ನಿತ್ಯಾನಂದ ಶಿಷ್ಯೆ ಅತ್ಯಾಚಾರ ಪ್ರಕರಣ: ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಸುಪ್ರೀಂ ಸೂಚನೆ

First Published 7, Dec 2017, 3:44 PM IST
Supreme Court Directs to Speed Hearing of Nityananda Case
Highlights

ನಿತ್ಯಾನಂದ ಶಿಷ್ಯೆ ಮೇಲೆ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ರಾಮನಗರ ನ್ಯಾಯಾಲಯಕ್ಕೆ ಸೂಚಿಸಿದೆ.

ಬೆಂಗಳೂರು (ಡಿ.07): ನಿತ್ಯಾನಂದ ಶಿಷ್ಯೆ ಮೇಲೆ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ರಾಮನಗರ ನ್ಯಾಯಾಲಯಕ್ಕೆ ಸೂಚಿಸಿದೆ.

ಯಾವುದೇ ಅಡೆತಡೆ ಇಲ್ಲದೇ ತ್ವರಿತತಿಯಲ್ಲಿ ಪ್ರಕರಣ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್  ಆದೇಶಿಸಿದೆ. ತಾನು ಪುರುಷ ಅಲ್ಲವೆಂದು ನಿತ್ಯಾನಂದ ಅಮೆರಿಕ ಮೂಲದ ವೈದ್ಯರ ದಾಖಲೆ ಸಲ್ಲಿಸಿದ್ದ. ಆದರೆ ವಿಕ್ಟೋರಿಯಾ ಆಸ್ಪತ್ರೆ ಇದನ್ನು ತಳ್ಳಿ ಹಾಕಿದ್ದು ನಿತ್ಯಾನಂದ ಒಬ್ಬ ಪುರುಷ ಎಂದು ವರದಿ ನೀಡಿದೆ. ಈ ಎಲ್ಲದರ ಬಗ್ಗೆ ಯಾವುದೇ ಅಡಚಣೆಗಳಿಲ್ಲದೇ ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ.