Asianet Suvarna News Asianet Suvarna News

ಇಡಿ ಸಮನ್ಸ್‌ಗೆ ಬಿಜೆಪಿ ವಿರುದ್ಧ ಕಿಡಿ, ಸಿದ್ದು ಮತ್ತು ಟೀಂಗೆ ಡಿಕೆಶಿ ಟಕ್ಕರ್ !

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಇಡಿ ನೋಟಿಸ್ ಗೆ ನಾನು ಹೆದರುವುದಿಲ್ಲ ಎಂದಿದ್ದಾರೆ. ಜೊತೆಗೆ ಸ್ವಪಕ್ಷದವರಿಗೆ ಬಿಸಿ ಮುಟ್ಟಿಸಿದ ಡಿಕೆಶಿ, ಸಿದ್ದು ಮತ್ತು ಟೀಂ ಗೆ ಟಕ್ಕರ್ ನೀಡಿದ್ದಾರೆ.

DK Sivakumar slams bjp about ed summons gow
Author
First Published Sep 16, 2022, 2:50 PM IST

ಬೆಂಗಳೂರು (ಸೆ.16): ಬೆಂಗಳೂರಿನಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಇಡಿ ನೋಟಿಸ್ ಗೆ ನಾನು ಹೆದರುವುದಿಲ್ಲ ಎಂದಿದ್ದಾರೆ. ಜೊತೆಗೆ ಸ್ವಪಕ್ಷದವರಿಗೆ ಬಿಸಿ ಮುಟ್ಟಿಸಿದ ಡಿಕೆಶಿ ನಮ್ಮಲ್ಲಿ ಕೆಲ ಶಾಸಕರು ಒಂದು ದಿನವೂ ಕೆಲಸ ಮಾಡಲ್ಲ ಎಂದು ಕಿಡಿಕಾರಿದ್ದಾರೆ. ಸಿದ್ದರಾಮೋತ್ಸವಕ್ಕಿಂತ ನಾನು ಉತ್ತಮ ಸಂಘಟಕ ಎಂಬ ಸಂದೇಶ ರವಾನೆ ಮಾಡಿ ಸಿದ್ದು ಮತ್ತು ಟೀಂ ಗೆ ಟಕ್ಕರ್ ನೀಡಿದ್ದಾರೆ. ನನ್ನನ್ನು ಕೆಲವರು ಜೈಲಿಗೆ ಹೋಗಿ ಬಂದವನು. ತಿಹಾರ್ ಜೈಲಿಗೆ ಹೋಗಿ ಬಂದವನು ಅಂತ ಆರೋಪಿಸ್ತಾರೆ. ನನ್ನ ಮೇಲೆ ಯಾವ ಕಮಿಷನ್ ಆರೋಪ ಇದೆ. ನನ್ನ ಮೇಲೆ ಯಾವ ಲಂಚ ಪಡೆದಿದ್ದು ಇದೆ. ನನ್ನ ಮೇಲೆ ಮಂಚ ಹತ್ತಿದ ಆರೋಪ ಇದ್ಯಾ. ನನ್ನ ಮೇಲೆ ಇಡಿ ನೋಟಿಸ್  ನೋಡಿ ಕೊಡ್ತಾರೆ ಕೊಡಲಿ. ಯಾವುದಕ್ಕೂ ನಾನು ಹೆದರುವುದಿಲ್ಲ. ಬೈ ಬರ್ತ್ I am agriculturist. ಬೈ  ಚಾಯ್ಸ್ I am business men. ಬೈ ಪ್ಯಾಷನ್ I am politician. ಎಲ್ಲಿ ಶ್ರಮ ಇರುತ್ತೋ ಅಲ್ಲಿ ಪ್ರತಿಫಲ ‌ಇರತ್ತೆ. ಇದಕ್ಕೆ ನಾನೇ ಉದಾಹರಣೆ. ಹಾಗಾಗಿ ಈಗ ಆಗಿರುವ ಪದಾಧಿಕಾರಿಗಳು ಕೆಲಸ ಮಾಡಿ ಎಂದು ಹೇಳಿಕೆ ನೀಡಿದ್ದಾರೆ. 

ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಕಿಡಿ
ನಾವು ಮಾಡಿದ ಕೆಲಸಕ್ಕೆ ಬಿಜೆಪಿ ಅವರಿಗೆ ಉತ್ತರ ಕೊಡಲು ಆಗಿಲ್ಲ. ಚಾಮರಾಜನಗರ ದುರಂತದಲ್ಲಿ ಸಾವು ಆಗಿರುವ ಕುಟುಂಬದವರಿಗೆ ಒಂದು ಲಕ್ಷ ಚೆಕ್ ವಿತರಣೆ ಮಾಡಿದ್ದೇವೆ. ನಾನು ಸೋಲು‌ ಕಂಡಿರಬಹುದು, ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ನಾನು, ಸಿದ್ದರಾಮಯ್ಯ, ಸೋನಿಯಾ ಗಾಂಧಿ ಅವರು ಸೋಲು ಕಂಡಿದ್ದರು.  ಸೋಲು ಗೆಲವು ಸಹಜ, ಅದರೆ ಸಿದ್ದಾಂತ ಮುಖ್ಯ. ಬೆಲೆಗಳು ಗಗನಕ್ಕೆ ಏರಿವೆ, ಆದಾಯ ವಿಲ್ಲ. ಯುವಕರಿಕೆ ಉದ್ಯೋಗ ಕೊಡ್ತಿಲ್ಲ. ಎಲ್ಲಾ ಇಲಾಖೆಯಲ್ಲಿ ಭ್ರಷ್ಟಾಚಾರ. ಪೊಲೀಸ್, ಉಪನ್ಯಾಸಕರ, ವಿದ್ಯುತ್ ಇಲಾಖೆಯಲ್ಲಿ ನೇಮಕಾತಿಯಲ್ಲಿ  ಭ್ರಷ್ಟಾಚಾರ. ಮೋದಿ ಅವರು ಬಂದಾಗ ಸಿದ್ದರಾಮಯ್ಯ ಸರ್ಕಾರ  10% ಸರ್ಕಾರ ಎಂದು ಹೇಳಿದ್ರು. ಬಿಜೆಪಿಯವರು ಭ್ರಷ್ಟಾಚಾರ ಮಾಡಿ ಡ್ಯಾನ್ಸ್‌ ಮಾಡ್ತಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡ್ತಾರೆ. ಮೂರು ವರ್ಷಗಳ ಕಾಲ ಜನರಿಗೆ ಸ್ಪಂದನೆ ಮಾಡಲಿಲ್ಲ‌. ಈಗ ಜನಸ್ಪಂದನೆ ಅಂತ ಮಾಡ್ತಾರೆ‌. ಬಿಜೆಪಿ ಜನಸ್ಪಂದನ ವಿಚಾರವಾಗಿಯೇ ಬಿಜೆಪಿ ನಾಯಕರು ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. 

ಸ್ವಪಕ್ಷದ ವಿರುದ್ಧವೇ ಗರಂ ಆದ ಡಿಕಿಶಿ: 
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ‌ಪಕ್ಷದ‌ ಶಾಸಕರ ವಿರುದ್ಧ ಗರಂ ಆದರು. ನಮ್ಮಲ್ಲಿ ಕೆಲ ಶಾಸಕರು ಇದ್ದಾರೆ. ಒಂದು ದಿನ ಬಂದು ಕೆಲಸ ಮಾಡೋಕೆ ಆಗಲ್ಲ. ನಾನು ದೇಶಪಾಂಡೆ ಅವರಿಗೆ ಒಂದು ದಿನ ಜನರನ್ನ ಕಳಿಸೋಕೆ  ಕೇಳಿದೆ. ಅವರು ಆಗಲ್ಲ ಅಂದ್ರು. ಐದು ವರ್ಷದಲ್ಲಿ ಒಂದು ದಿನ ಅದೂ ರಾಹುಲ್ ಗಾಂಧಿ ಜೊತೆ ಕೆಲಸ ಮಾಡೋಕೆ ಆಗಲ್ಲ ಅಂದ್ರೆ‌ ಏನ್ಮಾಡೋದು. ಯಾವ ಎಂಎಲ್‌ಎ ಗೂ  ಮಾಫಿ ಮಾಡೋಕೆ ಆಗಲ್ಲ. ಪ್ರತಿ ದಿನ ಎರಡು ಎಂಎಲ್ಎ ಫಿಕ್ಸ್ ಮಾಡಿದ್ದೇವೆ. ಅವರು ಜನರ ಜೊತೆ ಬಂದು ಯಾತ್ರೆಯಲ್ಲಿ ಭಾಗವಹಿಸಿ ಎಂದು ಹೇಳಿದ್ದೇವೆ. ಯಾರು ಮುಂದಿನ ಚುನಾವಣೆಗೆ ಆಕಾಂಕ್ಷಿ ಇದ್ದಿರೋ ಅವರು ಬನ್ನಿ. ನನ್ಮ, ಸಿದ್ದರಾಮಯ್ಯ ‌ಫೋಟೋ ಹಾಕಬೇಡಿ ನೀವು ಕೆಲಸ ಮಾಡಿ ಎಂದು ಖಾರವಾಗಿಯೇ ಡಿಕೆಶಿ ಹೇಳಿದ್ದಾರೆ. 

ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ: ಡಿಕೆಶಿ ಸ್ಫೋಟಕ ಆರೋಪ

ಈ ಬಾರಿ ಹೊಸಬರಿಗೆ ಟಿಕೆಟ್ ಸಿಗುವ ಸಾಧ್ಯತೆ: ಡಿಕೆಶಿ
ಎಐಸಿಸಿ ಒಂದು ಕಮಿಟಿ ಬಂದಿದೆ. ಸುನೀಲ್ ಕನಗೋಳು ನೇತೃತ್ವದಲ್ಲಿ ಕಮಿಟಿ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ‌ಮಾಡುತ್ತಿದೆ. ಯಾರು ಏನು ಕೆಲಸ ಮಾಡ್ತಾ ಇದ್ದಾರೆ ಎಂದು ಗಮನಿಸುತ್ತಿದ್ದಾರೆ. ನಾನು ಏನು ಮಾಡ್ತಾ ಇದ್ದೇನೆ, ನೀವು ಏನು ಮಾಡ್ತಾ ಇದ್ದೀರಾ ಎಂದು ನೋಡ್ತಾ ಇದ್ದಾರೆ‌. ಈ ಬಾರಿ ಹೊಸಬರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ನಿಮ್ಮಿಂದ ಗೌಪ್ಯ ಪತ್ರವನ್ನು ನಾನು ಪಡೆಯುತ್ತೇನೆ. ಆ ಪತ್ರ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಹಾಗೂ ಎಐಸಿಸಿ ಜನರಲ್ ಸೆಕ್ರೆಟರಿ ಮತ್ತು ನನ್ನ ಬಳಿ ಮಾತ್ರ ಇರುತ್ತದೆ. ಸಿಎಲ್ಪಿ ನಾಯಕರಿಗೂ ತೋರಿಸುವುದಿಲ್ಲ. ಯಾವುದೇ ಹಿಡನ್ ಅಜೆಂಡಾ ಇಟ್ಟುಕೊಳ್ಳದೆ  ಹೆಸರು ಕೊಡಿ. ಯಾರು ಕೆಲಸ ಮಾಡ್ತಾರೆ ಅವರಿಗೆ ಟಿಕೆಟ್ ಸಿಗುತ್ತದೆ. ಬಿಜೆಪಿಯವರು ಸರ್ವೆ ಮಾಡಿಸಿದ್ದಾರೆ. ಅವರ ಸರ್ವೆಯಲ್ಲಿ 70 ಸ್ಥಾನ ದಾಟಿಲ್ಲ‌. ಆದರೆ ನೀವು ಸರ್ವೆಯ ಪ್ರಕಾರ ಮುಂದೆ ಇದ್ದೀರಾ. ಈಗಾಗಲೇ ಸೀಟು ಮೀಸಲಾಗಿದೆ ಎಂದು ತಿಳಿಯಬೇಡಿ. ನಿಮಗೂ ಅವಕಾಶ ಇರುತ್ತದೆ. ನಾಗರಾಜ್ ಯಾದವ್ ಟಿವಿಯಲ್ಲಿ ಕಿರುಚಿ ಕಿರುಚಿ ಎಂಎಲ್ಸಿ ಆಗಲಿಲ್ವಾ. ಅವನ ಬಳಿ ಹಣನೇ ಇಲ್ಲ. ನನಗೆ ಒಂದು ಟೀ ಸಹ ಕುಡಿಸಿಲ್ಲ. ಒಂದು ಬೊಕ್ಕೆ ಕೊಟ್ಟಿದ್ದಾನೆ ಅಷ್ಟೇ. ಹಾಗಾಗಿಯೇ ನಿಮಗೂ ಅವಕಾಶ ಇರುತ್ತದೆ. ಟಿಕೆಟ್ ವಿಚಾರದಲ್ಲಿ ಸಿಎಲ್ಪಿಗಿಂತ ಪಕ್ಷದ ಅಧ್ಯಕ್ಷರೇ ಅಲ್ಟಿಮೇಟ್ ಎಂಬ ಸಂದೇಶ ರವಾನಿಸಿದ ಡಿಕೆಶಿ

