Workplace Health: ಕಚೇರಿಯಲ್ಲಿ ಬಾಸ್‌ ಕೂಗಾಟ, ಕಿರಿಚಾಟ ಇದ್ದಿದ್ದೇ, ಆದ್ರೆ ದಾಖಲಾಗೋದಿಲ್ಲ

ಕಚೇರಿಯಲ್ಲಿ ಕಿರಿಚುವುದು, ಕೂಗಾಡುವುದು, ಬೈಗುಳ ಅತಿ ಸಾಮಾನ್ಯ. ಅದರಲ್ಲೂ ಮಾರ್ಕೆಟಿಂಗ್‌, ಸೇಲ್ಸ್‌ ವಿಭಾಗದಲ್ಲಿ ಇಂತಹ ಘಟನೆಗಳು ಹೆಚ್ಚು ಎನ್ನುವುದನ್ನು ಎಚ್‌ ಆರ್‌ ತಜ್ಞರೇ ಹೇಳುತ್ತಾರೆ. ಉನ್ನತ ಅಧಿಕಾರಿಗಳು ಬೇರೆ ಬೇರೆ ವಿಭಾಗದ ಟೀಮ್‌ ಲೀಡರ್‌ ಗಳಿಗೆ ಇಂತಹ ದೌರ್ಜನ್ಯವೆಸಗದಂತೆ ನಿರ್ದೇಶನ ನೀಡುವುದು ಅಗತ್ಯ.

Workplace shouting or screaming is common but not recorded sum

ಇತ್ತೀಚೆಗೆ HDFC Bank ಉದ್ಯೋಗಿಯೊಬ್ಬರು ವಿಡಿಯೋ ಕಾಲ್‌ ಮೂಲಕ ತಮ್ಮ ಜ್ಯೂನಿಯರ್‌ ಗೆ ಬೈಯ್ಯುತ್ತಿರುವುದು ವೈರಲ್‌ ಆಗಿತ್ತು. ಅಂದಿನಿಂದಲೂ ಉದ್ಯೋಗ ಸ್ಥಳದ ದೌರ್ಜನ್ಯದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಎಲ್ಲರಿಗೂ ಗೊತ್ತಿರುವಂತೆ, ಬಹಳಷ್ಟು ಜನರ ಒತ್ತಡದ ಮೂಲ ಕಚೇರಿ. ಕಚೇರಿಯ ಕೆಲಸ ಕಾರ್ಯಗಳ ಒತ್ತಡದೊಂದಿಗೆ ಅಲ್ಲಿನ ವಾತಾವರಣವೂ ಸಾಕಷ್ಟು ಜನರನ್ನು ಹೈರಾಣಾಗಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಪದೇ ಪದೆ ಎಲ್ಲದಕ್ಕೂ ರೇಗುವ, ಕೂಡಾಗುವ ಬಾಸ್‌ ಇದ್ದರೆ ಬದುಕು ಸಾಕೋ ಸಾಕು ಎನಿಸುವುದರಲ್ಲಿ ಡೌಟೇ ಇಲ್ಲ. ಕಚೇರಿಗಳಲ್ಲಿ ನಡೆಯುವ ಇಂತಹ ಕೆಟ್ಟ ಘಟನೆಗಳು ಸಾಕಷ್ಟಿದ್ದರೂ ಅವು ಹೆಚ್ಚಿನ ಪಕ್ಷ ಎಲ್ಲೂ ದಾಖಲಾಗುವುದಿಲ್ಲ. ಕಚೇರಿಗಳಲ್ಲಿ ನಡೆಯುವ ಕಿರುಕುಳದಿಂದ ಹಿಡಿದು, ದೌರ್ಜನ್ಯಗಳು ಸಹ ಎಲ್ಲೂ ದಾಖಲಾಗದೆ ಉಳಿದು ಹೋಗುತ್ತವೆ. ಈ ಹಿನ್ನೆಲೆಯಲ್ಲಿ, ವ್ಯವಸ್ಥೆ ಹೇಗಿದ್ದರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಆ ಉದ್ಯೋಗಿಯ ಖಾಸಗಿ ಹೊಣೆಯಾಗಿಬಿಟ್ಟಿದೆ. HR ತಜ್ಞರ ಪ್ರಕಾರ, ಕಚೇರಿಗಳಲ್ಲಿ ಕೂಗುವುದು, ಇನ್ನೊಬ್ಬರ ಮೇಲೆ ಕಿರಿಚಾಡುವುದು ಸಾಮಾನ್ಯ. ಅದರಲ್ಲೂ ಮಾರ್ಕೆಟಿಂಗ್‌ ನಂತಹ ಅತಿ ಒತ್ತಡದ ಕಾರ್ಯ ಕ್ಷೇತ್ರದಲ್ಲಿ ಕೂಗಾಡುವುದು ಅತಿ ಸಾಮಾನ್ಯ. 

