ಬೆಂಗಳೂರು: ಬಿಜೆಪಿ ನಮ್ಮ ಶಾಸಕರನ್ನು ಖರೀದಿ ಮಾಡುತ್ತಾ ಇರಲಿ. ನಾವು ಅಧಿಕಾರ ಮಾಡುತ್ತಾ ಇರುತ್ತೇವೆ ಎಂದು ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಬಿಜೆಪಿ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಏನು ಮಾತ ನಾಡಿದ್ದಾರೋ ನನಗೆ ಗೊತ್ತಿಲ್ಲ. 

ವಿಷಯ ಗೊತ್ತಿಲ್ಲದೆ ಮಾತನಾಡಬಾರದು. ಹೀಗಾಗಿ ಆ ವಿಷಯ ಮಾತನಾಡುವುದಿಲ್ಲ. ಒಂದು ವೇಳೆ ಬಿಜೆಪಿಯವರು ನಮ್ಮ ಶಾಸಕರನ್ನು ಖರೀದಿ ಮಾಡಿದರೆ ಮಾಡುತ್ತಾ ಇರಲಿ ನಾವು ನಮ್ಮ ಪಾಡಿಗೆ ಅಧಿಕಾರ ಮಾಡುತ್ತಾ ಇರುತ್ತೇವೆ ಎಂದು ಹೇಳಿದರು.