ಡಿಕೆಶಿಗೆ ಇ.ಡಿ ಸಮನ್ಸ್‌; ಭಾರತ ಏಕತಾ ಯಾತ್ರೆ, ಅಧಿವೇಶನದ ವೇಳೆ ಕಿರುಕುಳ ಎಂದ ಕಾಂಗ್ರೆಸ್‌ ಅಧ್ಯಕ್ಷ

ಸಿದ್ದು ಮತ್ತು ಟೀಮ್ ಗೆ ಡಿಕೆಶಿ ಟಕ್ಕರ್: 
ಇನ್ನು ಸಿದ್ದರಾಮಯ್ಯ ಮತ್ತು ಟೀಮ್ ಗೆ ಮತ್ತೊಮ್ಮೆ ಡಿಕೆಶಿ ಚಾಟಿ ಬೀಸಿದ್ದಾರೆ. ಸ್ವಾತಂತ್ರ್ಯ ನಡಿಗೆ ಕೆಲವರು ಬಂದರೂ, ಮುಖ ತೋರಿಸಿ ಎಲ್ಲೋ ಹೋಗಿ ಕುಳಿತಿದ್ದರು. ಅದು ನನಗೆ ಗೊತ್ತಿದೆ, ಎಐಸಿಸಿ ಅವರಿಗೆ ಗೊತ್ತಿದೆ. ಆಗಸ್ಟ್ ಮೂರರಂದು ಸಿದ್ದರಾಮೋತ್ಸವ ಮಾಡಿದ್ರು. ರಾಯರೆಡ್ಡಿ ಅವರು ತಯಾರಿ ಇದ್ದರು. ಕಾರ್ಯಕ್ರಮಕ್ಕೆ ಜನ ಬಂದರು. ಟ್ರಾಫಿಕ್ ಮ್ಯಾನೇಜ್ ಆಗಲಿಲ್ಲ. ಅದನ್ನು ನೋಡಿ ನಾನು ಸ್ವಾತಂತ್ರ್ಯ ನಡಿಗೆ ಸಂದರ್ಭದಲ್ಲಿ ಟ್ರಾಫಿಕ್ ಆಗದಂತೆ ನೋಡಿಕೊಂಡೆ‌. ಮೇಕೆದಾಟು ಪಾದಯಾತ್ರೆ ಮಾಡಿದ್ದೆ. ಅದು ಎಲ್ಲರಿಗೂ ಮೆಮೊರೇಬಲ್ ಅಲ್ಲವಾ? ಎಂದು ಸಿದ್ದರಾಮೋತ್ಸವಕ್ಕಿಂತ ನಾನು ಉತ್ತಮ ಸಂಘಟಕ ಎಂಬ ಸಂದೇಶ ರವಾನೆ ಮಾಡಿದ ಡಿಕೆಶಿ. ವೇದಿಕೆಯ ಮೇಲಿದ್ದ ಸಿದ್ದು ಬೆಂಬಲಿಗರು ಹೆಸರು ಪ್ರಸ್ತಾಪಿಸಿಯೇ ಪರೋಕ್ಷವಾಗಿ ಚಾಟಿ ಬೀಸಿದ ಡಿಕೆಶಿ.

Follow Us:
Download App:
  • android
  • ios