Asianet Suvarna News Asianet Suvarna News

ಕಾಂಗ್ರೆಸ್ ನಾಯಕನಿಗೆ ಸಂಕಷ್ಟ ತಂದ ಪತ್ನಿಯ ರೇಪ್ ಕೇಸ್, 10 ಕೋಟಿಗೆ ಬೇಡಿಕೆ!

ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ಗೆ ಹಾಗೂ ಕೈ ನಾಯಕರಿಗೆ ಹೊಸ ಹೊಸ ತಲೆನೋವು ಎದುರಾಗುತ್ತಿದೆ. ಇದೀಗ ಕಾಂಗ್ರೆಸ್ ನಾಯಕನಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಪತ್ನಿಯೇ ರೇಸ್,  ಅಸ್ವಾಭಾವಿಕ ಲೈಂಗಿಕತೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾಳೆ. ಇಷ್ಟೇ ಅಲ್ಲ ಅನೈತಿಕ ಸಂಬಂಧದ ದೂರು ದಾಖಲಿಸಿದ್ದಾಳೆ. 

Congress leader Umang Singhar charged for rape and domestic violence complaint by his wife ckm
Author
First Published Nov 21, 2022, 5:41 PM IST

ಇಂದೋರ್(ನ.21):  ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಮೈಕೊಡವಿ ನಿಂತುಕೊಂಡಿದೆ. ಇದಕ್ಕಾಗಿ ಸತತ ಪ್ರಯತ್ನಗಳನ್ನು ಮಾಡುತ್ತಿದೆ. ಹೀಗಾಗಿ ಎಲ್ಲಾ ರಾಜ್ಯ ಕಾಂಗ್ರೆಸ್ ನಾಯಕರನ್ನು ಒಳಗೊಂಡು ಯೋಜನೆಗಳನ್ನು ರೂಪಿಸುತ್ತಿದೆ. ಇದರ ನಡುವೆ ಮಧ್ಯ ಪ್ರದೇಶ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಉಮಂಗ್ ಸಿಂಗಾರ್ ಸಂಕಷ್ಟಕ್ಕೆ ಇದೀಗ ಹೊಸ ತಲೆನೋವಾಗಿ ಪರಿಣಮಿಸಿದೆ. ಉಮಂಗ್ ಸಿಂಗಾರ್ ವಿರುದ್ದ ಪತ್ನಿ ರೇಪ್ ಕೇಸ್ ದಾಖಲಿಸಿದ್ದಾರೆ.  ಪತಿಯೇ ಅತ್ಯಾಚಾರ ಮಾಡಿದ್ದಾರೆ, ತನ್ನ ಜೊತೆಗೆ ಅಸ್ವಾಭಾವಿಕ ಲೈಂಗಿಕ ಸಂಪರ್ಕ ನಡೆಸಿದ್ದಾರೆ. ತನ್ನ ಆಸ್ತಿಗಳನ್ನು ಕಬಳಿಸಿದ್ದಾರೆ ಎಂದು ಪತ್ನಿ ದೂರು ನೀಡಿದ್ದಾಳೆ. ಇತ್ತ ಉಮಂಗ್ ಸಿಂಗಾರ್ ಕೂಡ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ತನಗೆ ಮಾಸಿಸಿಕ ಕಿರುಕುಳು ನೀಡುತ್ತಿದ್ದಾಳೆ. 10 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ ಎಂದು ದಾರು ದಾಖಲಿಸಿದ್ದಾರೆ.

ಉಮಂಗ್ ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪ ಇದೀಗ ಮಧ್ಯಪ್ರದೇಶ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಕಾರಣ 2019ರಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಣತಿಯಂತೆ ನಡೆದುಕೊಳ್ಳುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಇದು ಬಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಬಳಿಕ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚಿಸಿತ್ತು. ಇದೀಗ ಉಮಂಗ್ ಸಿಂಗ್ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ. ಇದರಿಂದ ಮಧ್ಯಪ್ರದೇಶದ ಕಾಂಗ್ರೆಸ್‌ ಘನತೆಗೆ ತೀವ್ರ ಧಕ್ಕೆಯಾಗುತ್ತಿದೆ ಎಂದು ಹಲವು ನಾಯಕರು ಆರೋಪಿಸಿದ್ದಾರೆ.

