ಸುವರ್ಣ ನ್ಯೂಸ್'ನ  ಕವರ್  ಸ್ಟೋರಿ ತಂಡ ನಡೆಸುತ್ತಿರೋ ಆಪರೇಷನ್ ಬ್ಲ್ಯಾಕ್ ಆಂಡ್ ವೈಟ್ ಬಲೆ ಬಿತ್ತು. ಕಪ್ಪು ಹಣ ಬಿಳಿ ಮಾಡೋ ಮತ್ತೊಂದು ಗ್ಯಾಂಗ್. ಈ ಗ್ಯಾಂಗ್ ನಮಗೆ ಚಿನ್ನ ಕೊಟ್ಟು ಕಪ್ಪು ಹಣ ಬಿಳಿ ಮಾಡಲು ಮುಂದಾಗಿತ್ತು.

ಕಪ್ಪು ಹಣ ಬಿಳಿ ಮಾಡೋ ದಂಧೆಕೋರರ ಬೆನ್ನತ್ತಿರೋ ಸುವರ್ಣ ನ್ಯೂಸ್ನ ಬಲೆಗೆ ಬಿತ್ತು ಮತ್ತೊಂದು ಗ್ಯಾಂಗ್. ಆಪರೇಷನ್ ಬ್ಲ್ಯಾಕ್ ಆಂಡ್ ವೈಟ್ನಲ್ಲಿ ಕಪ್ಪು ಹಣಕ್ಕೆ ಚಿನ್ನ ಕೊಡೋ ಆ ಗ್ಯಾಂಗ್ಗೆ ಕವರ್ ಸ್ಟೋರಿ ತಂಡ ಹೇಗೆ ಬುದ್ಧಿ ಕಲಿಸಿತು ಅನ್ನೋದನ್ನ ಹೇಳ್ತೀನಿ ಬನ್ನಿ.

ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ನಡೆಸುತ್ತಿರೋ ಆಪರೇಷನ್ ಬ್ಲ್ಯಾಕ್ ಆಂಡ್ ವೈಟ್ ಬಲೆ ಬಿತ್ತು. ಕಪ್ಪು ಹಣ ಬಿಳಿ ಮಾಡೋ ಮತ್ತೊಂದು ಗ್ಯಾಂಗ್. ಈ ಗ್ಯಾಂಗ್ ನಮಗೆ ಚಿನ್ನ ಕೊಟ್ಟು ಕಪ್ಪು ಹಣ ಬಿಳಿ ಮಾಡಲು ಮುಂದಾಗಿತ್ತು.

ಒಂದು ಕೆ.ಜಿ ಚಿನ್ನಕ್ಕೆ 45 ಲಕ್ಷ ರೂ. ಜೊತೆಗೆ 5 ಪರ್ಸೆಂಟ್ ಕಮಿಷನ್ ಕೊಡೋ ಡೀಲ್ ಕುದುರಿಸಿತು. ಡೀಲಿಗೆ ಒಪ್ಪಿಕೊಂಡ ನಾವು ಚಿನ್ನ ತರಲು ಹೇಳಿದ್ವಿ. ಆ ತಂಡ ಚಿನ್ನದ ಬಿಸ್ಕತ್ತು ಜೊತೆ ನಮ್ಮ ಬಳಿ ಬಂದೇ ಬಿಡ್ತು. ಚಿನ್ನವನ್ನ ಕಣ್ಣಾರೆ ಕಂಡ ನಾವು ಈ ದೇಶದ್ರೋಹಿಗಳಿಗೆ ಪಾಠ ಕಲಿಸಲೇ ಬೇಕು ಅಂತ ನಿರ್ಧರಿಸಿದೆವು. ಈ ಗ್ಯಾಂಗನ್ನ ಮಾತಿನ ಬಲೆಯಲ್ಲಿ ಸಿಕ್ಕಿಸಿದ ನಾವು, ತಕ್ಷಣ ಮಾಗಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದೆವು.

ಮಾಹಿತಿ ಕೇಳಿದ ಮಾಗಡಿ ರಸ್ತೆ ಇನ್ಸ್ಪೆಕ್ಟರ್ ನಮ್ಮ ಉತ್ತಮಕಾರ್ಯಕ್ಕೆ ಕೈಜೋಡಿಸಲು ಒಪ್ಪಿಕೊಂಡರು. ತಮ್ಮ ಪೊಲೀಸ್ ಪಡೆ ಜೊತೆ ಡೀಲ್ ನಡೆಯುತ್ತಿದ್ದ ಜಾಗದ ಮೇಲೆ ರೈಡ್ ಮಾಡಿದ್ರು. ಪೊಲೀಸ್ ಕಾರ್ಯಾಚರಣೆಯಲ್ಲಿ ಆರು ಜನ ಸಿಕ್ಕಿ ಹಾಕಿಕೊಂಡ್ರು. ಆರು ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋದ್ರು.

ಈ ರೀತಿ ಸುವರ್ಣ ನ್ಯೂಸ್ನ ಕವರ್ ಸ್ಟೋರಿ ತಂಡ ನಡೆಸಿರೋ ರಹಸ್ಯ ಕಾರ್ಯಾಚರಣೆಯಲ್ಲಿ ಮತ್ತೊಂದು ದೇಶದ್ರೋಹಿಗಳ ಗ್ಯಾಂಗಿನ ಬಣ್ಣ ಬಯಲಾಯ್ತು. ಇಂಥಾ ಖದೀಮರ ಹೆಡೆಮುರಿ ಕಟ್ಟಲು ಸರ್ಕಾರ ಇನ್ನಷ್ಟು ಕಠಿಣ ಕ್ರಮಕೈಗೊಳ್ಳಲೇ ಬೇಕು.

ವರದಿ: ರಂಜಿತ್ಹಾಗೂಚೇತನ್,ಸುವರ್ಣನ್ಯೂಸ್