ಬಜೆಟ್ 2018: ಯಥಾಸ್ಥಿತಿಯಲ್ಲಿ ಆದಾಯ ತೆರಿಗೆ ದರ

Union Budget No Change In Income Tax
Highlights

ಇಂದು ಮಂಡಿಸಲಾದ ಕೇಂದ್ರ ಬಜೆಟ್’ನಲ್ಲಿ ಆದಾಯ ತೆರಿಗೆ ದರಗಳಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಹಿಂದಿನ ಆದಾಯ ತೆರಿಗೆಯನ್ನು   ಮುಂದುವರೆಸಿದ್ದಾರೆ

ನವದೆಹಲಿ: ಇಂದು ಮಂಡಿಸಲಾದ ಕೇಂದ್ರ ಬಜೆಟ್’ನಲ್ಲಿ ಆದಾಯ ತೆರಿಗೆ ದರಗಳಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಹಿಂದಿನ ಆದಾಯ ತೆರಿಗೆಯನ್ನು   ಮುಂದುವರೆಸಿದ್ದಾರೆ

ಆದುದರಿಂದ ₹2.50 ಲಕ್ಷ ತನಕದ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ₹2.50 ಲಕ್ಷ ₹ 5 ಲಕ್ಷವರೆಗೆ ಶೇ 5ರಷ್ಟು ತೆರಿಗೆ ಇರುವುದು. ₹5 ರಿಂದ 10 ಲಕ್ಷ ಆದಾಯವಿರುವವರು ಶೇ 20ರಷ್ಟು ತೆರಿಗೆ ಪಾವತಿಸಬೇಕು. ₹10ಲಕ್ಷ ಗಿಂತ ಮೇಲ್ಪಟ್ಟು ಆದಾಯವಿರುವವರು ಶೇ 30ರಷ್ಟು ತೆರಿಗೆ ಪಾವತಿಸಬೇಕು,

ಆದರೆ ಹಿರಿಯ ನಾಗರಿಕರಿಗೆ ತೆರಿಗೆಯಲ್ಲಿ ವಿನಾಯಿತಿ ಘೋಷಿಸಲಾಗಿದೆ. ₹3 ಲಕ್ಷ ತನಕ ತೆರಿಗೆ ಇಲ್ಲ, ₹3 ಲಕ್ಷ ರಿಂದ ₹5 ಲಕ್ಷ ಆದಾಯವಿರುವವರು ಶೇ.5 ತೆರಿಗೆ ಪಾವತಿಸಬೇಕು. ₹5 ರಿಂದ 10 ಲಕ್ಷ ಆದಾಯಕ್ಕೆ ಶೇ 20ರಷ್ಟು ತೆರಿಗೆ ಹಾಗೂ ₹10ಲಕ್ಷ ರೂ.ಗಿಂತ ಮೇಲ್ಪಟ್ಟು ಶೇ. 30ರಷ್ಟು ತೆರಿಗೆ ಇದೆ.

loader