HDFC ಘಟನೆ ಬಳಿಕ, ಉದ್ಯೋಗದ (Work) ಒತ್ತಡಕ್ಕೆ (Stress) ಸಂಬಂಧಿಸಿ ನಡೆದ ಹಲವು ಚರ್ಚೆಗಳು ಸಾಕಷ್ಟು ಮಹತ್ವಪೂರ್ಣವೆನಿಸಿವೆ. ಸೌಲಭ್ಯಗಳ ಕೊರತೆ, ಅಸಾಧ್ಯ ಎನಿಸುವಂತಹ ಟಾರ್ಗೆಟ್‌ (Target) ಗಳು ಮತ್ತು ಕೆಲವು ಸಂಸ್ಥೆಗಳ (Organization) ಒಟ್ಟಾರೆ ಕೆಲಸದ ವಾತಾವರಣ (Work Culture) ಎಲ್ಲವೂ ಉದ್ಯೋಗಿ (Employee) ಮನಸ್ಥಿತಿ ಮೇಲೆ ಭಾರೀ ಪರಿಣಾಮ ಬೀರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೇಲಿನ ಘಟನೆಯಲ್ಲಿ ಬ್ಯಾಂಕ್‌ ತನ್ನ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿದೆ. ಯಾವುದೇ ರೀತಿಯ ದೌರ್ಜನ್ಯಗಳನ್ನು (Harassment) ಸಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಆ ವಿಡಿಯೋ ಸಾಕಷ್ಟು ಜನರನ್ನು ಕಾಡಿರಬಹುದಾದರೂ, HR ತಜ್ಞರನ್ನು ಅಚ್ಚರಿಗೊಳಿಸಿಲ್ಲ. ಏಕೆಂದರೆ, ಅದು ಅವರಿಗೆ ಕಾಮನ್‌. ಹಲವು ಮಾನವ ಸಂಪನ್ಮೂಲ (Human Resource) ವಿಭಾಗದ ತಜ್ಞರು ಹೇಳುವ ಪ್ರಕಾರ, ಉದ್ಯೋಗದ ಸ್ಥಳದಲ್ಲಿ ಕೆಟ್ಟ ಘಟನೆಗಳಾಗುವುದು ಹೊಸದಲ್ಲ. ಕೇವಲ ಬ್ಯಾಂಕ್‌ ಗಳಲ್ಲಷ್ಟೇ ಅಲ್ಲ, ಎಲ್ಲ ರೀತಿಯ ಕಾರ್ಯಕ್ಷೇತ್ರದಲ್ಲೂ ಅವು ಇರುವಂಥವೇ. ಜನ, ಸ್ಥಳ, ಕಾರ್ಯದ ವಿಭಿನ್ನತೆಯ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ಕಂಡುಬರುತ್ತವೆ ಅಷ್ಟೆ. 

ಸಹೋದ್ಯೋಗಿಗಳ ಟಾರ್ಗೆಟ್‌ ಹಿಂಸೆ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌ ಅಧಿಕಾರಿ, ವಿಡಿಯೋ ವೈರಲ್‌!

ಕಚೇರಿಯಲ್ಲಿ ಬೈಗುಳ ಸಾಮಾನ್ಯ
ಹಿರಿಯ ಎಚ್‌ ಆರ್‌ ತಜ್ಞರೊಬ್ಬರ ಪ್ರಕಾರ, ಕಿರಿಚಾಡುವುದು (Screaming) ಅತಿ ಸಾಮಾನ್ಯವಾಗಿ ಕಾಣುವ ಘಟನೆ. ಸೇಲ್ಸ್‌ ವಿಭಾಗದಲ್ಲಿ ಇದು ನಿತ್ಯದ ಸನ್ನಿವೇಶ. ಕೆಲವು ಕಡೆ ಸ್ವಲ್ಪ ಸ್ಟ್ಯಾಂಡರ್ಡ್‌ ಎನಿಸಿದರೆ ಕೆಲವು ಕಡೆ ಕೀಳು ಮಟ್ಟದಲ್ಲಿ ಗೋಚರವಾಗುತ್ತದೆ. ಖಾಸಗಿ ಬ್ಯಾಂಕ್‌ ಉದ್ಯೋಗಿಯೊಬ್ಬರು ಹೇಳುವ ಪ್ರಕಾರ, ಸಾಧಿಸುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಗುರಿಗಳನ್ನು ನಿಗದಿಪಡಿಸಲಾಗುತ್ತದೆ, ಇದರಿಂದಾಗಿ ಕೆಲವೊಮ್ಮೆ 18 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿ ಬರುತ್ತದೆ ಎನ್ನುತ್ತಾರೆ. ಸಾಧ್ಯವಾಗದೆ ಇದ್ದಾಗ ಬಾಸ್‌ ನಿಂದ ಬೈಗುಳ (Shouting) ಕೇಳಿಸಿಕೊಳ್ಳಬೇಕಾಗುತ್ತದೆ.

