Asianet Suvarna News Asianet Suvarna News

ಕೋಲಾರದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Woman Gang Raped in Kolar

ಕೋಲಾರ (ಸೆ.27): ಕೋಲಾರ ಮೂಲದ ಇಬ್ಬರು ಕಾಮುಕರು ಪರಿಚಯಸ್ಥ ಯುವತಿಗೆ ಊಟ ಕೊಡಿಸುವ ನೆಪವೊಡ್ಡಿ ಹೋಟೆಲ್​ಗೆ ಕರೆದೊಯ್ದು ಸಾಮೂಹಿಕ ಆತ್ಯಚಾರ ಎಸಗಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.

ಟಮಕ ಬಳಿ ಇರುವ ವುಡ್ಡೀಸ್​ ಹೋಟೆಲ್​ನಲ್ಲಿ ಸೆ.25 ರಂದು ಕೃತ್ಯ ಎಸಗಲಾಗಿದೆ.  ನೊಂದ ಯುವತಿ ಕಳೆದ ರಾತ್ರಿ ನಗರದ ಗಲ್​ ಪೇಟೆ ಪೊಲೀಸ್​ ಠಾಣೆಗೆ ದೂರು ನೀಡಿದ್ದ ಹಿನ್ನಲೆ ತಕ್ಷಣ ಪೊಲೀಸರು ಆತ್ಯಾಚಾರ ವೆಸಗಿದ್ದ ಸಾಬೀನ್​ , ಇಂತಿಯಾಜ್​ ಇವರಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ವಿಚಾರಣೆ ನಡೆಸಿದಾಗ ಯುವತಿ ಮೇಲೆ ದೈಹಿಕ ದೌರ್ಜನ್ಯವೆಸಗಿ ಆತ್ಯಾಚಾರವೆಸಗಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಕೋಲಾರ ಜಿಲ್ಲಾಪೊಲೀಸ್​ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್​ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸಂತ್ರಸ್ಥೆ ಯುವತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸುರಕ್ಷಿತವಾಗಿರಿಸಲಾಗಿದೆ.

ಗಲ್​ಪೇಟೆ ಪೊಲೀಸರು ಆರೋಪಿಗಳ ವಿರುದ್ದ ದೂರು ದಾಖಲಿಸಿಕೊಂಡು ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Latest Videos
Follow Us:
Download App:
  • android
  • ios