ಸಂಚಾರ ನಿಮಯ ಉಲ್ಲಂಘಿಸಿದ ಸ್ಕೂಟರ್ : 63500 ರು. ದಂಡ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 9:11 AM IST
Traffic Rule Break 63 Thousand Fine For A scooter
Highlights

ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸ್ಕೂಟರ್ ಒಂದಕ್ಕೆ ಬರೋಬ್ಬರಿ 63 ಸಾವಿರ ರು. ದಂಡ ವಿಧಿಸಿದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಈ ಸ್ಕೂಟರ್ ಮಾಲಿಕ ಅನೇಕ ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಮೊತ್ತದಲ್ಲಿ ದಂಡ ವಿಧಿಸಲಾಗಿದ್ದು, ಸ್ಕೂಟರ್ ಬೆಲೆಗಿಂತ ದಂಡದ ಪ್ರಮಾಣವೇ ಅತ್ಯಧಿಕವಾಗಿದೆ. 

ಮೈಸೂರು: ನಗರದ ಆಯುರ್ವೇದ ವೃತ್ತದ ಬಳಿ ಎನ್. ಆರ್.ಸಂಚಾರ ಪೊಲೀಸರು ನಡೆಸಿದ ತಪಾಸಣೆ ವೇಳೆ 63, 500 ದಂಡ ಪಾವತಿ ಸಬೇಕಾದ ಸ್ಕೂಟರ್ ಸವಾರ ಸಿಕ್ಕಿಬಿದ್ದಿದ್ದಾರೆ. ಆ ಸ್ಕೂಟರ್ ಮೂಲ ಬೆಲೆ ಗಿಂತ ದಂಡದ ಮೊತ್ತವೇ ಹೆಚ್ಚು! ಸಂಚಾರ ಉಲ್ಲಂಘನೆ ಮಾಡುವವರ ವಿರುದ್ಧ ವಿಶೇಷ ವಾಹನ ಗಳ ತಪಾಸಣೆ ನಡೆಯುತ್ತಿತ್ತು. 

ಈ ಸಮಯದಲ್ಲಿ ಹೊಂಡಾ ಆಕ್ಟಿವಾ ಸ್ಕೂಟರ್ (ನಂಬರ್ ಕೆಎ-09  ಎಚ್‌ಡಿ 4732 ) ವಾಹನವನ್ನು ತಪಾಸಣೆ ಮಾಡಿದಾಗ ಆ ವಾಹನ ದ ಮೇಲೆ 635 ಎಫ್‌ಟಿವಿಆರ್ ಸಂಚಾರ ಉಲ್ಲಂಘನೆಯ ಪ್ರಕರಣ ದಾಖಲಾಗಿರುವುದು ಕಂಡುಬಂದಿದೆ. ಈ ವಾಹ ನವು ನಗರದ ನಿವಾಸಿ ಕೆ.ಮಧುಪ್ರಸಾದ್ ಎಂಬವರಿಗೆ  ಸೇರಿದೆ. 

ವಾಹನವು ಪ್ರಸ್ತುತವಾಗಿ ಎನ್.ಸಂಚಾರ ಪೊಲೀಸ್ ಠಾಣೆಯ ವಶದಲ್ಲಿದೆ. ಇನ್ಸ್‌ಪೆಕ್ಟರ್ ಎನ್.ಜಯ ಕುಮಾರ್ ನೇತೃತ್ವದಲ್ಲಿ ಎಎಸ್‌ಐ ಎಂ.ದೀಪಕ್, ಸಿವಿಲ್ ಹೆಡ್ ಕಾನ್‌ಸ್ಟೆಬಲ್ ಎನ್.ನಾರಾಯಣಸ್ವಾಮಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಈ ಸ್ಕೂಟರ್ ಕಂಡುಬಂದಿದೆ.

loader