ಎಲ್ಲಿ ಹೆಚ್ಚು?
ಬ್ಯಾಂಕ್‌, ವಿಮೆ ಸಂಸ್ಥೆಗಳಲ್ಲಿ ಅತಿಯಾದ ಒತ್ತಡ ಹೆಚ್ಚು. ಟೀಮ್‌ ಲೀಡರ್‌ ಗಳು ತಮ್ಮ ಮೇಲಧಿಕಾರಿಗಳ ಒತ್ತಡವನ್ನು ಕೆಳಹಂತದ ಉದ್ಯೋಗಿಗಳಿಗೆ ವರ್ಗಾವಣೆ ಮಾಡುತ್ತಾರೆ. ಬೈಗುಳ ತಿಂದು, ಕೆಟ್ಟ ವಾತಾವರಣದಲ್ಲೇ ಅತ್ಯುತ್ತಮ ಸೇಲ್ಸ್‌ ಮನ್‌ (Salesman) ಆಗಿ ಕೆಲಸ ಮಾಡುವವರಿದ್ದಾರೆ. ಇಂತಹ ವಾತಾವರಣ ಉಸಿರುಕಟ್ಟಿಸುವಂತೆ ಮಾಡುತ್ತದೆ. ಆದರೂ ಇದು ಪರಿಣಾಮಕಾರಿ (Effective) ಎಂದು ಟೀಮ್‌ ಲೀಡರ್‌ ಅಂದುಕೊಳ್ಳುತ್ತಾರೆ. ಸೇಲ್ಸ್‌ ವಿಭಾಗ ಯಾವುದೇ ಸಂಸ್ಥೆಯ ಜೀವನಾಡಿ. ಹೀಗಾಗಿ, ಆ ವಿಭಾಗದಲ್ಲಿ ಒತ್ತಡ ಹೆಚ್ಚು ಎನ್ನುವುದು ಎಲ್ಲರ ಅನುಭವ. 

 

HDFC Bank ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆ ವಿಸ್ತರಣೆ; ಜುಲೈ 7ರ ತನಕ ಖಾತೆ ತೆರೆಯಲು ಅವಕಾಶ

ಸೂಕ್ತ ನಿಯಮವಿಲ್ಲ (Regulations)
ಸಂಸ್ಥೆಗಳಲ್ಲಿ ಉದ್ಯೋಗಿಗಳು ಎದುರಿಸುವ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ವಿಭಾಗ ಇರಬೇಕೆಂದು HR ನೀತಿ (Policy) ಹೇಳುತ್ತದೆ. ದೂರುಗಳನ್ನೇನೋ (Complaints) ಸ್ವೀಕರಿಸಲಾಗುತ್ತದೆ, ಆದರೆ ಆಲಿಸುವುದಿಲ್ಲ. ಉದ್ಯೋಗ ಸ್ಥಳದ ದೌರ್ಜನ್ಯ (Harassment) ನಿವಾರಿಸುವಲ್ಲಿ ನಮ್ಮ ಕಾನೂನುಗಳು ಸಹ ಬಿಗಿಯಾಗಿಲ್ಲ ಎನ್ನುವುದು HR Experts ಅಭಿಪ್ರಾಯ. ಲೈಂಗಿಕ (Sexual Harassment) ಕಿರುಕುಳಕ್ಕಾದರೆ ನಿರ್ದಿಷ್ಟ ಸೆಕ್ಷನ್‌ ಇದೆ, ಆದರೆ ಇತರೆ ದೌರ್ಜನ್ಯಗಳನ್ನು ದಾಖಲಿಸಲು ಸೂಕ್ತ ನಿಯಮಗಳಿಲ್ಲ. ಅಂಥವುಗಳನ್ನು ಎದುರಿಸಲು ಮಾನಹಾನಿ, ಕೆಟ್ಟ ಪದ ಬಳಕೆ, ಅಪರಾಧಕ್ಕೆ ಸಂಬಂಧಿಸಿದ ಇತರ ಸೆಕ್ಷನ್‌ ಗಳ ಮೊರೆ ಹೋಗಬೇಕಾಗುತ್ತದೆ. 

ಉದ್ಯೋಗ ಸ್ಥಳದ ದೌರ್ಜನ್ಯಕ್ಕೆ ಪರಿಹಾರವೆಂದರೆ, ಯಾವುದೇ ಕಾರಣಕ್ಕೂ ಬೈಗುಳ, ಕೆಟ್ಟ ಪದಬಳಕೆ ಸೇರಿದಂತೆ ದೌರ್ಜನ್ಯ ಮಾಡಬಾರದೆಂದು ಮ್ಯಾನೇಜ್‌ ಮೆಂಟ್‌ (Management) ತನ್ನ ಟೀಮ್‌ ಲೀಡರ್‌ ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ (Guidance) ನೀಡಬೇಕು ಎಂದು ಎಚ್‌ ಆರ್‌ ತಜ್ಞರು ಅಭಿಪ್ರಾಯಪಡುತ್ತಾರೆ.  
 

Latest Videos
Follow Us:
Download App:
  • android
  • ios