ಕಣ್ಣಿಗೆ ಆಸಿಡ್‌ ಹಾಕಿದ್ದ ಪಾಪಿಗಳು, ನಿರ್ಭಯಾ ರೀತಿಯ ರೇಪ್‌ ಕೇಸ್‌.. ಆದ್ರೂ ಆರೋಪಿಗಳು ಖುಲಾಸೆ!

ಉಮಂಗ್ ಸಿಂಗ್ ಕಳೆದ ವರ್ಷ ಲಿವ್ ಇನ್ ಪಾರ್ಟ್ನರ್ ಜೊತೆ ವಾಸಿಸುತ್ತಿದ್ದಾರೆ. ಹೀಗಾಗಿ ತನಗೆ ಮೋಸ ಮಾಡಿದ್ದಾರೆ ಎಂದು ಪತ್ನಿ ದೂರು ನೀಡಿದ್ದರು.  ಈ ಪ್ರಕರಣ ಭಾರಿ ಸದ್ದು ಮಾಡಿತ್ತು. ಬಳಿಕ ಸಂಧಾನದ ಮೂಲಕ ಪ್ರಕರಣ ತಣ್ಣಗಾಗಿತ್ತು. ಇದೀಗ ಮತ್ತೆ ಅನೈತಿಕ ಸಂಬಂಧದ ಆರೋಪವನ್ನು ಪತ್ನಿ ಮಾಡಿದ್ದಾರೆ. ಇಷ್ಟೇ ಅಲ್ಲ ತನ್ನ ಆಸ್ತಿಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ಜಮುನಾ ದೇವಿ ಸಂಬಂಧಿಯಾಗಿರುವ ಉಮಂಗ್ ಸಿಂಗಾರ್, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಬುಡಕಟ್ಟು ಸಮುದಾಯದ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಉಮಂಗ್ ಸಿಂಗಾರ್ ವಿರುದ್ಧದ ಸತತ ಆರೋಪಗಳು ಕೇಳಿಬರುತ್ತಿರುವುದರಿಂದ ಇದೀಗ ಉಮಂಗ್ ಹಾಗೂ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ.

ಕಲಬುರಗಿ; 70 ವರ್ಷದ ವೃದ್ದೆಯನ್ನು ಅತ್ಯಾಚಾರ ಮಾಡಿದ ಯುವಕ!

 ಶಾಸಕನ ತಡೆದು 30 ಸಾವಿರ ಬಾಕಿ ಹಣ ಕೇಳಿದ ಟೀ ವ್ಯಾಪಾರಿ!
ಶಾಸಕರೊಬ್ಬರು ತಮ್ಮ ಕಾರಿನಲ್ಲಿ ತೆರಳುವಾಗ ಚಹಾ ಮಾರಾಟಗಾರನೊಬ್ಬ ದಾರಿ ಮಧ್ಯೆ ಅವರನ್ನು ತಡೆದು 30 ಸಾವಿರ ರು. ಹಳೆ ಬಾಕಿ ಹಣ ನೀಡುವಂತೆ ಕೋರಿದ ಘಟನೆ ಶನಿವಾರ ನಡೆದಿದೆ.ಶಾಸಕ ಕರಣ್‌ ಸಿಂಗ್‌ ವರ್ಮಾ ಎಂಬಬುವರೇ ಫಜೀತಿಗೀಡಾದ ಶಾಸಕ. ಇವರು 2018ರಿಂದ ಟೀ ವ್ಯಾಪಾರಿಗೆ ನೀಡಬೇಕಿದ್ದ 30 ಸಾವಿರ ಹಣ ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ, 2023ರಲ್ಲಿ ಮಧ್ಯಪ್ರದೇಶದ ವಿಧಾನ ಸಭೆ ಚುನಾವಣೆಯಿರುವ ಹಿನ್ನೆಲೆಯಲ್ಲಿ ಸಿಹೋರ್‌ ಗ್ರಾಮಕ್ಕೆ ಶನಿವಾರ ಶಾಸಕ ಕರಣ್‌ಸಿಂಗ್‌ ವರ್ಮಾ ಭೇಟಿ ನೀಡಿದ್ದರು. ಅವರಿಗೆ ಚಹಾ ವ್ಯಾಪಾರಿಯು ಹಣ ಮರಳಿಸುವಂತೆ ಕೇಳುತ್ತಿರುವುದು ಕಂಡುಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.
 

Follow Us:
Download App:
  • android
  • ios