ಹೈದ್ರಾಬಾದ್ ಮರ್ಯಾದ ಹತ್ಯೆ : ಆರೋಪಿಗಳ ವಿರುದ್ಧ ಕಠಿಣ ಕ್ರಮ
ನಲಗೊಂಡ ಮರ್ಯಾದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಹೈದ್ರಾಬಾದ್ : ನಲಗೊಂಡದಲ್ಲಿ ನಡೆದ ಮರ್ಯಾದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕೊಲೆ ಆರೋಪಿಗಳ ವಿರುದ್ಧ ಪ್ರಿವೆಂಟಿವ್ ಡಿಟೆನ್ಸನ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಗಳ ಗಂಡನನ್ನೇ ಹತ್ಯೆ ಮಾಡಿದ ತಂದೆ , ಚಿಕ್ಕಪ್ಪ, ಹಾಗೂ ಕೊಲೆಗಾರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಆತನಾಡಿದ ನಲಗೊಂಡ ಎಸ್ ಪಿ ಎವಿ ರಂಗನಾಥ್ ಮೂವರ ವಿರುದ್ಧ ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ತಿರುನಗರಿ ಮಾರುತಿ ರಾವ್ ಅವರ ಸಹೋದರ ಶ್ರವಣ್ ಕುಮಾರ್ ಸ್ಥಳೀಯ ಕಾಂಗ್ರೆಸ್ ಮುಖಂಡ ಅಬ್ದುಲ್ ಕರೀಂ ವಿರುದ್ಧ ಈ ಕಾಯ್ದೆ ಜಾರಿ ಮಾಡಲಾಗುತ್ತಿದೆ.
ಪಿಡಿ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿ ವಾರಂಗಲ್ ಜೈಲು ಅಧಿಕಾರಿಗಳಿಗೆ ಈ ಬಗ್ಗೆ ಅಧಿಕಾರವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಮಾರುತಿ ರಾವ್ ಅವರ ಪುತ್ರಿ ಅಮೃತಾ ವರ್ಷಿಣಿ ಗಂಡ ಪ್ರಣಯ್ ನನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದರು. ಸೆಪ್ಟೆಂಬರ್ 14ರಂದು ಪ್ರಣಯ್ ಹತ್ಯೆ ನಡೆದಿತ್ತು. ಪತ್ನಿ ಗರ್ಭಿಣಿಯಾಗಿದ್ದಾಗಲೇ ಆಕೆಯ ಪತಿಯನ್ನು ಹತ್ಯೆ ಮಾಡಿ ಕ್ರೌರ್ಯತೆ ಮರೆಯಲಾಗಿತ್ತು. ಈ ಸಂಬಂಧ ಮೂವರನ್ನು ಬಂಧಿಸಲಾಗಿತ್ತು.