ಸಾಮರ್ಥ್ಯ ಮೀರಿ ವಯಾಗ್ರ ನುಂಗಿ, 24 ಗಂಟೆ ನಿರಂತರ ಸಂಭೋಗದಲ್ಲಿ ತೊಡಗಿದ; ಆಮೇಲೆ ಆಗಿದ್ದೇ ಬೇರೆ!
ಸೆಕ್ಸ್ ಲೈಫ್ ಚೆನ್ನಾಗಿರಬೇಕೆಂದು ಸಾಮರ್ಥ್ಯ ಮೀರಿ ವಯಾಗ್ರ ನುಂಗಿದ ಜರ್ಮನಿಯ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈತ ನಿರಂತರವಾಗಿ 24 ಗಂಟೆ ಗಂಟೆ ಸಂಭೋಗದಲ್ಲಿ ತೊಡಗಿಕೊಂಡ ನಂತರ ಶಿಶ್ನದ ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿತ್ತು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಲೈಂಗಿಕ ಜೀವನ ಚೆನ್ನಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕಾಗಿ ಹೆಚ್ಚು ಎನರ್ಜಿಯನ್ನು ಗಳಿಸಲು ಟ್ಯಾಬ್ಲೆಟ್ಸ್‌ಗಳನ್ನು ತೆಗೆದುಕೊಳ್ಳುತ್ತಾರೆ. ಮಾತ್ರವಲ್ಲ ವಯಾಗ್ರದ ಮೊರೆ ಹೋಗುತ್ತಾರೆ. ಜನರು ಲೈಂಗಿಕ ತೃಪ್ತಿಗಾಗಿ ಏನೆಲ್ಲ ಮಾಡುತ್ತಾರೆ. ಲೈಂಗಿಕ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವಿವಿಧ ಔಷಧ ಮಾಡುವುದರಿಂದ ಹಿಡಿದು ದೈಹಿಕ ಕಸರತ್ತುಗಳನ್ನು ಸಹ ಅಭ್ಯಾಸ ಮಾಡಿಕೊಳ್ಳುತ್ತಾರೆ. ಲೈಂಗಿಕ ಕಾಮಾಸಕ್ತಿ ಕುಂದಿದವರಿಗೆ ಇತ್ತೀಚಿನ ವರ್ಷಗಳಲ್ಲಿ ವಯಾಗ್ರ ಭಾರೀ ವರದಾನವಾಗಿದೆ. ಲೈಂಗಿಕ ಶಕ್ತಿ ಹೆಚ್ಚಿಸುವ ಮೂಲಕ ಕಾಮನೆಗಳ ತೃಪ್ತಿಗೊಳಿಸುವ ಮಾತ್ರೆ ಎಂದೇ ಜನಪ್ರಿಯವಾಗಿರುವ ವಯಾಗ್ರ ಈಗ ಭಾರೀ ಬೇಡಿಕೆಯಲ್ಲೂ ಇದೆ. ಹೀಗೆಯೇ ಸೆಕ್ಸ್ ಲೈಫ್ ಚೆನ್ನಾಗಿರಬೇಕೆಂದು ವಯಾಗ್ರ ಸೇವಿಸಿದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಜರ್ಮನಿಯ ಪುರುಷನೊಬ್ಬ (German Tourist) ಶಿಶ್ನ ನಿಮಿರುವಿಕೆಗಾಗಿ ವಯಾಗ್ರಗಳನ್ನು ನುಂಗಿ 24 ಗಂಟೆಗಳಿಗೂ ಹೆಚ್ಚು ಕಾಲ ಸೆಕ್ಸ್‌ನಲ್ಲಿ (Love Making) ತೊಡಗಿಸಿಕೊಂಡಿದ್ದ. ಆರಂಭದಲ್ಲಿ ಶಿಶ್ನದಲ್ಲಿ ನಿಧಾನವಾಗಿ ನೋವು ಕಾಣಿಸಿಕೊಂಡಿದೆ. ಅದರ ನಂತರ ನೋವು ತೀವ್ರವಾಗಿದೆ. ಅದರಿಂದ ಗಾಬರಿಯಾದದ ವ್ಯಕ್ತಿ ತಕ್ಷಣವೇ ಕಾರು ಏರಿ ಆಸ್ಪತ್ರೆಯತ್ತ ಓಡಿದ್ದಾನೆ. ಅವರನ್ನು ಪರೀಕ್ಷಿಸಿದ ವೈದ್ಯರು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ನಿರಂತರ ಸಂಭೋಗದಿಂದ ಶಿಶ್ನದ (Penis) ತುದಿಯಲ್ಲಿರುವ ಸೀಳಿನಲ್ಲಿ ಬಿರುಕುಬಿಟ್ಟು ರಕ್ತಸ್ರಾವವಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ (Surgery) ಅಗತ್ಯವಿದೆ ಎಂದು ಹೇಳಿದರು.
ಹಿಮಾಲಯದ ವಯಾಗ್ರ.. ಕಾಮೋತ್ತೇಜಕ 'ಕೀಡಾ ಜಡಿ..' ಕಲೆಹಾಕಲು ಅಡ್ಡಿಯಾದ ಹಿಮ!
ಇಟಲಿಯ ಗ್ರೊಸೆಟೊ ಆಸ್ಪತ್ರೆಯೊಂದರಲ್ಲಿ ವಿಚಿತ್ರ ಪ್ರಕರಣ ವರದಿಯಾಗಿದೆ. ಇಟಲಿಗೆ ರಜೆಯ ಮೇಲೆ ಬಂದಿದ್ದ ವ್ಯಕ್ತಿ ಹೀಗೆ ನಿರಂತರ ಸಂಭೋಗದಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ. ಮೇ 11 ರಂದು ಮಿಸೆರಿಕಾರ್ಡಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆತನ ಪತ್ನಿಯೂ ಆತನೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ.
ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ವಾರ ಕಳೆದರೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸಂತ್ರಸ್ತ ಸೆಪ್ಟಿಕ್ ಆಘಾತದಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇದು ಅವನ ಶಿಶ್ನ ಮತ್ತು ಸ್ಕ್ರೋಟಮ್ ನೆಕ್ರೋಸಿಸ್ಗೆ ( scrotum necrosis) ಕಾರಣವಾಗಿದೆ. ಸದ್ಯ ವೈದ್ಯರು ವ್ಯಕ್ತಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ಲೈಂಗಿಕ ಜೀವನ ಚೆನ್ನಾಗಿರ್ಲಿ ಅಂತ ಮಹಿಳೆಯರು ವಯಾಗ್ರ ಸೇವಿಸಬಹುದಾ ?
ವಯಾಗ್ರ ಸೇವನೆ, ರಕ್ತ ಹೆಪ್ಪುಗಟ್ಟಿ ವ್ಯಕ್ತಿ ಸಾವು!
ಮದ್ಯಪಾನ ಮಾಡುತ್ತಿರುವಾಗಲೇ ಎರಡು ವಯಾಗ್ರ ಮಾತ್ರೆಗಳನ್ನು ಸೇವಿಸಿದ 41 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಈ ಹಿಂದೆ ನಾಗ್ಪುರದಲ್ಲಿ ನಡೆದಿತ್ತು. ಇಲ್ಲಿನ ವ್ಯಕ್ತಿಯೊಬ್ಬ ಮಹಿಳಾ ಸ್ನೇಹಿತೆಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದಾಗ ವಯಾಗ್ರ ಎಂಬ ಬ್ರಾಂಡ್‌ನಲ್ಲಿ ಮಾರಾಟವಾಗುವ ಸಿಲ್ಡೆನಾಫಿಲ್‌ನ ಎರಡು 50mg ಮಾತ್ರೆಗಳನ್ನು ತೆಗೆದುಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ ವ್ಯಕ್ತಿ ಮದ್ಯವನ್ನೂ ಸೇವಿಸುತ್ತಿದ್ದ ಕಾರಣ ರಕ್ತ ಹೆಪ್ಪು ಗಟ್ಟಿ ಮೃತಪಟ್ಟಿದ್ದಾನೆ. ಈ ಬಗ್ಗೆ ಜರ್ನಲ್ ಆಫ್ ಫೋರೆನ್ಸಿಕ್ ಮತ್ತು ಲೀಗಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.
ಮೃತ ವ್ಯಕ್ತಿಯು ಹೋಟೆಲ್ ಹೋಟೆಲ್ ಕೋಣೆಯೊಂದರಲ್ಲಿ ಸ್ನೇಹಿತೆಯೊಂದಿಗೆ ಉಳಿದುಕೊಂಡಿದ್ದನು.. ರಾತ್ರಿಯಲ್ಲಿ 2 ಸಿಲ್ಡೆನಾಫಿಲ್ ಮಾತ್ರೆಗಳನ್ನು ಮತ್ತು ಆಲ್ಕೋಹಾಲ್ ಸೇವಿಸಿದ್ದನು. ಮರುದಿನ ಬೆಳಿಗ್ಗೆ ವ್ಯಕ್ತಿ ವಾಂತಿ ಮಾಡುಕೊಂಡು ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು 300 ಗ್ರಾಂ ಹೆಪ್ಪುಗಟ್ಟಿದ ರಕ್ತವನ್ನು ಪತ್ತೆ ಹಚ್ಚಿದ್ದು, ಆಲ್ಕೋಹಾಲ್ ಮತ್ತು ಔಷಧಿಗಳ ಮಿಶ್ರಣ ಪತ್ತೆಯಾಗಿದೆ. ಹಾಗೆಯೇ ಮೊದಲೇ ಅಸ್ತಿತ್ವದಲ್ಲಿರುವ ಅಧಿಕ ರಕ್ತದೊತ್ತಡವು ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.