು ಬ್ಯಾಂಕಿಂಗ್‌ ಮಾಡಿಕೊಳ್ಳುವುದಕ್ಕೆ ಒಳ್ಳೆಯ ಅವಕಾಶ ಇದು ಎನ್ನಬಹುದು. ಈ ಪೈಕಿ ಲಾಕ್‌ ಡೌನ್‌ ಮುಗಿಯುತ್ತಿದ್ದಂತೆಯೇ ಎರಡು ಕತೆಗಳು ಸಿನಿಮಾ ರೂಪ ಪಡೆದುಕೊಳ್ಳಬಹುದು.